ಶಿವಮೊಗ್ಗ,ಮಾರ್ಚ್ 13 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಯ ಪ್ರಭಾರವನ್ನು ಧನಂಜಯ ಬಿ ರವರು ಶುಕ್ರವಾರ ವಹಿಸಿಕೊಂಡಿದ್ದಾರೆ.
ಇವರಿಗೆ ಸಂಬಂಧಿಸಿದ ಸರ್ಕಾರಿ, ಅರೆ ಸರ್ಕಾರಿ ಹಾಗೂ ಇವರಿಗೆ ಸಂಬಂಧಿಸಿದ ಪತ್ರ ವ್ಯವಹಾರವನ್ನು ಇವರ ಹೆಸರು ಮತ್ತು ಹುದ್ದೆಯ ಹೆಸರಿನಲ್ಲಿ ಕಳುಹಿಸಲು ವಾರ್ತಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿವಿಧೆಡೆ ಕಾರ್ಯನಿರ್ವಹಣೆ : ಬಿ ಧನಂಜಯರವರು ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳಲ್ಲಿ ವಾರ್ತಾಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ.
2001 ರಿಂದ 2005 ರವರೆಗೆ ಶಿವಮೊಗ್ಗ ವಾರ್ತಾ ಇಲಾಖೆ ಕಚೇರಿಯಲ್ಲಿ ವಾರ್ತಾ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು.
‘ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡುವುದು, ಅರ್ಹ ಪತ್ರಕರ್ತರಿಗೆ ಇಲಾಖೆಗಳ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಣೆ ಮಾಡಲಾಗುವುದು’ ಎಂದು ಧನಂಜಯ ಬಿ ರವರು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.
#shimoga #shivamogga #ಶಿವಮೊಗ್ಗ #NewsUpdate #newsfeed
About The Author
Discover more from JANADHWANI NEWS
Subscribe to get the latest posts sent to your email.