
ಚಳ್ಳಕೆರೆ13.ಗ್ರಾಮದ ಮಧ್ಯೆ ಇರುವ ಮದ್ಯದ ಅಂಗಡಿ ತೆರವಿಗೆ ಒತ್ತಾಯಿಸಿ ಗ್ರಾಮಸ್ಥರು ಹಾಗೂ ಗ್ರಾಮಪಂಚಾಯಿತಿ ಸದಸ್ಯರು ಪ್ರತಿಭಟನೆ ನಡೆಸಿದರು.
ಹೌದು ಇದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗೌರಸಮುದ್ರಮಾರಮ್ಮ ದೇವಿಯ ಪುಣ್ಯ ಸ್ಥಳದ ಎಸ್ಟಿ-ಎಸ್ಟಿ ಕಾಲೋನಿ.ಶಾಲೆ ಹಾಗೂ ದೇವಸ್ಥಾನ ಸಮೀಪವಿದ್ದು.
ಜನವಸತಿ ವಸತಿ ಪ್ರದೇಶದಲ್ಲಿ ಮದ್ಯದ ಅಂಗಡಿ ಇರುವುದರಿಂದ ಕುಡುಕರು ಅಕ್ಕಪಕ್ಕದ ಮನೆಗಳ ಮುದೆ ಮೂತ್ರ ವಿಸರ್ಜನೆ ಮಾಡುವುದು. ದೇವಸ್ಥಾನಕ್ಕೆ ಹೋಗಿ ಬರುವ ಮಹಿಳೆಯರು.ವಿದ್ಯಸರ್ಥಿನಿಯರು ಕುಡುಕರ ಹಾವಾಳಿಯಿಂದ ಮುಜುಗರದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರತಿಭಟನೆ ನೇತೃತ್ವ ವಹಿಸಿದ್ದ ಗ್ರಾಪಂ ಅಧ್ಯಕ್ಚ ಓಬಣ್ಣ.ಸದಸ್ಯ ಶಶಿಧರ್ ಮಾತನಾಡಿ ಶಾಲೆಗಳು ಇರುವ ಜಾಗದಲ್ಲಿ ವೈನ್‌ಶಾಪ್ ಅವಕಾಶ ಇಲ್ಲ . ಆದರೆ, ಇಲ್ಲಿರುವ ಮದ್ಯದಂಗಡಿ ಗ್ರಾಮದ ಮಧ್ಯ ಭಾಗದಲ್ಲಿದ್ದು , ಇದರ ಪಕ್ಕದಲ್ಲಿ ದೇವಾಲಯ, ಶಾಲೆಗಳಿವೆ.ಗ್ರಾಮದಲ್ಲಿ ಕುಡುಕರ ಹಾವಳಿ ಜಾಸ್ತಿಯಾಗಿರುವ ಜತೆಗೆಗ್ರಾಮದಲ್ಲಿ ಅಶಾಂತಿ ವಾತಾವರಣ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ನೀಡಲಾಗಿದೆ ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಈಗಲಾದರೂ ಜಿಲ್ಲಾಡಳಿತ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕೂಡಲೇ ಮದ್ಯದ ಅಂಗಡಿ ತೆರವು ಮಾಡಬೇಕು ಎಂದು ಗ್ರಾಮಸ್ಥರು ಹಾಗೂ ಗ್ರಾಮಪಂಚಾಯಿತಿ ಸದಸ್ಯ ಆಗ್ರಹಿಸಿದಾರೆ.












.
About The Author
Discover more from JANADHWANI NEWS
Subscribe to get the latest posts sent to your email.