September 13, 2025
IMG-20250913-WA0212.jpg

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ (ಮೈಸೂರು ಜಿಲ್ಲೆ ): ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ನೂತನ ನಿರ್ದೇಶಕರಾದ
ಶ್ರೀ ದೊಡ್ಡಸ್ವಾಮೇಗೌಡರ 75ನೇ ವರ್ಷದ ಹುಟ್ಟುಹಬ್ಬವನ್ನು ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಅಕ್ಟೋಬರ್ 12ರಂದು ಕೃಷ್ಣರಾಜನಗರ ಪಟ್ಟಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರುಗಳು ಹೇಳಿದರು.

ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರುಗಳು ಮಾತನಾಡಿ ದೊಡ್ಡಸ್ವಾಮೇಗೌಡರು ಅಕ್ಟೋಬರ್ 12ಕ್ಕೆ 74 ವರ್ಷಗಳನ್ನು ಪೂರೈಸಿ 75ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳ, ಸದಾ ಜನಪರ ಚಿಂತನೆ ಹಾಗೂ ಸೇವೆಯನ್ನು ಮಾಡಿಕೊಂಡು ಬರುತ್ತಿರುವ
ದೊಡ್ಡಸ್ವಾಮೇಗೌಡರ ಜನ್ಮದಿನವನ್ನು ಕ್ಷೇತ್ರದ ಇತಿಹಾಸದಲ್ಲಿಯೇ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ರೀತಿಯಲ್ಲಿ ಆಚರಿಸಲು ನಾವೆಲ್ಲರೂ ತೀರ್ಮಾನಿಸಿದ್ದೇವೆ. ವೈಯಕ್ತಿಕ ಆಚರಣೆಯ ಬದಲು ಅವರ ಬದುಕಿನ ಸಿದ್ಧಾಂತವನ್ನೇ ಪ್ರತಿಬಿಂಬಿಸುವ ಮೂರು ಬೃಹತ್ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.

  1. ಯುವ ಜನತೆಯ ಭರವಸೆಯ ಬೆಳಕುಬೃಹತ್ ಉದ್ಯೋಗ ಮೇಳ

ನಾಡಿನ ಸುಮಾರು ಐವತ್ತಕ್ಕೂ ಹೆಚ್ಚಿನ ಪ್ರತಿಷ್ಠಿತ ಕಂಪನಿಗಳನ್ನು ಒಂದೇ ಸೂರಿನಡಿ ತಂದು ಸಾವಿರಾರು ನಿರುದ್ಯೋಗಿ ಯುವಕರುಗಳಿಗೆ ಉದ್ಯೋಗವಕಾಶ ಕಲ್ಪಿಸುವ ಮಹದಾಸೆಯಿಂದ ಯುವ ಜನತೆಯ ಭರವಸೆಯ ಬೆಳಕು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

  1. ಆರೋಗ್ಯದ ಆಸರೆ
    ಬೃಹತ್ ಆರೋಗ್ಯ ಶಿಬಿರ

ಬೆಂಗಳೂರು ಮತ್ತು ಮೈಸೂರಿನ ಹೆಸರಾಂತ ವಿವಿಧ ತಜ್ಞ ವೈದ್ಯರುಗಳ ತಂಡದಿಂದ ಹೃದಯ, ಕಣ್ಣು, ದಂತ, ಸ್ತ್ರೀರೋಗ, ಮಕ್ಕಳ ಆರೋಗ್ಯ ಸೇರಿದಂತೆ ಎಲ್ಲಾ ವಿಭಾಗಗಳ ಉಚಿತ ತಪಾಸಣೆ ಮತ್ತು ಔಷಧಿ ವಿತರಣೆಯ ಬೃಹತ್ ಆರೋಗ್ಯ ಶಿಬಿರವನ್ನು ಏರ್ಪಡಿಸಿದ್ದೇವೆ.

  1. ಜೀವದಾನದ ಸಂಕಲ್ಪಬೃಹತ್ ರಕ್ತದಾನ ಶಿಬಿರ

ತಾಲೂಕಿನ ನೂರಾರು ಯುವಕರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ತಮ್ಮ ರಕ್ತವನ್ನು ದಾನ ಮಾಡಿ ಅದೆಷ್ಟೋ ಅಪರಿಚಿತ ಜೀವಗಳಿಗೆ ಮರುಜೀವ ನೀಡುವ ಬೃಹತ್ ರಕ್ತದಾನ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಇದು ಕೇವಲ ರಕ್ತದಾನವಲ್ಲ ಮಾನವೀಯತೆಯ ಮಹಾದಾನವಾಗಿದೆ ಎಂದು ಹೇಳಿದರು.

ಈ ಮೂರು ಕಾರ್ಯಕ್ರಮಗಳು ಕೇವಲ ಯೋಜನೆಗಳಲ್ಲ ಇವು ದೊಡ್ಡಸ್ವಾಮೇಗೌಡರ ಬದುಕಿನ ಸಾರ, ಯುವಕರ ಬಗ್ಗೆ ಅವರಿಗಿರುವ ಕಾಳಜಿ, ಬಡವರ ಆರೋಗ್ಯದ ಬಗ್ಗೆ ಅವರಿಗಿರುವ ಕಳಕಳಿ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಅವರಿಗಿರುವ ಶ್ರದ್ದೆಯ ಪ್ರತೀಕಗಳಿವು ಎಂದರು.

ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ.ರವಿಶಂಕರ್ ಅವರು ಹಾಗೂ ಅವರ ತಂದೆಯವರಾದ
ದೊಡ್ಡಸ್ವಾಮೇಗೌಡರು ಮತ್ತು ಕುಟುಂಬದವರು ನಿರಂತರವಾಗಿ ಜನ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದ ಮುಖಂಡರುಗಳು
ದೊಡ್ಡಸ್ವಾಮೇಗೌಡರ ಜನ್ಮದಿನದಂದು ನಡೆಯುವ ಬೃಹತ್ ಸಮಾಜ ಸೇವಾ ಕಾರ್ಯಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಹಾಗೂ ಅವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಎಮ್ ಸಿ ಡಿ ಸಿ ಸಿ ಬ್ಯಾಂಕ್ ನ ಮಾಜಿ ಉಪಾಧ್ಯಕ್ಷ ಎಸ್.ಸಿದ್ದೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ
ಸಿದ್ದಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಕೆಡಗ ನಟರಾಜ್, ಕಾಂಗ್ರೆಸ್ ಪಕ್ಷದ ಎಸ್ ಟಿ ಘಟಕದ ರಾಜ್ಯ ಉಪಾಧ್ಯಕ್ಷ ಕಲ್ಲಹಳ್ಳಿ ಶ್ರೀನಿವಾಸ್, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಕೆ.ಆರ್.ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಹಾಡ್ಯಮಹದೇವಸ್ವಾಮಿ, ಹೆಚ್.ಟಿ.ಮಂಜಪ್ಪ, ಎಸ್.ಡಿ.ಚಂದ್ರಶೇಖರ, ಮಾಜಿ ಸದಸ್ಯ ಅಂಕನಹಳ್ಳಿ ಎ.ಟಿ.ಗೋವಿಂದೇಗೌಡ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಚೀರನಹಳ್ಳಿ ಶಿವಣ್ಣ, ಕಾಂಗ್ರೆಸ್ ಪಕ್ಷದ ವಕ್ತಾರ ಸೈಯದ್ ಜಾಬೀರ್, ಮುಖಂಡರಾದ
ಎಲ್.ಪಿ.ರವಿಕುಮಾರ್, ಗಂಧನಹಳ್ಳಿ ವೆಂಕಟೇಶ್, ಪುರಸಭಾ ಸದಸ್ಯರುಗಳಾದ ನಟರಾಜ್, ಐದನೇ ವಾರ್ಡಿನ ಶಂಕರ್, ಪುಟ್ಟಣ್ಣ, ವಿನಿತ್, ಲೋಕೇಶ್, ಹನ್ನೆರಡನೇ ವಾರ್ಡಿನ ಶಂಕರ್, ಯುವ ಕಾಂಗ್ರೆಸ್ ಅಧ್ಯಕ್ಷ ಕೆಂಚಿಮಂಜು, ಹಂಪಾಪುರ ವಿ ಎಸ್ ಎಸ್ ಬಿ ಎನ್ ಅಧ್ಯಕ್ಷ ಪ್ರಶಾಂತ್, ಮುಖಂಡರುಗಳಾದ
ಎಸ್‌.ಎಂ.ಪರೀಕ್ಷಿತ್, ಪ್ರಸನ್ನ, ಚಿಬುಕಹಳ್ಳಿ ಬಸವರಾಜ್, ಗಾಯನಹಳ್ಳಿ ನಟರಾಜ್, ಮಿರ್ಲೆ ಸಣ್ಣರಾಮೇಗೌಡ, ದಮ್ಮನಹಳ್ಳಿ ಪಾಲಾಕ್ಷ, ಹೆಬ್ಬಾಳುಸ್ವಾಮಿ, ತಂದ್ರೆ ಧರ್ಮ, ಮುಂಡೂರು ನಾಗೇಗೌಡ, ಪಶುಪತಿರವಿ ಸೇರಿದಂತೆ ಹಲವರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading