March 17, 2026
IMG-20250313-WA0107.jpg

ಚಳ್ಳಕೆರೆ: ರಾಜ್ಯದಲ್ಲಿ ನಡೆಯುವ ಅತ್ಯಂತ ದೊಡ್ಡ ಜಾತ್ರೆಗಳಲ್ಲಿ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯಜಾತ್ರೆಯೂ ಒಂದು. ಈ ಪುಣ್ಯಕ್ಷೇತ್ರ ರಾಜ್ಯಾದ್ಯಂತ ಮನೆ ಮಾತಾಗಿರುವ ಮಹಾಕ್ಷೇತ್ರವಾಗಿದೆ.
ಚಳ್ಳಕೆರೆ ನಗರದಿಂದ ಸುಮಾರು 16. ಕಿ. ಮೀ ದೂರದಲ್ಲಿರುವ ಈ ಕ್ಷೇತ್ರವು ಐತಿಹಾಸಿಕ ಹಿನ್ನೆಲೆಯೂ ಹೊಂದಿದೆ.
ನಾಯಕನಹಟ್ಟಿ ಕಂದಾಯ ಹೋಬಳಿ ಕೇಂದ್ರ ಹಾಗೂ ಪಟ್ಟಣ  ಪಂಚಾಯಿತಿಯಾಗಿದ್ದು, ಮೊಳಕಾಲೂರು ವಿಧಾನ ಸಭಾ ಕ್ಷೇತ್ರಕ್ಕೆ ಸೇರುತ್ತದೆ. ಪ್ರತಿ ವರ್ಷ ಪಾಲ್ಗುಣ ಮಾಸ ಬಹುಳದ ಚಿತ್ರ ನಕ್ಷತ್ರದಂದು ಮಾ.16 ರ ಭಾನುವಾರ
ಮಧ್ಯಾಹ್ನ 3.30 ಗಂಟೆಗೆ ನಾಯಕನಹಟ್ಟಿ, ತಳಕು, ಮನೆ ಕೋಟೆ, ಭಕ್ತಾದಿಗಳಿಂದ ಬಲಿ ಅನ್ನ ಹಾಗೂ ವಿಶೇಷ ಹಾಗೂ ಹರಾಜು ಪ್ರಕ್ರಿಯೆ ನಂತರ ಗುರುತಿಪ್ಪೇರುದ್ರ ಸ್ವಾಮಿ ದೊಡ್ಡ ರಥೋತ್ಸವವನ್ನು ಸಾವಿರಾರು ಭಕ್ತರು ಎಳೆಯುವರು.
ನಾಯಕನಹಟ್ಟಿ ಜಾತ್ರೆಯು ಹಿಂದೂ- ಮುಸಲ್ಮಾನರ ಭಾವೈಕ್ಯತೆಯ ದ್ಯೋತಕವಾಗಿದೆ. ಇಲ್ಲಿನ ಕೇಂದ್ರ ಶಕ್ತಿಯಾದ ಗುರು ತಿಪ್ಪೇರುದ್ರಸ್ವಾಮಿಯನ್ನು ಶ್ರೀಗುರುತಿಪ್ಪೇರುದ್ರಸ್ವಾಮಿ, ಹಟ್ಟಿತಿಪ್ಪೇಶ, ತಿಪ್ಪೇಸ್ವಾಮಿ ಎಂತಲೂ ಕರೆಯು
ತ್ತಾರೆ. ಹಿಂದೆ ಪಂಚಗಣಾಧೀಶರರೆಂದು ಹೇಳಲಾಗಿರುವ ಕೋಲುಶಾಂತೇಶ, ಕೆಂಪಯ್ಯ, ಚೆನ್ನಯ್ಯ, ಚನ್ನಬಸವೇಶ್ವರ
ಹಾಗೂ ತಿಪ್ಪೇರುದ್ರಸ್ವಾಮಿಗಳು ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಜನ ಜಾಗೃತಿ ಮೂಡಿಸಿದ್ದರು ಎನ್ನಲಾಗಿದೆ.ಈ ಐವರಲ್ಲಿ ಗುರುತಿಪ್ಪೇರುದ್ರಸ್ವಾಮಿಯವರು ನಿಡಗ
ಲ್ಲು- ರಾಯದುರ್ಗ, ಕಡೆಗಳಲ್ಲಿಸಂಚರಿಸುವ ಸಂದರ್ಭದಲ್ಲಿ
ಫಣಿಯಪ್ಪ ಎಂಬ ಭಕ್ತನ ವ್ಯಕ್ತಿತ್ವಕ್ಕೆ ಮಾರುಹೋಗಿ, ಅವರನ್ನು ತನ್ನೊಂದಿಗೆ ಕರೆತರುತ್ತಾರೆ. ಅಲ್ಲಿಯ ಹಳ್ಳಿ ಜನರ
ಬಡತನದ ಬಗ್ಗೆ ಅರಿತ ಸ್ವಾಮಿಗಳು ಅಲ್ಲಲ್ಲಿ ಕೆಲವು ಕೆರೆ ನಿರ್ಮಿಸುತ್ತಾರೆ. ಕೂಲಿಕಾರರಿಗೆ ದಿನಕೂಲಿ ಮಾಡಿದಷ್ಟು ನೀಡು ಭಿಕ್ಷೆ ಎಂಬ ಮಂತ್ರಶಕ್ತಿಯಿಂದ ಸೃಷ್ಟಿಸುತ್ತಿದ್ದರು ಎಂಬ
ದಂತಕಥೆಯು ಇದೆ. ಪವಾಡ ಪುರುಷರಾಗಿದ್ದರೆಂದು ನಂಬ ಗುರುತಿಪ್ಪೇರುದ್ರಸ್ವಾಮಿಯವರು
ಲಾದ ಯಾವ ಸ್ಥಳದವರು? ಯಾವ ಜಾತಿಯವರು ? ಎಂಬ ಬಗ್ಗೆ ಈಗಲೂ
ಜನರಲ್ಲಿ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಇವರು ವೀರಶೈವರೆಂದು ಕೆಲವರು ನಂಬಿದ್ದಾರೆ. ಇವರು ಬೇಡ ಜನಾಂಗದವರು ಇದ್ದಿರಬಹುದೆಂದು ಕೆಲವರ ವಾದ. ಒಂದು ದಿನ ನಾಯಕನಹಟ್ಟಿಗೆ ಬಂದು ತಿಪ್ಪೇರುದ್ರಸ್ವಾಮಿಯವರು ಅದೇ ಗ್ರಾಮದಲ್ಲಿದ್ದ ಮಾರಮ್ಮನ ಗುಡಿಗೆ ಹೋಗಿ ಒಂದೆರಡು ದಿನ ತಂಗಲು ಸ್ಥಳಾವಕಾಶ ನೀಡಲು ಮಾರಮ್ಮದೇವಿಯ ಅಪ್ಪಣೆ
ಪಡೆದರೆಂದೂ ಮಾರಮ್ಮ ಹಳ್ಳಿಗಳಿಗೆ ತಿರುಗಾಡಿ ಬರಲು ಹೋದಾಗ ಗುಡಿಯ ತುಂಬಾ ತಿಪ್ಪೇಸ್ವಾಮಿಯವರ ಜೋಳಿಗೆ- ಬೆತ್ತಗಳು ಕಾಣಿಸಿಕೊಂಡು, ಇದನ್ನು ಕಂಡ
ಮಾರಮ್ಮ ಗುಡಿಯನ್ನು ತಿಪ್ಪೇಸ್ವಾಮಿಯವರಿಗೆ ಬಿಟ್ಟು ಕೊಟ್ಟು ವಡಹಟ್ಟಿಗೆ ಹೋಗಿ ನೆಲೆಸಿದಳೆಂದು ಪ್ರತೀತಿ ಇದೆ.


ಈಗ ಅದೇ ಗುಡಿ ಶ್ರೀಗುರು  ತಿಪ್ಪೇಸ್ವಾಮಿಯ ಒಳಮಠ ಇಲ್ಲಿ ತಿಪ್ಪೇಸ್ವಾಮಿಯವರನ್ನು ಲಿಂಗರೂಪದಲ್ಲಿ ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತಿದೆ.
ಹೊರ ಮಠ, ಒಳ ಮಠ:
ನಾಯಕನಹಟ್ಟಿಯಲ್ಲಿ ಗುರು ತಿಪ್ಪೇರುದ್ರಸ್ವಾಮಿಗೆ ಸಂ ಬಂಧಿಸಿದ ಎರಡು ಆರಾಧನಾ ಸ್ಥಳಗಳಾಗಿದ್ದು, ಅವುಗ
ಳನ್ನು ಹೊರ ಮಠ ಹಾಗೂ ಒಳಮಠ ಎಂದು ಕರೆಯ ಲಾಗಿದೆ. ಶ್ರೀ ಗುರುತಿಪ್ಪೇರುದ್ರ ಸ್ವಾಮಿ ಜೀವಿತಾವಧಿ
ಯಲ್ಲಿ ವಾಸವಾಗಿದ್ದ ಸ್ಥಳವು ಊರೊಳಗಿದ್ದು, ಅದನ್ನು ಒಳಮಠವೆಂದು ಕರೆಯುತ್ತಾರೆ. ಜೀವಂತ ಸಮಾಧಿ ಹೊಂದಿದ್ದ ಸ್ಥಳವು ಊರಿಂದ ಹೊರಗಡೆ ಚಿಕ್ಕಕೆರೆ ಹತ್ತಿರ ಇದ್ದು ಇದಕ್ಕೆ ಹೊರಮಠ ಎನ್ನುವರು. ಒಳ ಮಠದ ಗೋಪುರವು 50 ಅಡಿ ಎತ್ತರವಿದ್ದು, ಅತ್ಯಾಕರ್ಷಕ ವಾಗಿದೆ. ಒಳಮಠದ ಮುಂದೆ ಜಾತ್ರೆ ಸಂದರ್ಭದಲ್ಲಿ
ಬೃಹತ್ ಅಗ್ನಿ ಕುಂಡದಲ್ಲಿ ಒಣಗೊಬ್ಬರಿಯ ಹೋಳುಗಳ ರಾಶಿಯನ್ನು ಸುಡುವುದು ರಾಜ್ಯದಲ್ಲಿಯೇ ವಿಶೇಷ ಆಚರಣೆಯಾಗಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading