ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯಲ್ಲಿ ಬೇಸಿಗೆಯ ತೀವ್ರ ಬಿಸಿಲಿನಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ರಾಜ್ಯದಲ್ಲೇ ಅತಿ ಕಡಿಮೆ ಮಳೆಯಾಗುವ ಪ್ರದೇಶವೆಂದು ಹೆಸರು ಪಡೆದಿರುವ ಈ ಬರದ ನಾಡಿನಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ.

ಈ ಹಿನ್ನೆಲೆ ಹೋಬಳಿ ಹಾಗೂ ಪಟ್ಟಣದ ಜನರು ಬಿಸಿಲಿನಿಂದ ತಾತ್ಕಾಲಿಕ ಉಪಶಮನ ಪಡೆಯಲು ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ರಸ್ತೆ ಬದಿಯ ಅಂಗಡಿಗಳಲ್ಲಿ ಕಲ್ಲಂಗಡಿ ಹಣ್ಣು, ಎಳನೀರು, ಕಬ್ಬಿನ ರಸ ಹಾಗೂ ಐಸ್‌ಕ್ರೀಮ್‌ಗಳಿಗೆ ಹೆಚ್ಚಿನ ಬೇಡಿಕೆ ಕಾಣಿಸುತ್ತಿದೆ.
ಬೇಸಿಗೆಯ ಉರಿ ಹೆಚ್ಚಾಗುತ್ತಿದ್ದಂತೆ ಜನರು ತಂಪು ಪಾನೀಯಗಳನ್ನು ಸೇವಿಸುವ ಮೂಲಕ ದೇಹದ ಉಷ್ಣತೆಯನ್ನು ತಗ್ಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.