
ಸವಲತ್ತು
ಕೊಟ್ಟಿದೆ ಸರಕಾರ,
ಎಲ್ಲರಿಗೆ ಎಲ್ಲದು ಫ್ರೀ ಫ್ರೀ,
ಮಾತಾಡ್ಸಿದ್ರೆ ತೋರಿಸ್ತಾರೆ,
ಜನರೆಲ್ಲ ದೌಲತ್ತು,
ಇಂದಲ್ಲ ದುಡಿತಿದ್ರು ಜನ,
ದುಡಿಯೋ ಕಿತ್ತು ಜರೂರತ್ತು,
ಈಗ ಕುಳಿತು ತಿನ್ನಲು ಮಾಡ್ತಾರೆ,
ಮೈಗಳ್ಳರೆಲ್ಲ ಮಸ ಲತ್ತು
ಕುಡಿದು ತೂರಾಡೋಕೆ ಮಾಡ್ತಾರೆ,
ಎಲ್ಲರೂ ಕರಾಮತ್ತು,
ನೋಡಿ ನೋಡಿ ಮಹಿಳೆಯರಿಗೆಲ್ಲ,
ಆಗಿಹೋಗಿದೆ ಜೀವನವೇ ಬೇಸತ್ತು
ಸುಸ್ತು ಸುಸ್ತು,
ದೇವರಿಗಿಲ್ಲ ಘಂಟಾ ನಾದ
ಬರಿಸುತ್ತಿದ್ದಾರೆ ಈಗೆಲ್ಲಾ,
ಗ್ಯಾರಂಟಿ ಭಾಗ್ಯಕ್ಕೆ ಘಂಟೆ,
ಎತ್ತ ನೋಡಿದರು
ಮೈಗಳ್ಳರದೇ ಸಂತೆ,
ಯಾರಿಗೂ ಇಲ್ಲ ಮುಂದಿನ ಜೀವನದ ಚಿಂತೆ,
ಇದಕ್ಕೆಲ್ಲಾ ಕಾರಣ ಈಗಿನ,
ಸರಕಾರದ ಫ್ರೀ ಸವಲತ್ತು
ಫ್ರೀ ಸವಲತ್ತು.
ನಾಗರತ್ನ ಕೊಟ್ರೇಶ್ ಸೊಕ್ಕೆ
About The Author
Discover more from JANADHWANI NEWS
Subscribe to get the latest posts sent to your email.