ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ಗ್ರಾಮೀಣ ಕೂಟ ಸಂಸ್ಥೆಯ ಸಾಮಾಜಿಕ ಸೇವಾ ಕಾರ್ಯ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಕೃಷ್ಣರಾಜು ಹೇಳಿದರು.
ಅವರು ಗ್ರಾಮೀಣ ಕೂಟ ಸಂಸ್ಥೆಯ ವತಿಯಿಂದ ಪಟ್ಟಣದ ಪೊಲೀಸ್ ಠಾಣೆಗೆ ನೀಡಲಾದ 20 ಬ್ಯಾರಿ ಕೇಡ್ ಗಳನ್ನು ಸ್ವೀಕರಿಸಿ ಮಾತನಾಡಿದರು.
ಗ್ರಾಮೀಣ ಕೂಟ ಸಂಸ್ಥೆಯು ಕೇವಲ ಹಣಕಾಸಿನ ವ್ಯವಹಾರವನ್ನು ಮಾಡದೆ ಸಮುದಾಯಕ್ಕೆ ಉಪಯೋಗವಾಗುವಂತಹ ಹಲವು ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.
ನಮ್ಮ ಪೊಲೀಸ್ ಠಾಣೆಗೆ ಅವಶ್ಯಕವಾಗಿ ಬೇಕಾಗಿದ್ದ ಬ್ಯಾರಿ ಕೇಡ್ ಗಳನ್ನು ನೀಡುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿರುವ ಗ್ರಾಮೀಣ ಕೂಟದ ಸಂಸ್ಥೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮೀಣ ಕೂಟ ಸಂಸ್ಥೆಯ ರಿಜಿನಲ್ ಮ್ಯಾನೇಜರ್ ವಿನಯ್ ಕುಮಾರ್, ಏರಿಯಾ ಮ್ಯಾನೇಜರ್ ಸುನಿಲ್, ಶಾಖಾ ವ್ಯವಸ್ಥಾಪಕ ಚೇತನ್, ಪೊಲೀಸ್ ಸಿಬ್ಬಂದಿಗಳಾದ ಕೆ.ರಘು, ರಾಜು, ಗೋವಿಂದ, ಪ್ರವೀಣ್, ಮನು ಸೇರಿದಂತೆ ಹಲವರು ಇದ್ದರು.