ಚಳ್ಳಕೆರೆ ಜ.13
ಪಟ್ಟಣ, ನಗರ ಪ್ರದೇಶಗಳಿಗೆ ಕೂಲಿ ಕೆಲಸಕ್ಕೆ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರಕಾರ ಬಹು ನಿರೀಕ್ಷಿತ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಇದನ್ನು ಬಂಡವಾಳ ಮಾಡಿಕೊಂಡ ಉದ್ಯೋಗ ಖಾತ್ರಿ ಹಣ ಲೂಟಿ ಮಾಡುತ್ತಿದ್ದಾರೆ ಎಂಬ ಆರೋಗಳು ಕೇಳಿ ಬರುತ್ತಿವೆ.
ಹೌದು ಇದು ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯ ವಿವಿಧ ಕಾಮಗಾರಿಗಳಿ ಗ್ರಾಮದಲ್ಲದೆ ಚುಕ್ಕಮಂಗಳೂರು ಕಾಫಿ ತೋಟ ಹಾಗೂ ಬೆಂಗಳೂರು ಸೇರಿದಂತೆ ವಿವಿಧ ಕಡೆ ಕೂಲಿ ಕೆಲಸಕ್ಕೆ ಹೋದವರ ಹೆಸರಿಗೆ ನರೇಗಾ ಕೂಲಿ ಹಣ ಹಾಕಿರುವುದು ಬೆಳಕಿಗೆ ಬಂದಿದೆ.
ಗ್ರಾಮೀಣ ಭಾಗದ ಕೂಲಿಕಾರ್ಮಿರು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ ಗ್ರಾಮದಲ್ಲೇ ಕೂಲಿಕೆಲಸ ನೀಡ ಬೇಕು ಆದರೆ ಇಲ್ಲಿ ಉಲ್ಟ ವಲಸೆ ಹೊಗುವುದನ್ನು ತಪ್ಪಿಸುವುದನ್ನು ಬಿಟ್ಟು ವಲಸೆ ಕಾರ್ಮಿಕರ ಜಾಬು ಕಾರ್ಡುಗಳಿಗೆ ನರೇಗಾ ಕೂಲಿ ಹಾಜರಾತಿ ಹಾಕಿ ಖಾತೆಗೆ ಹಣ ಹಾಕಿದ್ದಾರೆ.
ಹಳೆ ಬೋರ್ಡ್ ಹೊಸ ಕಾಮಗಾರಿ.









ಕಾಲುವೆಹಳ್ಳಿ ಗೌಡರಹಟ್ಟಿ ಮುಖ್ಯರಸ್ತೆಯಿಂದ ತಿಮ್ಮಯ್ಯ ನ ತೋಟದವರೆಗೆ ಮಣ್ಣಿನ ರಸ್ತೆ ಕಾಮಗಾರಿ ಈಗಾಗಲೆ 2019 ರಲ್ಲಿ ರಸ್ತೆ ಕಾಮಗಾರಿ ಮಾಡಲಾಗುತ್ತು ಮತ್ತೆ ಹಳೆ ಬೋರ್ಡ್ ಹೊಸ ಕಾಮಗಾರಿ ಹೆಸರು ಬರೆಸಿ ಮೂರು ತಿಂಗಳ ಹಿಂದೆ ಕಳಪೆ ಕಾಮಗಾರಿ ಮಾಡಿ ನರೇಗಾ ಯೋಜನೆ ಬಿಲ್ ಪಡೆಯಲಾಗಿದೆ.
ಮುಖ್ಯರಸ್ತೆಗೆ ಹೊಂದಿಕೊಂಡ ಮಣ್ಣಿನ ರಸ್ತೆಯ ಡಕ್ ಕುಸಿದಿದ್ದರೂ ದುರಸ್ತಿ ಮಾಡದೆ ಹಾಗೆ ಕಾಮಗಾರಿ ಮಾಡಿದ್ದು.
ನರೇಗಾ ಕ್ರಿಯಾ ಯೋಜನೆಯಂತೆ ಜಲ್ಲಿ ಮಣ್ಣು ಹಾಕದೆ ಕಳಪೆ ಮಾಡಿ ಬಿಲ್ ಪಡೆಯಲಾಗಿದೆ.






ಕಾಮಗಾರಿ ಸ್ಥಳ ಬದಲು.
ಗೌಡರಕಪ್ಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆ ಹಾಗೂ ಕಾಂಪೌಂಡ್ ಶಿಥಿಲವಾಗಿದ್ದರೂ ಸಹನರೇಗಾ ಯೋಜನೆಯಡಿ ಮಂಜೂರಾತಿ ಯಾದ ಬೋಜನಾಲಯ .ಕಾಂಪೌಂಡ ಕಾಮಗಾರಿಯನ್ನು ಗೌಡರಹಟ್ಟಿ ಉರ್ದು ಶಾಲೆಯ ಬಳಿ ಮಾಡಲಾಗಿದ್ದು .
ಸ್ಥಳೀಯ ಕೆಲ ಜನಪ್ರತಿನಿಧಿಗಳು, ಅಧಿಕಾರಿಗಳು ಶಾಮೀಲಾಗಿ ಕಾಮಗಾರಿಗಳನ್ನು ಕಳಪೆ ಕಾಮಗಾರಿಗಳನ್ನು ಮಾಡಿದ್ದು.
ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ನರೇಗಾ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗೌಡರಕಪ್ಲೆ ನಿವಾಸಿಗಳು ಒತ್ತಾಯಿಸಿದ್ದಾರೆ.



ಗೌಡರಕಪ್ಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಹಾಗೂ ಅಡುಗೆ ಕೋಣೆ ಶಿಥಿಲ.
About The Author
Discover more from JANADHWANI NEWS
Subscribe to get the latest posts sent to your email.