
ವರದಿ. ಕೆ.ಟಿ.ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ:: ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಸೋಲಿನಿಂದ ದೃತಿಗಿಡದೇ ಮುನ್ನುಗ್ಗಿದಾಗ ಮಾತ್ರ ಗೆಲವು ಸಾಧ್ಯವಾಗುತ್ತದೆ ಎಂದು ಎನ್ ದೇವರಹಳ್ಳಿ ಪಿಡಿಒ ಕೆ.ಓ. ಶಶಿಕಲಾ ಹೇಳಿದರು.




ಶುಕ್ರವಾರ ಹೋಬಳಿಯ ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತಿಪ್ಪಯ್ಯನ ಕೋಟೆ ಗ್ರಾಮದಲ್ಲಿ ಶ್ರೀ ಮಾರುತಿ ಕ್ರಿಕೆಟರ್ಸ್ ವತಿಯಿಂದ ಎರಡನೇ ಬಾರಿ ಟಿಪಿಎಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು ಗ್ರಾಮೀಣ ಪ್ರದೇಶದ ಯುವಕರು ಕ್ರಿಕೆಟ್ ಕಬಡ್ಡಿ ಸೇರಿದಂತೆ ಇತರೆ ದೇಸಿ ಕ್ರೀಡೆಗಳತ್ತ ಮುಖ ಮಾಡಬೇಕು ಕ್ರಿಕೆಟ್ ಆಟಕ್ಕೆ ಉತ್ತೇಜನ ನೀಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು ರಾಷ್ಟ್ರ ರಾಜ್ಯ ಮಟ್ಟಕ್ಕೆ ತಲುಪುವ ನಿಟ್ಟಿನಲ್ಲಿ ಕ್ರಿಕೆಟ್ ಕ್ರೀಡೆಕೂಟವನ್ನು ಪ್ರೋತ್ಸಾಹಿಸುವಂತೆ ಯುವಕರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಸರಿತಾಭಾಯಿ ರಾಜ ನಾಯ್ಕ, ಮಾಜಿ ಉಪಾಧ್ಯಕ್ಷೆ ಹಾಲಿ ಸದಸ್ಯೆ ಕೃಷ್ಣವೇಣಿ ಎಚ್ ರಾಜು, ಹಾಗೂ ತಿಪ್ಪಯ್ಯನ ಕೋಟೆ ಗ್ರಾಮ ಪಂಚಾಯತಿ ಸದಸ್ಯರು. ಮತ್ತು ಪ್ರಥಮ ಬಹುಮಾನ ದಾನಿಗಳಾದ ಗಣಕಯಂತ್ರ ನಿರ್ವಾಹಕ ಎನ್. ದೇವರಹಳ್ಳಿ ಸಂತೋಷ್, ದ್ವಿತೀಯ ಬಹುಮಾನ ದಾನಿಗಳಾದ ಆದ್ಯಾಪ್ಪ ನಾಗರಾಜ್, ತೃತೀಯ ಬಹುಮಾನ ದಾನಿಗಳಾದ ಪ್ರಕಾಶ್, ಸೇರಿದಂತೆ ಸಮಸ್ತ ತಿಪ್ಪಯ್ಯನ ಕೋಟೆ ಗ್ರಾಮಸ್ಥರು ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ರಘು, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.