ನಾಯಕನಹಟ್ಟಿ : ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಆಯೋಜಿಸಿದ್ದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ನಾಯಕನಹಟ್ಟಿ ಪಟ್ಟಣದ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈ ಒಂದು ಮಟ್ಟಕ್ಕೆ ಮಾದರಿಯದಂತಹ ಪದ್ಧತಿಯನ್ನು ಅಳವಡಿಸಿಕೊಂಡು ಪಟ್ಟಣದ ಪ್ರತಿಷ್ಠಿತ ಶಾಲೆಯಾಗಿ ಬೆಳೆಯುತ್ತಿರುವುದು ತುಂಬಾ ಶ್ಲಾಘನೀಯ. ಶಾಲೆಯ ಬೆಳವಣಿಗೆಗೆ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರುಗಳು, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು ಬಹಳ ಶ್ರಮವಹಿಸಿ ಈ ಕಾರ್ಯಕ್ರಮವನ್ನು ರೂಪಿಸಿ ಶಾಲೆಯ ವ್ಯವಸ್ಥೆಯನ್ನು ಪೋಷಕರಿಗೆ ಹಾಗೂ ಪಟ್ಟಣದ ನಾಗರಿಕರಿಗೆ ಶಾಲೆಯ ವಿಶೇಷತೆಯನ್ನು ಅಭಿವ್ಯಕ್ತ ಪಡಿಸುವಂತಹ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಮಕ್ಕಳ ಕಲಿಕೆ ಜೊತೆಗೆ ಸಾಂಸ್ಕೃತಿಕ ಕೌಶಲ್ಯಗಳನ್ನು ಪ್ರದರ್ಶನ ಮಾಡುವಂತಹ ವೇದಿಕೆಯನ್ನು ಏರ್ಪಡಿಸಿರುವಂತಹದ್ದು, ಪೋಷಕರಿಗೆ ಸರ್ಕರಿ ಶಾಲೆಯ ಬಗ್ಗೆ ಒಂದು ಭರವಸೆಯನ್ನು ಮೂಡಿಸುತ್ತದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಮನೋರಂಜನೆ ಅತಿ ಮುಖ್ಯ. ಪಟ್ಟಣದ ಜನತೆಗೆ ಉತ್ತಮವಾದ ಶಿಕ್ಷಣ ಕೊಡಿಸುವಂತಹ ಸಂಕಲ್ಪವನ್ನು ಮಾಡುತ್ತೇವೆ ಎಂದು ಹೇಳಿದರು.
ನಂತರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್ ಮಾತನಾಡಿ ಶಿಕ್ಷಣವೇ ಶಕ್ತಿ ಎಂದು ಡಾ. ಬಾಬಾ ಸಾಹೇಬ್ರವರು ಹೇಳಿದ್ದರು. ಪ್ರತಿಯೊಬ್ಬ ಮಕ್ಕಳು ಶಿಕ್ಷಣ ಪಡೆಯದೇ ಹೋದರೆ ನಾವುಗಳು ಏನನ್ನು ಸಾಧಿಸಲು ಸಾಧ್ಯವಿಲ್ಲ. ಶಿಕ್ಷಕರು ಶಿಕ್ಷಣದ ಜೊತೆಗೆ ಜೀವನದ ಪಾಠಗಳನ್ನು ಕಲಿಸುತ್ತಾರೆ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಹಾಗಾಗಿ ಮಕ್ಕಳ ಉಜ್ಜಲ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ನೀಡುವುದು ಪೋಷಕರ ಆದ್ಯ ಕರ್ತವ್ಯ ಎಂದು ಹೇಳಿದರು.
ನಂತರ ಮುಖ್ಯೋಪಾಧ್ಯಾಯನಿ ಇಂದಿರಮ್ಮ ಮಾತನಾಡಿ ಪ್ರಾಥಮಿಕ ಶಾಲೆಯ ಇತಿಹಾಸದಲ್ಲಿ ಒಂದು ಸುವರ್ಣ ದಿನ ಇಂದಿನ ವಾರ್ಷಿಕೋತ್ಸವ ಎಂಬುವುದು ಕೇವಲ ಒಂದು ದಿನದ ಸಂಭ್ರಮವಲ್ಲ. ಇದು ಒಂದು ಶೈಕ್ಷಣಿಕ ವರ್ಷದ ನಿರಂತರ ಪರಿಶ್ರಮದ ಪ್ರತಿಬಿಂಬ ಅಕ್ಷರ ಕಲಿಕೆಯ ಜೊತೆಗೆ ಮಗುವಿನ ಪುಟ್ಟ ಪ್ರತಿಭೆ ಅನಾವರಣಗೊಳ್ಳಲು ಈ ವೇದಿಕೆ ಒಂದು ಅಡಿಪಾಯವಾಗಿದೆ. ನಮ್ಮ ಶಾಲೆಯು ಅನೇಕ ದೇಶಗಳಿಂದ ಜ್ಞಾನದ ಜೊತೆಯನ್ನು ಹಚ್ಚುತ್ತಾ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬಾರಿ ದೀಪವಾಗಿದೆ. ಇಲ್ಲಿನ ಪ್ರತಿಯೊಂದು ತರಗತಿ ಆಟದ ಮೈದಾನ ಮತ್ತು ಶಾಲೆಯ ಪರಿಸರ ನೂರಾರು ಕನಸುಗಳನ್ನು ಹೊತ್ತು ಬೆಳೆದಿದೆ. ಈ ವಾರ್ಷಿಕೋತ್ಸವವು ಆ ಹಿನ್ನೆಲೆಯನ್ನು ಮರಿಸುವ ಒಂದು ಮುಂದಿನ ಹಾದಿಗೆ ಸಿದ್ಧಗೊಳ್ಳುವ ಸಂಭ್ರಮದ ಕ್ಷಣ. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಮಕ್ಕಳಲ್ಲಿರುವ ಕಲೆ ಸಾಹಿತ್ಯ ಕ್ರೀಡೆ ಶೈಕ್ಷಣಿಕ ಚೈತನ್ಯವನ್ನು ಪ್ರೋತ್ಸಾಹಿಸಿ ಅವರಿಗೆ ಆತ್ಮವಿಶ್ವಾಸ ತುಂಬುವುದೇ ಈ ದಿನದ ವಿಶೇಷತೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ಅನ್ವರ್, ಪಟ್ಟಣ ಪಂಚಾಯತಿ ಸದಸ್ಯರುಗಳಾದ ಸುನಿತಾ ಮುದಿಯಪ್ಪ,ಟಿ.ಮಹೇಶ್ವರಿ, ಪಾಪಮ್ಮ,ಎಮ್ ಟಿ ಮಂಜುನಾಥ್,ಮಂಜುನಾಥ್ ಬಾಬು, ಎಸ್ ಡಿ ಎಮ್ ಸಿ ಅಧ್ಯಕ್ಷೆ ಸುಮಾ,ಬಿ ಆರ್ ಸಿ ಸದಾಶಿವಯ್ಯ್, ಸಿ ಆರ್ ಪಿ ಈಶ್ವರಪ್ಪ, ಜಿ ಪಾಲಯ್ಯ್, ರುದ್ರಮುನಿ,ಡಾ. ವಿಕಾಸ್, ಶಿಕ್ಷಕ, ಶಿಕ್ಷಕಿಯರು, ಪೋಷಕರು, ಸಾರ್ವಜನಿಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇನ್ನೂ ಮುಂತಾದವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.