
ಚಳ್ಳಕೆರೆ ನ.13
ಜಾನುವಾರುಗಳು ಕಾಲು ಬಾಯಿ ಜ್ವರಕ್ಕೆ ತುತ್ತಾಗದಂತೆ ತಡೆಗಟ್ಟಲು ಮುನ್ನಚ್ಚರಿಕೆಯಾಗಿ ಲಸಿಕೆ ಹಾಕಿಸುವಂತೆ ಪಶುಸಂಗೋಪನೆ ಸಹಾಯಕ ನಿರ್ದೇಶಕ ಡಾ.ರೇವಣ್ಣ ಕಿವಿಮಾತು ಹೇಳಿದರು.
ತಾಲೂಕಿನ ಹೊಟ್ಟೆಪ್ಪನಹಳ್ಳಿ ಗ್ರಾಮದಲ್ಲಿ ಜಾನುವಾರುಗಳಿಗೆ ಕಾಲು ಬಾಯಿ ಜ್ವರ ಲಸಿಕೆ ಹಾಗೂ ಕುರಿಗಳಿಗೆ ಜಂತುನಿವಾರಕ ಔಷಧಿ ವಿತರಿಸಿ ಮಾತನಾಡಿದರು.
ರೈತರ ಜಾನುವಾರುಗಳು ರೋಗಕ್ಕೆ ತುತ್ತಾಗಿ ಬಹಳಷ್ಟು ಜಾನುವಾರುಗಳು ಅಸು ನೀಗುವುದನ್ನು ಗಮನಿಸಿದ ಸರಕಾರ . ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ನಷ್ಟವು ಉಂಟಾಗುವುದನ್ನು ಗಮನಿಸಿ ಕಾಲು ಬಾಯಿ ಜ್ವರ ಬರದಂತೆ ತಡೆಯಲು ವರ್ಷದಲ್ಲಿ 2 ಬಾರಿ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ ರೈತರು ತಪ್ಪದೆ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಹಾಗೂ ಜಂತುನಿವಾರಕ ಔಷಧಿಯನ್ನು ಕೊಡಿಸುವಂತೆ ತಿಳಿಸಿದರು.
ಹೊಟ್ಟೆಪ್ಪನಹಳ್ಳಿ ಗ್ತಾಮದಲ್ಲಿ ಸುಮಾರು 250 ಜಾನುವಾರುಗಳಿಗೆ ಕಾಲು ಬಾಯಿ ಜ್ವರದ ಲಸಿಕೆ ಹಾಕಲಾಯಿತು
ಹಾಗೂ 4500 ಕುರಿ ಮತ್ತು ಮೇಕೆ ಗಳಿಗೆ ಜಂತು ನಾಶಕ ಔಷಧಿ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಡಾ.ರೇವಣ್ಣ ಪಶು ಅಧಿಕಾರಿ: ಕುರಿ ಸಾಕಾಣಿಕೆ ಮಾಡುವ ರೈತರು ಪಶು ವೈದ್ಯರಿಗೆ ಸನ್ಮಾನ ಮಾಡಿದರು.
ಕಾರ್ಯಕ್ರಮದಲ್ಲಿಈ ಕಾರ್ಯಕ್ರಮದಲ್ಲಿ
ಮುಖ್ಯ ಪಶು ವೈದ್ಯಾಧಿಕಾರಿ ಡಾ.ಶ್ರೀನಿವಾಸ ಬಾಬು
ಗ್ರಾ.ಪಂ.ಸದಸ್ಯರಾದ ನವೀನ್ ಕುಮಾರ್
ಗಟ್ಟಪ್ಪ ‘ಕುಮಾರ್ ಇತರರಿದ್ದರು.








About The Author
Discover more from JANADHWANI NEWS
Subscribe to get the latest posts sent to your email.