ಚಳ್ಳಕೆರೆ ನ.12ನ ನಿವೇಶನ ರಹಿತ ಹಾಗೂ ಪಡಿತರ ಚೀಟಿ ಇರುವ ಎಲ್ಲಾ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲಾಗುವುದು ಯಾರೂ ಆತಂಕಕ್ಕೆ ಒಳಗಾಗ ಬೇಡಿ ಎಂದು ತಹಶೀಲ್ದಾರ್ ರೇಹಾನ್ ಪಾಷ ಹೇಳಿದರು.




















ತಾಲೂಕಿನ ಗಂಜಿಗುಂಟೆ ಗ್ರಾಮದಲ್ಲಿ ನಿವೇಶನಗಳ ಹಂಚಿಕೆಗಾಗಿ ಶಾಂತಿ ಸಭೆ ಹಾಗೂ ಫಲಾನುಭವಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲು ಕುಟುಂಬದ ದಾಖಲಾತಿಗಳು ಅಗತ್ಯ ಆದ್ದರಿಂದ ಸಂಪೂರ್ಣವಾದ ದಾಖಲಾತಿಗಳನ್ನು ನೀಡಿ ನಿವೇಶನ ಪಡೆದುಕೊಳ್ಳಿ
ಈಗಾಗಲೇ ಗಂಜಿಗುಂಟೆ ಗ್ರಾಮದಲ್ಲಿ ನಿಗಧಿಪಡಿಸಿದ 2017-18 ರಲ್ಲಿ ಸು.5 ಎಕರೆ ಆಶ್ರಯ ಯೋಜನೆ ನಿವೇಶನ ಹಂಚಿಕೆಗಾಗಿ ನಿಗಧಿ ಪಡಿಸಿದ ಜಾಗವಿದೆ, ಅದರಲ್ಲಿ ಅರ್ಜಿ ಸಲ್ಲಿಸಿದ ಸುಮಾರು 115 ನಿವೇಶನಗಳ ಫಲಾನುಭವಿಗಳ ಪಟ್ಟಿಯಲ್ಲಿ ದಾಖಲಾತಿಗಳ ಪರೀಶಿಲನೆ ಅರ್ಹ ನೈಜ ಫಲಾನುಭವಿಗಳ ಪಟ್ಟಿಯಲ್ಲಿ ಕೇವಲ 44 ಫಲಾನುಭವಿಗಳು ಮಾತ್ರ ಅರ್ಹತೆಯಲ್ಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಇನ್ನೂ ಉಳಿದ ಅರ್ಹ ಫಲಾನುಭವಿಗಳು ಇದ್ದರೆ ದಾಖಲಾತಿಗಳು ನೀಡಿ, ನಿವೇಶನ ನೀಡಲಾಗುವುದು ಎಂದು ತಿಳಿಸಿದರು.ಇನ್ನೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಇಓ ಹೆಚ್.ಶಶಿಧರ್ ಮಾತನಾಡಿ, ಗ್ರಾಮದಲ್ಲಿ ಧ್ವೇಶ ಅಸೂಹೆ ಬಿಡಿ ಗ್ರಾಮದಲ್ಲಿ ಸಾಮರಸ್ಯ ಜೀವನ ನಡೆಸಿ, ಒಂದು ಕುಟುಂಬಕ್ಕೆ ಒಂದು ನಿವೇಶನ ನಿಗಧಿ ಮಾಡಲಾಗಿದೆ, ನಿರ್ಗತಿಕರಿಗೆ ನಿವೇಶನ ರಹಿತರಿಗೆ ಸರಕಾರದಿಂದ ನಿವೇಶನ ನೀಡುವ ಮಹತ್ವ ಯೋಜನೆ ಇದಾಗಿದೆ, ಆದ್ದರಿಂದ ಮೂಲ ದಾಖಲಾತಿಯನ್ನು ನೀಡಿ ಸರಕಾರದಿಂದ ನಿವೇಶನ ಪಡೆದುಕೊಳ್ಳಿ ಎಂದರು.ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಬಿಪಿ.ಪ್ರಕಾಶ್ ಮೂರ್ತಿ ಮಾತನಾಡಿ, ಗ್ರಾಮದಲ್ಲಿ ಹೊರಗಡೆಯಿಂದ ಬಂದವರು ಗ್ರಾಮದಲ್ಲಿ ಇದ್ದವರು ಎಂಬ ತಾರತಮ್ಯ ಸರಕಾರಕ್ಕೆ ಇಲ್ಲ ಆದ್ದರಿಂದ ಅರ್ಹ ಫಲಾನುಭವಿಗಳು ಅರ್ಜಿ ಪಡೆದು ನಿವೇಶನ ಪಡೆಯಿರಿ, ಗ್ರಾಮ ಸಭೆಯಲ್ಲಿ ನಿಗದಿಪಡಿಸಿದ ನಿವೇಶನಗಳ ಹೊರತುಪಡಿಸಿ, ತದನಂತರ ಇನ್ನು ಉಳಿದ ಎಲ್ಲಾ ಅರ್ಹ ಫಲಾನುಭವಿಗಳಿಗೂ ನಿವೇಶನ ನೀಡಲಾಗುತ್ತದೆ ಎಂದರು.
ಗ್ರಾಮದ ರಂಗಪ್ಪ. ಮಹಲಿಂಗಪ್ಪ.ನಿಜಲಿಂಗಪ್ಪ.ಇಂದ್ರೇಶ್. ದ್ಯಾಮೇಶ್ ಮಾತನಾಡಿ
ಸರಕಾರಿ ಗೋಮಾಳ ಸರ್ವೆ ಮಾಡಿ ಖಾಲಿ ಮಾಡಿಸಿ ನಂತರ ನಿವೇಶನ ಮಾಡಿ ಸರಕಾರಿ ಗೋಮಾಳದಲ್ಲಿ ದಿನದಿಂದ ದಿನಕ್ಕೆ ಅಕ್ರಮ ಮನೆಗಳು ನಿರ್ಮಾಣ ವಾಗುತ್ತಿವೆ
ನಿವೇಶನ. ಸ್ಮಶಾನ ಸೇರಿದಂತೆ ಇನ್ನು ಎಂಟು ಎಕರೆ ಭೂಮಿ ಪತ್ತೆ ಮಾಡಿ. ಲಿಡ್ಕರ್ ಗೆ ಬರೆದು ಸುಮಾರು ಏಳು ವರ್ಷಗಳು ಕಳೆದಿವೆ ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು
ಇಒ ಶಶಿಧರ್ ಮಾತನಾಡಿ ಯಾರೂ ಗೊಂದಲಕ್ಕೆ ಒಳಗಾಗ ಬೇಡಿ ನಿಮಗೆ ನಿವೇಶನ ಕೊಡಲು ಬಂದಿದ್ದೇವೆ ಫಲಾನುವಗಳಿಗೆ ಆಶ್ರಯಕ್ಕೆ ಭೂಮಿ ಮಂಜುರಾತಿ ನೀಡುತ್ತೇವೆ ನಂತರ ಮನೆ ಮಂಜುರಾತಿಗಾಗಿ ಲಿಡ್ಕರ್ ಸಂಸ್ಥೆಗೆ ಮನೆಗಳ ನಿರ್ಮಾಣಕ್ಕೆ ಮಂಜುರಾತಿಗೆ ಶಿಪಾರಸ್ ಮಾಡುತ್ತೇವೆ ಎಂದು ತಿಳಿಸಿದರು.
ದ್ಯಾಮೇಶಿ ಕಾನೂನು ಎಷ್ಟೇ ಇದ್ದರೂ ಗ್ರಾಮದಲ್ಲಿ ಅದು ಬರುವುದಿಲ್ಲ ಒಂದೇ ಕುಟುಂಬದಲ್ಲಿ ಮೂರು ಕುಟುಂಬಗಳಿದ್ದರೂ ಒಬ್ಬರ ಹೆಸರಿಗೆ ಇರುತ್ತದೆ ಉಳಿದ ಇಬ್ಬರು ನಿವೇಶನ. ವಂಚಿತರಾಗುತ್ತಾರೆ
ಗ್ರಾಮದಲ್ಲಿ ನಿಗಧಿ ಪಡಿಸಿದ ನಿವೇಶನಗಳಲ್ಲಿ ಈಗಾಗಲೇ ಮನೆ ಹಾಗೂ ಖಾತೆ ಇದ್ದವರೆ ಮತ್ತೊಂದು ನಿವೇಶನ ಪಡೆಯಲು ಮನೆಕಟ್ಟಿ ಅತಿಕ್ರಮಣ ಮಾಡಿದ್ದಾರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಸಾರ್ವಜನಿಕರ ಒತ್ತಾಯಿಸಿದರು..ಸರಕಾರದಿಂದ ನಿವೇಶನ ಪಡೆಯಲು ಕುಟುಂಬದ ಮೂಲ ದಾಖಲಾತಿಗಳು, ರೇಷನ್ ಕಾರ್ಡ್ ಖಡ್ಡಾಯ ಎನ್ನುತ್ತಾರೆ ಅಧಿಕಾರಿಗಳು, ಆದರೆ ರೇಷನ್ ಕಾರ್ಡ ಹೊಸದಾಗಿ ಬಿಟ್ಟಿಲ್ಲ, ಆದ್ದರಿಂದ ರೇಷನ್ ಕಾರ್ಡ್ ಎಲ್ಲಿಂದ ತಂದುಕೊಡಲಿ ಆದ್ದರಿಂದ ಕಾನೂನು ಬಿಟ್ಟು ಮಾನವೀಯತೆ ತೋರಬೇಕು ಅಧಿಕಾರಿಗಳು ಎಂದು ಗ್ರಾಮದ ಸಾರ್ವಜನಿಕರು ಒತ್ತಾಯಿಸಿದರುಇದೇ ಸಂಧರ್ಭದಲ್ಲಿ ಕಂದಾಯ ಅಧಿಕಾರಿ ತಿಪ್ಪೇಸ್ವಾಮಿ, ಗ್ರಾಮ ಲೆಕ್ಕಿಗ ಕೇಶವಮೂರ್ತಿ, ಪಿಡಿಓ ದೇವೆಂದ್ರಪ್ಪ, ಕಾರ್ಯದರ್ಶಿ ,
ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಲಕ್ಷ್ಮಿ, ಸದಸ್ಯ ಇಂದ್ರೇಶ್,
ರಂಗಪ್ಪ, ಮಾಹಲಿಂಗಪ್ಪ, ನಿಜಲಿಂಗಪ್ಪ, ನಾಗಭೂಷಣ್, ಓಂಕರಾಪ್ಪ, ಇತರರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.