September 15, 2025
IMG-20250513-WA0242.jpg

ಚಳ್ಳಕೆರೆ:
ಒಳಮೀಸಲಾತಿಗಾಗಿ ಜರುಗುತ್ತಿರುವ ಜಾತಿ ಸಮೀಕ್ಷೆಯಲ್ಲಿ ಅಧಿಕಾರಿಗಳ ತಪ್ಪು ಮಾಹಿತಿಯಿಂದ ಸಮಾಜದಲ್ಲಿ ಅಸ್ಪೃಶ್ಯರನ್ನಾಗಿ ಕಾಣುತ್ತಿರುವ ಮಾದಿಗ ಮತ್ತು ಛಲವಾದಿ ಜನಾಂಗಕ್ಕೆ ನ್ಯಾಯ ಸಿಗುವ ನಿರೀಕ್ಷೆ ಇಲ್ಲ ಎಂದು ತಾಲೂಕು ಛಲವಾದಿ ಮಹಾಸಭಾ ಸಂಘಟನಾ ಕಾರ್ಯದರ್ಶಿ ಕೆ. ದೇವರಾಜ್ ಗಂಭೀರ ಆರೋಪ ಮಾಡಿದ್ದಾರೆ.
ಊರುಗಳಲ್ಲಿ ಮಾದಿಗ ಮತ್ತು ಛಲವಾದಿ ಜನಾಂಗವನ್ನು ಪ್ರತ್ಯೇಕ ಹಟ್ಟಿಗಳಾಗಿ ನೋಡಲಾಗುತ್ತಿದೆ. ಆದರೆ, ಜಾತಿ ಸಮೀಕ್ಷೆಯ ಸಾಮಾಜಿಕ ಬಹಿಷ್ಕಾರ ಇದೆಯೆ ಎನ್ನುವ ಕಾಲಂನಲ್ಲಿ ಅಧಿಕಾರಿಗಳು ಇಲ್ಲ ಎಂದು ನಮೂದು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸಾಮಾಜಿಕ ನೋವು ಅನುಭವಿಸುತ್ತಿರುವ ಜಾತಿಗಳಿಗೆ ಸಮೀಕ್ಷೆಯಲ್ಲಿ ನ್ಯಾಯ ಸಿಗುವ ಭರವಸೆ ಇಲ್ಲ. ಕೂಡಲೇ ಮೇಲಾಧಿಕಾರಿಗಳು ಕ್ರಮ ವಹಿಸಬೇಕು. ಬಹಿರಂಗ ಕಾರ್ಯಕ್ರಮಗಳು, ದೇವಾಲಯ ಪ್ರವೇಶ ಮತ್ತು ಜಾತ್ರೆ ಉತ್ಸವಗಳಲ್ಲಿ ಭಿನ್ನವಾಗಿ ನಡೆಸಿಕೊಳ್ಳಲಾಗುತ್ತದೆ. ಇಂತಹ ವಾಸ್ತವ ಪರಿಸ್ಥಿತಿಯನ್ನು ಆಯೋಗಕ್ಕೆ ಸಮೀಕ್ಷೆ ಮೂಲಕ ಸತ್ಯ ತಿಳಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದ್ದಾರೆ.
ವಕೀಲ ಡಿ.ಆರ್. ರವೀಂದ್ರ ಮಾತನಾಡಿ, ಉಪಜಾತಿ ೦೨೭.೧ರ ಕಾಲಂನಲ್ಲಿ ಛಲವಾದಿ ಎಂದು ಬರೆಸಬೇಕು. ಸಂವಿಧಾನದ ಪ್ರಕಾರ ಮಾತ್ರ ಜಾತ್ಯಾತೀತ ರಾಷ್ಟç ಎಂದು ಕರೆಯಲಾಗಿದೆ. ಆದರೆ, ಸಮಾಜದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆ ಜೀವಂತವಾಗಿದೆ. ಇದರಿಂದ ಮಾದಿಗ, ಛಲವಾದಿಗರನ್ನು ಎಡ ಮತ್ತು ಬಲ ಎಂದು ಕರೆಯಲಾಗುತ್ತಿದೆ. ಈಗಲೂ ಎರಡೂ ಜಾತಿಗಳನ್ನು ಅಸ್ಪೃಶ್ಯರನ್ನಾಗಿ ಕಾಣಲಾಗುತ್ತಿದೆ. ಒಳಮೀಸಲಾತಿ ಜಾರಿ ಮೂಲಕ ಸಮಾಜದ ಸಾಮಾಜಿಕ ಬದಲಾವಣೆ ಆಗಬೇಕಿದೆ. ಜಾಗೃತಿ ಇಲ್ಲದ ಅವಿದ್ಯಾವಂತ ಜನಾಂಗದಲ್ಲಿ ಸಮೀಕ್ಷೆ ರೂಪದಲ್ಲಿ ದಾರಿ ತಪ್ಪಿಸುವ ಕೆಲಸವಾಗುತ್ತಿದೆ. ಸಾಮಾಜಿಕ ಬಹಿಷ್ಕಾರ ಅನುಭವಿಸುತ್ತಿರುವ ಎಡ ಮತ್ತು ಬಲ ಜಾತಿಗಳಿಗೆ ಸಮೀಕ್ಷೆಯಲ್ಲಿ ನ್ಯಾಯ ಸಿಗಬೇಕು. ಈಗಾಗಲೇ ತಾಲೂಕಿನ ಪ್ರತೀ ಗ್ರಾಮಗಳಿಗೂ ಪ್ರಚಾರ ಕೈಗೊಂಡು ಉಪಜಾತಿ ಛಲವಾದಿ ಎಂದು ಬರೆಸಬೇಕು. ಸಾಮಾಜಿಕ ಬಹಿಷ್ಕಾರ ನಮ್ಮ ನಿತ್ಯ ಬದುಕಿನ ಒಂದು ಭಾಗವಾಗಿದೆ ಎಂದು ಸಮೀಕ್ಷೆದಾರರಿಗೆ ಹೇಳುವಂತೆ ಜಾಗೃತಿ ಮಾಡಲಾಗಿದೆ. ೧೦೧ ಪರಿಶಿಷ್ಟ ಜಾತಿಯಲ್ಲಿ ಸಹೋದರ ಜಾತಿಗಳಾಗಿರುವ ಎಡ ಮತ್ತು ಬಲ ಜನಾಂಗಕ್ಕೆ ಶೈಕ್ಷಣಿಕ ಮತ್ತು ಉದ್ಯೋಗ ಅವಕಾಶ ಸಿಗಬೇಕು. ಸಮೀಕ್ಷೆ ಕುರಿತಾಗಿ ಜನಾಂಗದಲ್ಲಿ ಇನ್ನಷ್ಟು ಜಾಗೃತಿಗಾಗಿ ಸಮುದಾಯ ಸಂಘಟಿತ ಕಾರ್ಯ ಮಾಡಬೇಕಿದೆ ಎಂದರು.
ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಇ. ರಾಮಕೃಷ್ಣಪ್ಪ, ಉಪಾಧ್ಯಕ್ಷ ಎನ್. ಕುಶ, ಮಹಿಳಾ ಜಿಲ್ಲಾ ಘಟಕ ಅಧ್ಯಕ್ಷೆ ಎಸ್. ಮಂಜುಳಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂಕಾರಮೂರ್ತಿ, ಮೂಡಲಗಿರಿಯಪ್ಪ, ಅನಂತ, ಗುರುಸ್ವಾಮಿ, ನರಸಿಂಹಮೂರ್ತಿ ಮತ್ತಿತರರಿದ್ದರು.
ಎನ್. ಕುಶ, ಓಂಕಾರಮೂರ್ತಿ ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading