December 14, 2025

ಚಳ್ಳಕೆರೆ
ಕನ್ನಕ ದಾಸರ ಪುತ್ಥಳಿ ನಿರ್ಮಾಣದ ಜತೆಯಲ್ಲೆ ಮದಕರಿ ನಾಯಕ ಪುತ್ಥಳಿಯ ಸಹ ನಿರ್ಮಾಣಗೊಂಡು ಉದ್ಘಾಟನೆಗೊಳ್ಳಬೇಕಿತ್ತು, ಆದರೆ ಅದೇಕೋ ಮದಕರಿ ನಾಯಕ ಪುತ್ಥಳಿ ನಿರ್ಮಾಣ ಕಾಮಗಾರಿ ಕಾರ್ಯ ತುಂಬ ವಿಳಂಬವಾಗುತ್ತಿದೆ ಎಂದು ಕನ್ನಡ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಹಾಗೂ ವಾಲ್ಮೀಕಿ ನಾಯಕ ಸಮುದಾಯದ ಮುಖಂಡ ಟಿಜೆ ವೆಂಕಟೇಶ ಸ್ವಪ್ನ ಹೇಳಿದರು.

ನಗರದ ವಾಲ್ಮೀಕಿ ವೃತ್ತದಲ್ಲಿ ಇಂದು ನಡೆದ ರಾಜ ವೀರ ಮದಕರಿ ನಾಯಕ ಜಂತೋತ್ಸವ ಕಾರ್ಯಕ್ರಮದಲ್ಲಿ ಮದಕರಿ ನಾಯಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಬರುವ ದಿನಗಳಲ್ಲಿ ವೀರಮದಕರಿ ನಾಯಕ ಜಂತೋತ್ಸವ ಕಾರ್ಯಕ್ರಮ ಮಾಡಲಾಗುತ್ತದೆ. ನಾವು ಸಹ ಮದಕರಿ ನಾಯಕ ಜಂತೋತ್ಸವ ಕಾರ್ಯಕ್ರಮ ಅದ್ದೂರಿಯಗಿ ಮಾಡುತ್ತೆವೆ.ನಗರದಲ್ಲಿ ಈಗಾಗಲೇ ಕನಕದಾಸರ ವೃತ ಪುತ್ಥಳಿ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸಂತಸ ವಿಚಾರ ಆದರೆ ಕನಕದಾಸ ಪುತ್ಥಳಿ ಯ ಜೆತೆಯಲ್ಲಿ ವೀರ ಮದಕರಿ ನಾಯಕ ಪುತ್ತಳಿಗೂ ಸಹ ನಿರ್ಮಾಣಗೊಳ್ಳಬೇಕಿತ್ತು. ಆದರೆ ವಿಳಂಬಕ್ಕೆ ಕಾರಣ ತಿಳಿದು ಬಂದಿಲ್ಲ.
ದಿನಗಳಲ್ಲಿ ಆದರೂ ಪುತ್ಥಳಿ ನಿರ್ಮಾಣದ ಕಾಮಗಾರಿ ಕಾರ್ಯ ತ್ವರಿತವಾಗಿ ಆಗಲಿ ಎಂದು ಮನವಿ ಮಾಡುತ್ತೆನೆ ಎಂದರು.

ವಾಲ್ಮೀಕಿ ನಾಯಕರ ಮುಖಂಡ ಹಾಗೂ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಚೇತನ್ ಕುಮಾರ್ ಕುಮ್ಮಿ ಮಾತನಾಡಿ.ಮಧ್ಯಕಾಲೀನ ಕರ್ನಾಟಕದಲ್ಲಿ ವಿಜಯನಗರೋತ್ತರ ಕಾಲಘಟ್ಟದಲ್ಲಿ ಆಳ್ವಿಕೆ ನಡೆಸಿದ ನಾಯಕ (ಪಾಳೆಯಗಾರ) ಮನೆತನಗಳಲ್ಲಿ ಚಿತ್ರದುರ್ಗ ಸಂಸ್ಥಾನ ಪ್ರಮುಖವಾದದು.ಚಿತ್ರದುರ್ಗವನ್ನು ಕೇಂದ್ರಸ್ಥಾನ ಮಾಡಿಕೊಂಡು 13 ನಾಯಕ ಅರಸರು ಆಳಿದ್ದಾರೆ.

ಕರ್ನಾಟಕದ ರಾಜಕೀಯ ಮತ್ತು ಸಾಂಸ್ಕೃತಿಕ ಚರಿತ್ರೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಚಿತ್ರದುರ್ಗ ನಾಯಕ ಅರಸರಲ್ಲಿ ಕೊನೆಯ ದೊರೆ ರಾಜವೀರ ಮದಕರಿ ನಾಯಕ. ಈತನನ್ನು ಇತಿಹಾಸದಲ್ಲಿ ಚಿಕ್ಕಮದಕರಿ, ಕೊನೇ ಮದಕರಿ, 5ನೇ ಮದಕರಿ, ವೀರಮದಕರಿ ಎಂದೆಲ್ಲಾ ಕರೆಯಲಾಗಿದೆ.ಮದಕರಿ ನಾಯಕ ತನ್ನ ಆಳ್ವಿಕೆ ಅವಧಿಯಲ್ಲಿ ಕೈಗೊಂಡ ಹಲವು ರಾಜಕೀಯ ನಿರ್ಣಯಗಳು ಚಿತ್ರದುರ್ಗ ಸಂಸ್ಥಾನದ ಕೀರ್ತಿಯನ್ನು ದಕ್ಷಿಣ ಭಾರತದಲ್ಲೆಲ್ಲಾ ಹರಡಲು ಕಾರಣವೆನಿಸಿದವು. ಈತನ ಆಳ್ವಿಕೆಯಿಂದಾಗಿಯೆ ಚಿತ್ರದುರ್ಗ ಸಂಸ್ಥಾನವು ಹೆಚ್ಚು ಪ್ರವರ್ಧಮಾನಕ್ಕೆ ಬರಲು ಸಾಧ್ಯವಾಯಿತು ಎಂದರು.

ವಾಲ್ಲೀಕಿ ನಾಯಕ ಸಮುದಾಯದ ಮುಖಂಡ ಪ್ರಶಾಂತ ನಾಯಕ ಮಾತನಾಡಿ ಶ್ರೀರಂಗಪಟ್ಟಣದ ನವಾಬರು ಮತ್ತು ಮರಾಠ ಪೇಶ್ವೆಗಳೊಡನೆ ಈ ನಾಯಕನು ಇಟ್ಟುಕೊಂಡಿದ್ದ ರಾಜಕೀಯ ಬಾಂಧವ್ಯ ಮತ್ತು ನಡೆಸಿದ ಹೋರಾಟಗಳು ಆತನ ರಾಜಕೀಯ ದೂರದೃಷ್ಟಿ ಹಾಗೂ ಶೌರ್ಯ-ಸಾಹಸಗಳನ್ನು ಪ್ರತಿನಿಧಿಸುತ್ತವೆ. ತನ್ನ ಬದುಕಿನ ಬಹುಕಾಲ ಯುದ್ಧೋತ್ಸವಗಳಲ್ಲೆ ಭಾಗಿಯಾಗುತ್ತಿದ್ದ ಮದಕರಿಯು ಸಂಸ್ಥಾನವನ್ನು ಬಲಪಡಿಸುವಲ್ಲಿ, ರಾಜ್ಯವನ್ನು ಸುಭೀಕ್ಷೆಯಿಂದ ಇಟ್ಟುಕೊಳ್ಳುವಲ್ಲಿ ವಹಿಸುತ್ತಿದ್ದ ಪಾತ್ರ ವಿಶೇಷವಾದುದು ಎಂದರು.
ಈ ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು ಹಾಗೂ ಪಿಡಿಓ ರಜನಿಕಾಂತ, ಮುಖಂಡರಾದ ವೀರನಾಯಕ,

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading