
ನಾಯಕನಹಟ್ಟಿ : ಹೋಬಳಿಯ ನಾಯಕನಹಟ್ಟಿಯಿಂದ ಜಗಳೂರು ಗಡಿ ರಸ್ತೆ ವರೆಗೆ ವಯಾ ಚನ್ನಬಸಯ್ಯನಹಟ್ಟಿ, ಗೌಡಗೆರೆ, ಜೋಗಿಹಟ್ಟಿ ಮತ್ತು ಮಲ್ಲೂರಹಟ್ಟಿ ಗ್ರಾಮಗಳ ಮೂಲಕ ಹಾದು ಹೋಗಿರುವ ಜಿಲ್ಲಾ ಮುಖ್ಯ ರಸ್ತೆಗೆ ಮಳೆಗಾಲದಲ್ಲಿ ರಸ್ತೆ ಡಾಂಬರೀಕರಣ ಮಾಡಿರುವುದು ಸಮಂಜಸವೇ ಶಾಸಕರೇ ಉತ್ತರಿಸಿ ಎಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿ ಪಟೇಲ್ ಕೆ ಬಿ ಕೃಷ್ಣೇಗೌಡ ಪ್ರಶ್ನೆ ಮಾಡಿದರು.
ಮುಂದುವರೆದು ಮಾತನಾಡಿದ ಅವರು ಜಗಳೂರು ಗಡಿಯಿಂದ ಮಲ್ಲೂರಹಟ್ಟಿ, ಜೋಗಿಹಟ್ಟಿ, ಗೌಡಗೆರೆ, ಚನ್ನಬಸಯ್ಯನ ಹಟ್ಟಿ ಗ್ರಾಮಗಳ ಮುಖಂತರ ನಾಯಕನಹಟ್ಟಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಡಾಂಬರೀಕರಣವನ್ನು 9 ಕಿ.ಮೀ ಗೆ ಎರಡು ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿತ್ತು. ಇದರಲ್ಲಿ ಟೆಂಡರ್ ಪಡೆದ ಗುತ್ತಿಗೆದಾರ ಕೇವಲ 2.5 ಕಿಲೋಮೀಟರ್ ರಸ್ತೆ ಡಾಂಬರೀಕರಣ ಮಾಡಿ ಪೂರ್ಣಗೊಳಿಸಿರುತ್ತಾರೆ. ಅದು ಮಳೆಗಾಲದಲ್ಲಿ, ಜಿಲ್ಲಾ ಪ್ರತಿಷ್ಠಾನ ಅನುದಾನದ ಮಾನದಂಡದ ಅನುಸಾರ ಮಳೆಗಾಲದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ. ಪ್ರಧಾನ ಮಂತ್ರಿ ಕಲ್ಯಾಣ ಯೋಜನೆಯಲ್ಲಿ ಸ್ಪಷ್ಟವಾಗಿ ಸೂಚಿಸಿದ್ದರು ಕೂಡ ಲೋಕಪಯೋಗಿ ಇಲಾಖೆ ಇಂಜಿನಿಯರ್ ಹಕೀಮ್ ಅವರು ಗುತ್ತಿಗೆದಾರರೊಂದಿಗೆ ಸೇರಿಕೊಂಡು ಅಕ್ರಮ ಎಸಗಿರುತ್ತಾರೆ. ಈ ಅಕ್ರಮವನ್ನು ನಡೆಸಿರುವುದರಿಂದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್ ವೈ ಗೋಪಾಲಕೃಷ್ಣ ರವರ ಸಹಕಾರವಿಲ್ಲದೆ ಈ ಅಕ್ರಮ ನಡೆದಿರಲು ಸಾಧ್ಯವಿಲ್ಲ. ನಾನು ಬ್ರಷ್ಟಾಚಾರ ರಹಿತ ಮತ್ತು ಶುದ್ಧ ಆಡಳಿತ ನಡೆಸಿರುವ ಶಾಸಕ ಎಂದು ಬಡಾಯಿ ಕೊಚ್ಚಿಕೊಳ್ಳುವ ಎನ್ ವೈ ಗೋಪಾಲಕೃಷ್ಣರವರೇ ನಿಮಗೆ ನೈತಿಕತೆ ಇದ್ದರೆ ಈ ಕಾಮಗಾರಿಯಿಂದ ಕಿಕ್ ಬ್ಯಾಕ್ ಪಡೆದಿಲ್ಲ ಎಂದಾದರೆ ಈ ಅಕ್ರಮದಲ್ಲಿ ಭಾಗಿಯಾಗಿರುವ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಹಕೀಮ್ ರವರನ್ನು ಕೂಡಲೇ ಅಮಾನತುಗೊಳಿಸಿ ಸೂಕ್ತ ಇಲಾಖೆಯ ತನಿಖೆಯನ್ನು ನಡೆಸಬೇಕು. ಒಂದು ಒಮ್ಮೆ ಏನು ಕ್ರಮ ಕೈಗೊಳ್ಳದಿದ್ದ ಪಕ್ಷದಲ್ಲಿ ನೀವು ಈ ಅಕ್ರಮ ಕಾಮಗಾರಿಗೆ ಶಾಮಿಲ್ ಆಗಿರುವುದು ಮತ್ತು ಕಿಕ್ ಬ್ಯಾಕ್ ಪಡೆದಿರುವುದು ಒಪ್ಪಿಕೊಂಡಂತೆ ಆಗುತ್ತದೆ ಎಂದು ಶಾಸಕರ ಮೇಲೆ ಗಂಭೀರ ಆರೋಪ ಮಾಡಿದರು.
About The Author
Discover more from JANADHWANI NEWS
Subscribe to get the latest posts sent to your email.