September 14, 2025
IMG-20250813-WA0219.jpg

ನಾಯಕನಹಟ್ಟಿ : ಆಗಸ್ಟ್ 15 ರಂದು ಸ್ವಾತಂತ್ರö್ಯ ದಿನಾಚರಣೆಯಂದು ಎಲ್ಲಾರು ಕೈ ಜೋಡಿಸಿ ಅದ್ಧೂರಿಯಾಗಿ ಆಚರಿಸೋಣ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್ ಹೇಳಿದರು.

ಪಟ್ಟಣದ ಎ.ಕೆ. ಕಾಲೋನಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲಾ ಮಕ್ಕಳಿಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳಶ್ರೀಕಾAತ್, ಸದಸ್ಯ ಜೆ.ಆರ್.ರವಿಕುಮಾರ್ ಎಸ್.ಡಿ.ಎಂ.ಸಿ. ಸದಸ್ಯರುಗಳು, ಶಿಕ್ಷಕ, ಶಿಕ್ಷಕಿಯರ ಸಹಯೋಗದೊಂದಿಗೆ ಸಮವಸ್ತçವನ್ನು ವಿತರಿಸಿದರು. ನಂತರ ಮಾತನಾಡಿದ ಅವರು ಮಕ್ಕಳು ಚೆನ್ನಾಗಿ ಓದಬೇಕು, ತಮ್ಮ ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳಬೇಕು. ಮಕ್ಕಳು ಮೊಬೈಲ್‌ನಿಂದ ದೂರವಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಮಕ್ಕಳು ಟಿ.ವಿ, ಮೊಬೈಲ್ ಬಿಟ್ಟು ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಅತೀ ಹೆಚ್ಚು ಮೊಬೈಲ್ ಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಮರಿಣಾಮಗಳು ಬೀರುತ್ತವೆ. ಪ್ರತಿ ದಿನ ಮಕ್ಕಳು ಶಾಲೆಗೆ ಬರಬೇಕು, ಪೋಷಕರು ತಮ್ಮ ಕೆಲಸದ ಮಧ್ಯೆಯೂ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು. ಪ್ರಪಂಚದಲ್ಲಿ ಯಾವುದನ್ನು ಕಳವು ಮಾಡಲಾಗದ ವಸ್ತು ಎಂದರೆ ಅದು ವಿದ್ಯೆ. ವಿದ್ಯೆಯನ್ನು ಯಾರು ಕದಿಯಲು ಸಾಧ್ಯವಿಲ್ಲ. ದುಡ್ಡೆ ದೊಡ್ಡಪ್ಪ ವಿದ್ಯೆ ಅವರಪ್ಪ ಎಂದರು.

9ನೇ ವಾರ್ಡ್ನ ಪಟ್ಟಣ ಪಂಚಾಯಿತಿ ಸದಸ್ಯ ಜೆ.ಆರ್.ರವಿಕುಮಾರ್ ಮಾತನಾಡಿ ಶಿಕ್ಷಕರು ಮತ್ತು ಪೋಷಕರು ಮಕ್ಕಳ ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು. ನಮ್ಮ ಸರ್ಕಾರಿ ಶಾಲೆಯಲ್ಲಿ ಬುದ್ಧಿವಂತ ಮಕ್ಕಳು ಇದ್ದಾರೆ, ಶಿಕ್ಷಕರು ಕೂಡ ಪ್ರೋತ್ಸಾಹ ನೀಡುತ್ತಾರೆ. ನಮ್ಮ ಮಕ್ಕಳು ಯಾವುದರಲ್ಲಿ ಕಡಿಮೆ ಇರಬಾರದು ಮನಸ್ಸಿನಲ್ಲಿ ಬೇರೆ ತರಹದ ಭಾವನೆಗಳು ಅವರಲ್ಲಿ ಬರಬಾರದು. ನನಗೆ ಸರ್ಕಾರಿ ಶಾಲೆಯ ಮಕ್ಕಳೆಂದರೆ ಅಪಾರವಾದ ಪ್ರೀತಿ ಈ ಶಾಲೆಗೆ ನನ್ನ ಪ್ರೋತ್ಸಾಹ ಇದ್ದೇ ಇರುತ್ತದೆ ಎಂದರು. ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದು ಉನ್ನತ ಮಟ್ಟದಲ್ಲಿ ಸಾಗಬೇಕು, ಹಾಗಾಗಿ ಶಿಕ್ಷಕರುಗಳ ಪೋಷಕರು ಮಕ್ಕಳಿಗೆ ಹೆಚ್ಚು ಒತ್ತು ನೀಡಿ. ಸರ್ಕಾರಿ ಶಾಲೆಯಲ್ಲಿ ಓದಿದಂತಹ ಡಾ|| ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ನೆಹರು, ಸರ್.ಎಂ. ವಿಶ್ವೇಶ್ವರಯ್ಯ, ಅಬ್ದುಲ್‌ಕಲಾಮ್ ಇಂತಹ ಮಹನೀಯರೆಲ್ಲರೂ ಓದಿದ್ದು ಸರ್ಕಾರಿ ಶಾಲೆಗಳಲ್ಲೇ ಹಾಗೆಯೇ ಗುರುಗಳು ಹೇಳಿಕೊಟ್ಟಂತಹ ಪಾಠವನ್ನು ಚನ್ನಾಗಿ ಕೇಳಿ ಅರ್ಥಮಾಡಿಕೊಳ್ಳಿ ಜೀವನದಲ್ಲಿ ವಿದ್ಯೆಗೆ ಇದ್ದಂತಹ ಬೆಲೆ ಯಾವುದಕ್ಕೂ ಇಲ್ಲ ಎಂದು ಹೆಮ್ಮೆಯಿಂದ ಹೇಳಿದರು. ಸರ್ಕಾರಿ ಶಾಲೆಯಲ್ಲಿ ಹಾಗೂ ಕಾಲೋನಿಗೆ ಮತ್ತು ಈ ಸರ್ಕಾರಿ ಶಾಲೆಗೆ ನನ್ನ ಸಹಾಯ ಇದ್ದೇ ಇರುತ್ತದೆ ಎಂದು ಭರವಸೆಯಿಂದ ನುಡಿದರು. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಉನ್ನತ ಹುದ್ದೆಗೆ ಏರಬೇಕು, ಒಳ್ಳೆಯ ಹುದ್ದೆಗಳನ್ನು ಪಡೆದು ನಿಮ್ಮ ಪಟ್ಟಣಕ್ಕೆ ನಿಮ್ಮ ಸಂಬAಧಿಕರಿಗೆ ಒಳ್ಳೆಯ ಹೆಸರನ್ನು ತರಬೇಕೆಂದು ವಿನಂತಿಸಿದರು.ಎಸ್.ಡಿ.ಎA.ಸಿ. ಅಧ್ಯಕ್ಷ ನಾಗರಾಜ್ ಮೀಸೆ ಮಾತನಾಡಿ ಸರ್ಕಾರಿ ಶಾಲೆಯೆಂದರೇ ಮೂಗು ಮುರಿಯುವಂತಹ ಕಾಲದಲ್ಲಿ ನಮ್ಮ ಪೋಷಕರು ಮಕ್ಕಳನ್ನು ಸರಿಯಾದ ಸಮಯಕ್ಕೆ ಕಳುಹಿಸಬೇಕು ಮಕ್ಕಳು ಪ್ರತಿದಿನ ಶಾಲೆಗೆ ತಪ್ಪದೇ ಬರಬೇಕು, ಯಾವುದೇ ಹಬ್ಬ-ಹರಿದಿನಗಳು ಇದ್ದರೂ ಸಹ ಮಕ್ಕಳನ್ನು ಹಬ್ಬಕ್ಕೆ ಕರೆದುಕೊಂಡು ಹೋಗಬೇಡಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ. ಖಾಸಗಿ ಶಾಲೆಗೆ ಸೇರಿಸದೇ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಕೊಡಿಸಿ. ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದರೊಂದಿಗೆ ಅವರ ಸರ್ವತೋಮುಖ ಏಳಿಗೆಗೆ ಸಹಕರಿಸಿ. ಶಾಲೆಯಲ್ಲಿ ದಲಿತ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಒಳ್ಳೆಯ ವಿದ್ಯಾಭ್ಯಾಸ ನೀಡುತ್ತಿರುವ ಶಿಕ್ಷಕ ಶಿಕ್ಷಕಿಯರಿಗೆ ಅಭಿನಂದಿಸುತ್ತೇನೆ. ನಮ್ಮ ಸರ್ಕಾರಿ ಶಾಲೆಗೆ ದಾನಿಗಳಿಂದ ಹಾಗೂ ಹಳೇಯ ವಿದ್ಯಾರ್ಥಿಗಳಿಂದ ಸರ್ಕಾರದಿಂದ ಸಿಗಬೇಕಾದಂತಹ ಸೌಲಭ್ಯಗಳನ್ನು ಸಿಗುತ್ತಿರುವುದರಿಂದ ಅವರಿಗೆ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆಂದು ಹೇಳಿದರು.

ಈ ಸಂದರ್ಭದಲ್ಲಿ ಉಪಸ್ಥಿತರಾದ ಶಿಕ್ಷಕರಾದ ಹೇಮಣ್ಣ, ಸದಾಶಿವಯ್ಯ, ಮುರಳಿ, ಶಿಕ್ಷಕಿಯರಾದ ಸಲೀಮಾ, ಸುನಿತ, ಸುಪ್ರಿತ, ಶಾರದಮ್ಮ, ನಿವೃತ್ತ ಶಿಕ್ಷಕರಾದ ನಾಗರಾಜ್ ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading