
ಹಿರಿಯೂರು:
ಹಾಲು ಉತ್ಪಾದಕ ಸಂಘದ ಷೇರುದಾರರಿಗೆ ಗುಣಮಟ್ಟದ ಹಾಲು ಹಾಗೂ ಒಕ್ಕೂಟದಿಂದ ಸಂಘದ ಹಾಲು ಉತ್ಪಾದಕರಿಗೆ ದೊರೆಯಬಹುದಾದ ಕೆಲವು ಸೌಲಭ್ಯಗಳನ್ನು ಅರಿತು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂಬುದಾಗಿ ಶಿವಮೊಗ್ಗ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಬಿ.ಸಿ.ಸಂಜೀವಮೂರ್ತಿಯವರು ಅವರು ಹೇಳಿದರು.
ತಾಲ್ಲೂಕಿನ ಕಳವಿಭಾಗಿ ಗ್ರಾಮದಲ್ಲಿ ಮಂಗಳವಾರ ನೂತನವಾಗಿ ಪ್ರಾರಂಭವಾದ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಉದ್ಘಾಟಿಸಿ ನಂತರ ಅವರು ಮಾತನಾಡಿದರು.
ಸಂಘದಅಧ್ಯಕ್ಷರಾದ ಜೆ.ರಂಗನಾಥ್ ಮಾತನಾಡಿ, ನಮ್ಮ ಗ್ರಾಮದಲ್ಲೇ ಒಂದು ದಿನಕ್ಕೆ ಸುಮಾರು ನಾನ್ನೂರು ಲೀಟರ್ ಗಳಷ್ಟು ಹಾಲನ್ನು ಶೇಖರಣೆ ಮಾಡಿ ಬೇರೆ ಗ್ರಾಮಕ್ಕೆ ಸರಬರಾಜು ಮಾಡುವ ಕಾರಣ ಹಾಲು ಉತ್ಪಾದಕರಿಗೆ ಬಾಡಿಗೆ ಇತ್ಯಾದಿಗಳ ಖರ್ಚು ಬರುತಿತ್ತು.
ಆದ ಕಾರಣ ಬಹಳ ದಿನಗಳ ನೀರೀಕ್ಷೆಯಂತೆ ನಮ್ಮ ಜಿಲ್ಲಾ ನಿರ್ದೇಶಕರು ಗ್ರಾಮಕ್ಕೆ ಹಾಲು ಉತ್ಪಾದಕ ಸಹಕಾರ ಸಂಘದ ಆಡಳಿತ ಮಂಡಳಿ ಹಾಗೂ ಊರಿನ ಗ್ರಾಮಸ್ಥರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾರ್ಗ ವಿಸ್ತರಣಾಧಿಕಾರಿ ನಯಾಜ್ ಬೇಗ್, ಸಹಾಯಕ ವಿಸ್ತರಣಾಧಿಕಾರಿ ಪೃಥ್ವಿ, ಸಂಘದ ಕಾರ್ಯದರ್ಶಿ ಪಾಂಡುರಂಗ, ಉಪಾಧ್ಯಕ್ಷ ಜಿ.ದೇವರಾಜ್, ಸದಸ್ಯರಾದ ತಿಪ್ಪೇಸ್ವಾಮಿ, ಆನಂದ್, ಶ್ರೀಮತಿ ಲೋಕಮ್ಮ, ಶ್ರೀಮತಿ ಶಶಿಕಲಾ, ಎಸ್.ರಂಗಸ್ವಾಮಿ, ಶ್ರೀಮತಿ ಲಕ್ಷ್ಮಿದೇವಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.