December 14, 2025
v.v.13-nyk1p.jpg


ನಾಯಕನಹಟ್ಟಿ :
ಮಧ್ಯ ಕರ್ನಾಟಕದಲ್ಲಿ ಹಟ್ಟಿ ಪರಿಷೆ ಎಂದು ಖ್ಯಾತಿ ಪಡೆದಿರುವ ಶ್ರೀಗುರು ತಿಪ್ಪೇರುದ್ರಸ್ವಾಮಿ ರಥಕ್ಕೆ 2.5ಕೋಟಿ ರೂಗಳ ವಿಮೆಯನ್ನು ಜಿಲ್ಲಾಡಳಿತ ಒದಗಿಸಿದೆ. ಗುರುವಾರ ಇದಕ್ಕೆ ಸಂಬಂಸಿದಂತೆ ವಿಮೆ ಪಾಲಿಸಿ ಪ್ರತಿಯನ್ನು ‘ದಿ ನ್ಯೂ ಇಂಡಿಯ ಅಶ್ಯುರೆನ್ಸ್’ ಕಂಪನಿಯ ಪ್ರತಿನಿಧಿಗಳು ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳಿಗೆ ಚಿತ್ರದುರ್ಗದಲ್ಲಿ ನೀಡಿದರು.
ದಾವಣಗೆರೆ ವೃತ್ತದ ‘ದಿ ನ್ಯೂ ಇಂಡಿಯ ಅಶ್ಯುರೆನ್ಸ್’ ಕಂಪನಿಯ ಚಿತ್ರದುರ್ಗ ಶಾಖೆಯ ಸಹಾಯಕ ವ್ಯವಸ್ಥಾಪಕ ಜಿ.ನವೀನ್ ಮಾತನಾಡಿ, ನಮ್ಮ ಕಂಪನಿಯ ವಿಭಾಗೀಯ ಮ್ಯಾನೇಜರ್ ದೇವದಾಸ್ ಮಾರ್ಗದರ್ಶನದಲ್ಲಿ ಈ ವಿಮೆಯನ್ನು ಮಾಡಿಸಲಾಗಿದೆ. ಜಾತ್ರೆಯ ದಿನ ಹಾಗೂ ವರ್ಷದ ಯಾವುದೇ ದಿನ ರಥಕ್ಕೆ ಉಂಟಾಗಬಹುದಾದ ಅಗ್ನಿ ಅನಾಹುತಕ್ಕೆ ಸಂಬಂಧಿಸಿದಂತೆ ವಿಮೆ ನೀಡಲಾಗಿದೆ. ಒಂದು ವರ್ಷದ ಅವಧಿಗೆ ರಥಕ್ಕೆ 2.5 ಕೋಟಿ ರೂಗಳ ವಿಮೆ ಒದಗಿಸಲಾಗಿದೆ.
ರಥೋತ್ಸವದಲ್ಲಿ ಅವಘಢ ಸಂಭವಿಸಿದಲ್ಲಿ 101 ಭಕ್ತರಿಗೆ ತಲಾ 2 ಲಕ್ಷ ರೂಗಳ ವಿಮೆಯನ್ನು 30ದಿನದವೆಗೆ ನೀಡಲಾಗಿದೆ. ರಥದ ಸುತ್ತಲೂ ರಥವನ್ನು ಚಲಾಯಿಸುವ ಹಾಗೂ ಸಾಂಪ್ರದಾಯಿಕ ಸೇವಾಕರ್ತರು ಭಾಗವಹಿಸುತ್ತಾರೆ. ಇಂಥಹ ಸೇವಾಭಕ್ತರಾಗಿರುವ 101

ನಾಮನಿರ್ದೇಶಿದ ಜನರಿಗೆ ತಲಾ 2 ಲಕ್ಷ ರೂಗಳ ವಿಮೆ ಒದಗಿಸಲಾಗಿದೆ. ಇದರ ಜೊತೆಗೆ ಸಾರ್ವಜನಿಕರಿಗಾಗಿ 25 ಜನರಿಗೆ ವಿಮೆಯನ್ನು ಮಾಡಿಸಲಾಗಿದೆ.ರಥವು ಸಂಪೂರ್ಣವಾಗಿ ಮರದಿಂದ ಮಾಡಲ್ಪಟ್ಟಿದೆ. ಮುಂಜಾಗ್ರತ ಕ್ರಮವಾಗಿ ವಿಮೆಯನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಎರಡು ಪಾಲಿಸಿಗಳಿಂದ ಒಟ್ಟಾರೆ 51 ಸಾವಿರ ರೂ ಗಳ ಚೆಕ್ ನ್ನು ದೇವಾಲಯದ ಇಒ ಹೆಚ್. ಗಂಗಾಧರಪ್ಪ ವಿಮಾ ಕಂಪನಿಗೆ ನೀಡಿದ್ದಾರೆ. ಕಂಪನಿಯ ಅಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಮಾ ಪ್ರತಿಯನ್ನು ಜಿಲ್ಲಾಧಿಕಾರಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ದೇವಾಲಯದ ಉಸ್ತುವಾರಿ ಹೊಂದಿರುವ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಇಒ ಗಂಗಾಧರಪ್ಪ, ವಕೀಲ ಬಿ.ಎಂ.ಅರುಣ್ ಕುಮಾರ್, ಸತೀಶ್ ಇದ್ದರು.

ಎಂಭತ್ತು ಅಡಿ ಎತ್ತರದ ಸುಮಾರು ತೊಂಬತ್ತು ಟನ್ ಭಾರವಿರುವ ಐದು ಗಾಲಿಗಳನ್ನೊಳಗೊಂಡ ರಾಜ್ಯದಲ್ಲಿಯೇ ಎರಡನೇ ಅತೀದೊಡ್ಡ ಮತ್ತು ವಿಶಿಷ್ಟವಾದ ರಥ. ಒಂಭತ್ತು ಮಜಲುಗಳನ್ನು ಹೊಂದಿರುವ ತಿಪ್ಪೇರುದ್ರಸ್ವಾಮಿ ರಥವನ್ನು ಬಣ್ಣ ಬಣ್ಣದ ಬಾವುಗಳಿಂದ ಅಲಂಕರಿಸಿದಾಗ ನೋಡಲು ತುಂಬಾ ಸುಂದರ. ಭಾನುವಾರ ಜರುಗಲಿರುವ ಜಾತ್ರೆಯಲ್ಲಿ ಇಂತಹ ಬೃಹತ್ ರಥದಲ್ಲಿ ತಿಪ್ಪೇರುದ್ರಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಟಾಪಿಸಿದಾಗ ಭಕ್ತರು 1.5 ಕಿ.ಮೀ ವರೆಗೆ ಭಕ್ತಿಯಿಂದ ಎಳೆದುಕೊಂಡು ಹೋಗುತ್ತಾರೆ.
ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿಯವರಿಗೆ ನೀಡಿತು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading