ಚಳ್ಳಕೆರೆ: ವಿಕಲತೆ ದೇಹಕ್ಕೆ ಮಾತ್ರ ಅವರಲ್ಲಿ ಬುದ್ದಿ ಶಕ್ತಿ ಹೆಚ್ಚಾಗಿರುತ್ತದೆ
ಅಂಗವಿಕಲ ಮಕ್ಕಳ ಕ್ರಿಯಾಶೀಲತೆ ಪ್ರೋತ್ಸಹ ನೀಡಬೇಕಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಉಪಾಧ್ಯಕ್ಷೆ ಬಿ.ಎಂ. ಭಾಗ್ಯಮ್ಮ ಅಭಿಪ್ರಾಯಪಟ್ಟರು.
ಚಳ್ಳಕೆರೆ ನಗರದ ವೆಂಕಟೇಶ್ವರ ನಗರದಲ್ಲಿರುವ ಕಿವುಡ, ಮೂಗರ ಶಾಲಾ ಮಕ್ಕಳೊಂದಿಗೆ ತಾಲೂಕು ವೀರಶೈವ ಮಹಾಸಭಾ ಮಹಿಳಾ ಘಟಕ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ




ಮಹಿಳಾ ದಿನಚರಣೆ ಅಂಗವಾಗಿ ಮಕ್ಕಳಿಸಿ ಸಿಹಿ ಊಟ ವಿತರಿಸಿ ಮಾತನಾಡಿದರು.
ಚಿಕ್ಕ ವಯಸ್ಸಿನಲ್ಲಿ ಅಂಗವಿಕಲತೆ ನೆಪ ಹೇಳಿಕೊಂಡು ಕುಂಠಿತವಾಗಬಾರದು. ಸರ್ಕಾರದಿಂದ ದೊರೆಯುವ ವಿಶೇಷ ಸೌಕರ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಅಂಗವಿಕಲತೆ ಮಕ್ಕಳಿಗೆ ಅವಕಾಶಗಳು ಕಲ್ಪಿಸುವ ಮೂಲಕ ಸಮಾನವಾಗಿ ಕಾಣಬೇಕು. ವಯೋವೃದ್ದರು, ಅಂಗವಿಕಲರನ್ನು ಮಾನವೀಯ ದೃಷ್ಟಿಯಲ್ಲಿ ನೋಡುವ ಮೂಲಕ ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ನಗರಸಭೆ ಮಾಜಿ ಸದಸ್ಯೆ ಜಾನಕಿ, ತಾಲೂಕು ವೀರಶೈವ ಮಹಾಸಭಾ ಮಹಿಳಾ ಘಟಕ ಅಧ್ಯಕ್ಷೆ ಶಿಲ್ಪಾ, ಪ್ರಧಾನ ಕಾರ್ಯದರ್ಶಿ ಮಧುರ, ಕಾರ್ಯದರ್ಶಿ ಪುಷ್ಪಲತಾ, ಮಧುಮತಿ, ಕವಿತಾ, ನೇತ್ರಾ, ಶಿಲ್ಪಾ, ಶಾಂತಲಾ, ವಿಜಯಶ್ರೀ, ಸುಜಾತಾ, ಆಶಾ, ತನುಜಾ ಇತರರಿದ್ದರು.
.
About The Author
Discover more from JANADHWANI NEWS
Subscribe to get the latest posts sent to your email.