March 18, 2026
IMG-20251013-WA02471.jpg

ಚಳ್ಳಕೆರೆ ಅ.12 ಸಾರಿಗೆ ಬಸ್ ಹಾಗೂ ನಾರಾಯಣಪುರ ಬಲದಂಡೆ ನಾಲೆಯ ಫೀಡರ್ ಚಾನಲ್ ಹೂಳೆತ್ತಿಸುವಂತೆ ಶಾಸಕ ಟಿ ರಘುಮೂರ್ತಿಯವರಿಗೆ ಮನವಿ ಸಲ್ಲಿಸಿದರು.

ಚಳ್ಳಕೆರೆ ತಾಲೂಕಿನ ನಾರಾಯಣಪುರ ಪೀಡರ್ ಚಾನಲ್ ಸಿಡ್ಲಯ್ಯನ ಕೋಟೆ ಎಡದಂಡೆ ಪೀಡರ್ ಚಾನಲ್ ನಲ್ಲಿ ಗಿಡಗೆಂಟೆಗಳು ಬೆಳೆದು ಹೂಳು ತುಂಬಿಕೊಂಡಿದ್ದು
ವಾಣಿವಿಲಾಸ ಸಾಗರ ಕೋಡಿಬೀಳವ ಸಂಭವ ಇರುವುದರಿಂದ ವೇದಾವತಿ ನದಿಯ ನೀರನ್ನು ಶಿಡ್ಲಯ್ಯನಕೋಟೆ ನಾರಾಯಣ ಪುರ ಬಲದಂಡೆಯ ಮುಖಾಂತರ ಟಿ ಎನ್ ಕೋಟೆ, ಗೋಸಿಕೆರೆ, ಚೌಳೂರು, ಪರಶುರಾಂಪುರ ಕೆರೆಗಳಿಗೆ ನೀರು ತುಂಬಿಸುವಂತೆ ಮನವಿ ಸಲ್ಲಿದಿದರು.
ಟಿ, ಎನ್, ಕೋಟೆ, ಗೋಸಿಕೆರೆ, ದೊಡ್ಡ ಬೀರನಹಳ್ಳಿ ಗ್ರಾಮಸ್ಥರು ಪರಶುರಾಂಪುರ ಹೋಬಳಿ ಕೇಂದ್ರದಿಂದ ಬೆಂಗಳೂರಿಗೆ ಸಾರಿಗೆ ಬಸ್ಸು ಸೌಕರ್ಯ ಕಲ್ಪಿಸಲು ಒತ್ತಾಯಿಸಿ ಮನವಿ ಸಲ್ಲಿಸಿ ಸಾರಿಗೆ ನಿಗಮದ ಘಟಕ್ಕೆ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿ
ಪರಶುರಾಂಪುರ, ಚೌಳೂರು, ಗೋಸಿಕೆರೆ. ಟಿ ಎನ್ ಕೋಟೆ, ದೊಡ್ಡ ಬೀರನಹಳ್ಳಿ, ದೊಡ್ಡ ಚೆಲ್ಲೂರು, ಮಾರ್ಗವಾಗಿ ಬೆಂಗಳೂರಿಗೆ ಬಸ್ಸು ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಟಿ. ಎನ್ ಕೋಟೆ ಭಗತ್ ಸಿಂಗ್ ರಂಗಸ್ವಾಮಿ, ಉಮಾಮಹೇಶ್ವರಪ್ಪ, ನಾಗೇಂದ್ರಪ್ಪ ಜಯಕುಮಾರ್. ರಾಜಣ್ಣ . ಪಟೇಲ್,
ಚನ್ನಕೇಶವ,ಪರಶುರಾಂಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಂ ಆರ್ ರುದ್ರೇಶ್, ಬಸವರಾಜ ನಿವೃತ್ತ ಪ್ರಾಂಶುಪಾಲ ಶಿವಲಿಂಗಪ್ಪ ಇತರರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading