
ಹಿರಿಯೂರು:
ರೋಟರಿ, ರೆಡ್ ಕ್ರಾಸ್ ಸಂಸ್ಥೆ ಹಾಗೂ ಲಯನ್ಸ್ ಕ್ಲಬ್ ಸಂಸ್ಥೆಗಳು ಸಾರ್ವಜನಿಕರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಆರೋಗ್ಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂಬುದಾಗಿ ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಕೆ.ವಿ. ಅಮರೇಶ್ ಅವರು ಹೇಳಿದರು.
ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ ವಾಸವಿ ವಿದ್ಯಾವರ್ಧಕ ಸಂಘ, ರೋಟರಿಸಂಸ್ಥೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಲಯನ್ಸ್ ಇಂಟರ್ ನ್ಯಾಷನಲ್- ಹಿರಿಯೂರು, ಲಕ್ಷ್ಮೀ ಸರ್ಜಿಕಲ್ ಟ್ರಾಮಾ ಆರ್ಥೋ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ( ಡಾ.ಮುದ್ರಿ)-ರಾಣೆ ಬೆನ್ನೂರು ಶಿಕ್ಷಣ ಸಮಗ್ರಅಭಿವೃದ್ಧಿ ಸೇವಾಸಂಸ್ಥೆ ರಾಣೆಬೆನ್ನೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೊಣಕಾಲು ಮಂಡಿಚಿಪ್ಪು ಮತ್ತು ಚಪ್ಪೆ ಬದಲಾವಣೆ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತಾಡಿದರು.
ಸಾರ್ವಜನಿಕರಿಗಾಗಿ ಪ್ರತಿ ತಿಂಗಳು ವಾಗ್ದೇವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಡಾ.ಸಂಜೀವಮುದ್ರಿ ಆರ್ಥೋ ತಜ್ಞ ವೈದ್ಯರಿಂದ ರೋಗಿಗಳಿಗೆ ಉಚಿತ ತಪಾಸಣೆ ಸೇರಿದಂತೆ ಆಯ್ದ ಜನರಿಗೆ ಉಚಿತ ಶಸ್ತ್ರಚಿಕಿತ್ಸೆಗಳಿಗೂ ಸಹ ಆಯ್ಕೆಮಾಡಲಾಗುತ್ತದೆ. ಇಂತಹ ಸೇವಾ ಸಂಸ್ಥೆಗಳ ಜೊತೆಗೆ ನಾವು ಸಹ ಕೈಜೋಡಿಸಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.
ರಾಜ್ಯ ಮಾದ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಆಲೂರುಹನುಮಂತರಾಯಪ್ಪ ಮಾತನಾಡಿ, ನಗರದಲ್ಲಿ ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳೊಂದಿಗೆ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸುವ ಮೂಲಕ ನಗರದಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಹಾಗೂ ಉಚಿತ ಶಸ್ತ್ರ ಚಿಕಿತ್ಸೆಗಳನ್ನು ನಡೆಸುತ್ತಿದ್ದು, ಇದರಿಂದ ಸಾವಿರಾರು ಬಡಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ಸಿಗುವಂತಾಗಿದೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷರಾದ ಕೆ.ವಿ.ಅಮರೇಶ್, ವಾಣಿವಿಲಾಸ ವಿದ್ಯಾಸಂಸ್ಥೆ ಕಾರ್ಯದರ್ಶಿಗಳಾದ ಆಲೂರುಹನುಮಂತರಾಯಪ್ಪ, ರೆಡ್ ಕ್ರಾಸ್ ವೈಸ್ ಚೇರ್ಮನ್, ಬಿ.ಕೆ.ನಾಗಣ್ಣ, ಪಿ.ಆರ್.ಸತೀಶ್ ಬಾಬು, ರೋಟರಿ ಕಾರ್ಯದರ್ಶಿ ವಿಕಾಸ್ ಜೈನ್, ರೊ|| ಓಂಕಾರ್, ರಾಜೇಶ್, ರಾಣೆಬೆನ್ನೂರು ಲಕ್ಷ್ಮಿ ಸರ್ಜಿಕಲ್ ಟ್ರಾಮಾ ಆರ್ಥೋ ಆಸ್ಪತ್ರೆ ಡಾ.ಸಂಜೀವ ಎಂ.ಮುದ್ರಿ, ಕೋ-ಆರ್ಡಿನೇಟರ್ ವೀರೇಶ್ ಮತ್ತು ಸಿಬ್ಬಂದಿ ಇತರರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.





About The Author
Discover more from JANADHWANI NEWS
Subscribe to get the latest posts sent to your email.