December 14, 2025
IMG-20250313-WA0178.jpg

ನಾಯಕನಹಟ್ಟಿ:: ಶ್ರೀ ಗುರು
ತಿಪ್ಪೇರುದ್ರಸ್ವಾಮಿ ಮಾರ್ಚ್ ತಿಂಗಳು 16 ನೇ ಭಾನುವಾರ ರಥೋತ್ಸವದಲ್ಲಿ ಭಾಗವಹಿಸುವೆ ಎಂದು ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು .
ಗುರುವಾರ ಪಟ್ಟಣದ ಎಸ್ ಟಿ ಎಸ್ ಆರ್ ವಿದ್ಯಾ ಸಂಸ್ಥೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು
ಶ್ರೀ ಗುರು ತಿಪ್ಪೇರುದ್ರಸ್ವಾಮಿ ಇದು ಒಂದು ಐತಿಹಾಸಿಕ ಜಾತ್ರೆ ಬಹುಶಃ ಮಧ್ಯಕರ್ನಾಟಕ ಭಾಗದಲ್ಲಿ ಲಕ್ಷ ಲಕ್ಷ ಜನ ಸೇರಿ ಆಚರಣೆ ಮಾಡಲಾಗುತ್ತದೆ ಕರ್ನಾಟಕ , ತೆಲಂಗಾಣ, ಮಹಾರಾಷ್ಟ್ರ ಮತ್ತು ಗಡಿಭಾಗದ ಜನರು ಕೂಡ ಅತ್ಯಂತ ಶ್ರದ್ಧೆ ಭಕ್ತಿಯಿಂದ ಶ್ರೀ ತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿ ಭಾಗವಹಿಸಿ ಪ್ರತಿ ವರ್ಷವು ಕೂಡ ತನ್ನ ಭಕ್ತಿಯನ್ನು ಸಲ್ಲಿಸುವ ವಾಡಿಕೆಯಾಗಿದೆ ಸುಮಾರು 700-800 ವರ್ಷದಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ಈ ಜಾತ್ರೆ ಮಾನವರ ಕಲ್ಯಾಣಕ್ಕಾಗಿ ಏಳಿಗೆಗಾಗಿ ತಿಪ್ಪೇರುದ್ರಸ್ವಾಮಿಯವರು ಮಾಡಿರುವ ಕೆಲಸ ಕಾರ್ಯಗಳು ಇವತ್ತು ಕೂಡ ನಮ್ಮ ಕಣ್ಣ ಮುಂದೆ ಇದೆ ಜನರ ಬದುಕಿಗೆ ಆಶ್ರಯವಾಗಿರುವ ಕೆರೆ ಕಟ್ಟೆಗಳನ್ನು ಕಟ್ಟಿದ್ದಾರೆ ಪ್ರಾಣಿ ಪಕ್ಷಿ ಜನರು ಬದುಕಲಿಕ್ಕೆ ಅವಕಾಶಮಾಡಿ ಕೆರೆ ಕಟ್ಟೆಗಳನ್ನು ನಿರ್ಮಿಸಿದ್ದಾರೆ ರೈತರ ಬದುಕನ್ನು ಹಸನು ಮಾಡುವ ಕೆಲಸವನ್ನು ತಿಪ್ಪೇರುದ್ರಸ್ವಾಮಿಯವರು ಮಾಡಿದ್ದಾರೆ ಇವತ್ತು ಇಡೀ ಜಿಲ್ಲೆಯಲ್ಲಿ ತಿಪ್ಪೇರುದ್ರಸ್ವಾಮಿ ಎಂಬ ಹೆಸರು ನಾವು ಕೇಳುತ್ತಿದ್ದೇವೆ.ನಾನೂ ಕೂಡ 16ನೇ ತಾರೀಖಿಗೆ ತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿ ಭಾಗವಹಿಸಿ ನಾನು ಕೂಡ ಭಕ್ತಿಯನ್ನು ಸಲ್ಲಿಸುತ್ತೇನೆ.ಎಂದರು.

ಇದೇ ಸಂದರ್ಭದಲ್ಲಿ ನಾಯಕನಹಟ್ಟಿ ಮಂಡಲ ಅಧ್ಯಕ್ಷ ಮಲ್ಲೇಶ್, ಎಸ್ ಟಿ ಮೋರ್ಚ ಜಿಲ್ಲಾಧ್ಯಕ್ಷ ಪಿ. ಶಿವಣ್ಣ, ನಿಕಟ ಪೂರ್ವ ಅಧ್ಯಕ್ಷ ಎಂ. ವೈ ಟಿ ಸ್ವಾಮಿ, ನಿಕಟ ಪೂರ್ವ ಅಧ್ಯಕ್ಷ ಚಳ್ಳಕೆರೆ ಸೂರನಹಳ್ಳಿ ಶ್ರೀನಿವಾಸ್, ಪಟ್ಟಣ ಪಂಚಾಯತಿ ಸದಸ್ಯ ಎನ್ ಮಹಾಂತಣ್ಣ, ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಿ ಶಂಕರಸ್ವಾಮಿ, ಗುಂತಕೋಲಮ್ಮನಹಳ್ಳಿ ಬಿಜೆಪಿ ಮುಖಂಡ ಜಿ.ಎಂ. ಜಯಣ್ಣ, ಜಿಲ್ಲಾ ರೈತ ಮೋರ್ಚ ಕಾರ್ಯದರ್ಶಿ ಬಿ. ಒ. ಬೋಸೆರಂಗಸ್ವಾಮಿ, ಮಂಡಲ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಬೆಂಕಿ ಗೋವಿಂದಪ್ಪ, ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ಬೋರಯ್ಯ,ಎಚ್. ಹುಚ್ಚ ಮಲ್ಲಯ್ಯ ಮಲ್ಲೂರಹಳ್ಳಿ, ಉಮೇಶ್ ತಿಪ್ಪೇಶ್ ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading