
ಚಳ್ಳಕೆರೆ: ನಗರದ ಹೆಗ್ಗೆರೆ ತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಗುರುವಾರ ನಡೆಯುವ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿನಿಯರಿಗೆ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು.



ಕಾರ್ಯಕ್ರಮಕ್ಕೆ ವಿಜ್ಞಾನ ವಿಷಯ ಪರಿವೀಕ್ಷಕ ಗೋವಿಂದಪ್ಪ ಬ್ಯಾಂಡ್ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ವಿದ್ಯಾರ್ಥಿಗಳ ಮನೋ ಸಾಮರ್ಥ್ಯ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಅತ್ಯಂತ ಸಹಕಾರಿಯಾಗಲಿದ್ದು ಪ್ರತಿಯೊಬ್ಬರು ಕ್ರೀಡೆಗಳಲ್ಲಿ ಭಾಗವಹಿಸುವುದು ಅತ್ಯವಶ್ಯಕ ಪ್ರಶಸ್ತಿಗಳನ್ನು ಗೆಲ್ಲದಿದ್ದರೂ ಸಹ ಎಲ್ಲ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ಕಲಿಯಬೇಕು ಎಂದರು.
ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ವಿಶೇಷವಾದಂತಹ ಸ್ಥಾನಮಾನ ನೀಡುವುದರ ಮೂಲಕ ಅವರನ್ನು ಪ್ರೇರೆಪಿಸುವುದರ ಮೂಲಕ ಅವರನ್ನು ಕ್ರೀಡೆಗಳಲ್ಲಿ ಭಾಗವಹಿಸುವಂತೆ ಮಾಡಿ ಅದರಂತೆ ನಿಂಬೆಹಣ್ಣಿನ ಆಟ, ನಾಣ್ಯ ಹೊರ ತೆಗೆಯುವುದು, ಸೂಜಿದಾರ ಪೋಣಿಸುವುದು, ಚೇರ್ ಆಟ, ಹೀಗೆ ಹಲವು ಕ್ರೀಡೆಗಳನ್ನು ಅಡಿಸುವುದರ ಮೂಲಕ ಕ್ರೀಡೆಯಲ್ಲಿ ಪ್ರಥಮ , ದ್ವಿತೀಯ, ಹಾಗೂ ತೃತೀಯ ಸ್ಥಾನ ಬಂದಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಮೂಲಕ ಪ್ರೇರೆಪಣೆ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಎ .ವೀರಣ್ಣ, ಸಹ ಶಿಕ್ಷಕರಾದ ರಾಜಣ್ಣ, ದೈಹಿಕ ಶಿಕ್ಷಕರಾದ ಗಂಗೂಬಾಯಿ ಹಿರೇಮಠ , ಪ್ರಾಣೇಶ್, ಹಾಗೂ ಇನ್ನು ಹಲವು ಸಹ ಶಿಕ್ಷಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
About The Author
Discover more from JANADHWANI NEWS
Subscribe to get the latest posts sent to your email.