September 14, 2025
1755042512886.jpg

ಸ್ವಚ್ಛತೆಯೊಂದಿಗೆ ಸ್ವಾತಂತ್ರ್ಯದ ಉತ್ಸವ
– ಜಿ.ಪಂ ಸಿಇಒ ಡಾ.ಎಸ್.ಆಕಾಶ್



ಚಿತ್ರದುರ್ಗಆಗಸ್ಟ್12:
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಜಿಲ್ಲೆಯಲ್ಲಿ “ಹರ್ ಘರ್ ತಿರಂಗಾ, ಹರ್ ಘರ್ ಸ್ವಚ್ಛತಾ, ಸ್ವಚ್ಛತೆಯೊಂದಿಗೆ ಸ್ವಾತಂತ್ರ್ಯದ ಉತ್ಸವ” ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್. ಆಕಾಶ್ ತಿಳಿಸಿದ್ದಾರೆ.
79ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ದೇಶಾದ್ಯಂತ ಗ್ರಾಮೀಣ ಜನರಲ್ಲಿ ನೀರು ಮತ್ತು ನೈರ್ಮಲ್ಯ ಕುರಿತು ಹೆಚ್ಚಿನ ಅರಿವು ಮೂಡಿಸುವ ಉದ್ದೇಶದೊಂದಿಗೆ “ಹರ್ ಘರ್ ತಿರಂಗಾ, ಹರ್ ಘರ್ ಸ್ವಚ್ಛತಾ, ಸ್ವಚ್ಛತೆಯೊಂದಿಗೆ ಸ್ವಾತಂತ್ರ್ಯದ ಉತ್ಸವ ಆಚರಣೆ ಎಂಬ ಘೋಷವಾಕ್ಯದಡಿ ಆಗಸ್ಟ್ 08ರಿಂದ ಅಭಿಯಾನ ಪ್ರಾರಂಭವಾಗಿದ್ದು, ಆಗಸ್ಟ್ 15 ರವರೆಗೆ ಅಭಿಯಾನ ನಡೆಯಲಿದೆ.
ಈ ಅಭಿಯಾನದ ಅಡಿಯಲ್ಲಿ ಗ್ರಾಮ ಮತ್ತು ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛ ಸುಜಲ್ ಗ್ರಾಮ ಪ್ರತಿಜ್ಞೆಗಳು, ಸಮುದಾಯ ಶುಚಿತ್ವ ಅಭಿಯಾನಗಳು, ವಾಶ್ ಆಸ್ತಿಗಳು ಶುಚಿಗೊಳಿಸುವಿಕೆ, ಅರಿವು ಮೂಡಿಸುವ ಚಟುವಟಿಕೆಗಳು, ಜಲ ಸಂರಕ್ಷಣೆ ಮತ್ತು 2025ರ ಆಗಸ್ಟ್ 15ರಂದು ಅಮೃತ್ ಸರೋವರಗಳು, ಸಾರ್ವಜನಿಕ ಸ್ಥಳಗಳು ಇತ್ಯಾದಿ ಪ್ರಮುಖ ವಾಶ್ ಮೂಲಸೌಕರ್ಯ ಸ್ಥಳಗಳಲ್ಲಿ ಧ್ವಜಾರೋಹಣ ಸಮಾರಂಭ ಆಯೋಜನೆ ಮಾಡುವುದು.
ಹರ್ ಘರ್ ತಿರಂಗಾ, ಹರ್ ಘರ್ ಸ್ವಚ್ಛತಾ, ಸ್ವಚ್ಛತೆಯೊಂದಿಗೆ ಸ್ವಾತಂತ್ರ್ಯದ ಉತ್ಸವ ಅಭಿಯಾನದಲ್ಲಿ ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯತ್‍ಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಹಾಗೂ ಸ್ಥಳೀಯ ಸಂಸ್ಥೆಗಳು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳು, ಸ್ವ-ಸಹಾಯ ಸಂಘದ ಗುಂಪುಗಳು, ಪಂಚಾಯತ್ ರಾಜ್ ಸಂಸ್ಥೆಗಳು, ಶಾಲಾ ಮಕ್ಕಳು, ಸ್ವಯಂ ಸೇವಕರು ಮತ್ತು ಮುಂಚೂಣಿ ಕಾರ್ಯಕರ್ತರು ಈ ಅಭಿಯಾನದಲ್ಲಿ ಸಕ್ರಿಯಾಗಿ ಪಾಲ್ಗೊಂಡು ಅಭಿಯಾನ ಯಶಸ್ವಿಗೊಳಿಸಬೇಕು.
ಅಭಿಯಾನದ ಅಂಗವಾಗಿ ಅಧಿಕಾರಿಗಳು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಸಮುದಾಯದ ಸದಸ್ಯರು ಮತ್ತು ಶಾಲಾ ಮಕ್ಕಳು ಸೇರಿ ಸ್ವಚ್ಛ ಸುಜಲ್ ಗ್ರಾಮ ಪ್ರತಿಜ್ಞೆ ವಿಧಿ ಸ್ವೀಕಾರ ಮಾಡುವುದು. ಸಮುದಾಯದ ಶುಚಿತ್ವ ಅಭಿಯಾನ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ, ಅರಿವು ಮೂಡಿಸುವ ಚಟುವಟಿಕೆಗಳು, ಚರಂಡಿಗಳ ಸ್ವಚ್ಛತೆ, ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆಯ ಅಭಿಯಾನ ಹಮ್ಮಿಕೊಳ್ಳವುದು. ವಾಶ್ ಮೂಲ ಸೌಕರ್ಯ ಶುಚಿತ್ವ ದಿನ, ಜೆಜೆಎಂ ಮೂಲ ಸೌಕರ್ಯದ ಮೇಲೆ ವಿಶೇಷ ಗಮನಹರಿಸುವುದು. ಸ್ವಚ್ಛತಾ ಸಂವಾದ ಮತ್ತು ಅರಿವು ದಿನ ಆಯೋಜಿಸುವುದು ಹಾಗೂ ಆಗಸ್ಟ್ 15ರಂದು ವಾಶ್ ಮೂಲ ಸೌಕರ್ಯ ಸಾರ್ವಜನಿಕ ಸ್ಥಳಗಳಾದ ಗ್ರಾಮ ಪಂಚಾಯತ್ ಕಟ್ಟಡ ಮತ್ತು ಇತರೆ ಸರ್ಕಾರಿ ಕಟ್ಟಡಗಳು, ಅಮೃತ್ ಸರೋವರಗಳು ಇತ್ಯಾದಿಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಹರ್ ಘರ್ ತಿರಂಗಾ ಅಭಿಯಾನದ ಅಡಿಯಲ್ಲಿ ಗುರುತಿಸಲಾದ ಸ್ಥಳಗಳಲ್ಲಿ (ವೈಯಕ್ತಿಕ ಮನೆಗಳು) ಧ್ವಜಾರೋಹಣ ನೆರವೇರಿಸುವುದು. ಸ್ವಚ್ಛತಾ ಚಾಂಪಿಯನ್ ಮತ್ತು ಸ್ವಯಂ ಸೇವಕರ ಕೊಡುಗೆಗಳನ್ನು ಗುರುತಿಸಿ ಸನ್ಮಾನಿಸುವುದು. ಈ ಅಭಿಯಾನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಸಂಜೀವಿನಿ ಯೋಜನೆಯ ಸ್ವ ಸಹಾಯ ಸಂಘದ ಸದಸ್ಯರು, ಯುವಕರು, ಗ್ರಾಮಸ್ಥರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ತಿಳಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading