
ಹಿರಿಯೂರು:
ಕಾಡುಗೊಲ್ಲ ಸಮುದಾಯದವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದ್ದು, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಚಿತ್ರದುರ್ಗದ ಶ್ರೀ ಕ್ಷೇತ್ರಯಾದವಾನಂದ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ತಾಲ್ಲೂಕಿನ ಮಸ್ಕಲ್ ಟಿ.ಬಿ.ಗೊಲ್ಲರಹಟ್ಟಿ ಗ್ರಾಮದ ಶ್ರೀ ಈರಲಿಂಗೇಶ್ವರ ಸ್ವಾಮಿ ದೇವರ ನೂತನ ದೇವಸ್ಥಾನ ನಿರ್ಮಾಣದ ಅಡಿಪಾಯ ಪೂಜೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ನಮ್ಮ ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದು, ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಾತಿ ಅವಶ್ಯಕತೆಯಿದೆ. ಈಗಾಗಲೇ ಮೀಸಲಾತಿಗಾಗಿ ಸಾಕಷ್ಟು ಹೋರಾಟ ಮಾಡಿಕೊಂಡು ಬಂದಿದ್ದೇವೆ.
ಕಾಡುಗೊಲ್ಲಕಡತಗಳಲ್ಲಿ ತೊಡಕುಂಟಾಗಿರುವ ಲೋಪದೋಷಗಳನ್ನು ಸರಿಪಡಿಸಿ ರಾಜ್ಯ ಸರ್ಕಾರ, ಕಡತವನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂಬುದಾಗಿ ಹೇಳಿದರು.
ದೇಶದ ಪರಂಪರೆಯಲ್ಲಿ ದೇವಸ್ಥಾನಗಳಿಗೆ ತನ್ನದೇ ಆದಂತಹ ಸ್ಥಾನಮಾನವಿದೆ. ಅದರಲ್ಲೂ ಕೂಡ ಕಾಡುಗೊಲ್ಲರು ಅನಾದಿಕಾಲದಿಂದಲೂ ದೇವರುಗಳಿಗೆ ಅತ್ಯಂತ ಭಕ್ತಿಯಿಂದ ಪೂಜಿಸುತ್ತಾ ಬರುತ್ತಿದ್ದಾರೆ. ನಾವು ಸಾಂಸ್ಕೃತಿಕ ವೀರರನ್ನೇ ದೇವರನ್ನಾಗಿ ಆರಾಧಿಸುವ ಪದ್ಧತಿ ರೂಢಿಯಲ್ಲಿದ್ದು, ನಾವು ಕಲೆಯಲ್ಲಿ ಶ್ರೀಮಂತಿಕೆ ಹೊಂದಿದ್ದೇವೆ.
ಟಿ.ಬಿ. ಗೊಲ್ಲರಹಟ್ಟಿ ಗ್ರಾಮದ ಈರಣ್ಣಸ್ವಾಮಿ ದೇವರಿಗೆ ಆದಿ ಪೂಜೆ ನೆರವೇರಿಸಿದ್ದು, ಶೀಘ್ರದಲ್ಲಿ ಕಾಮಗಾರಿ ವೇಗವಾಗಿ ಆರಂಭಗೊಂಡು, ದೇವಾಲಯ ಪೂರ್ಣಗೊಂಡು ಲೋಕಾರ್ಪಣೆಯಾಗಲಿದೆ. ಆ ಭಗವಂತ ಎಲ್ಲರಿಗೂ ಒಳಿತು ಮಾಡಲಿ ಎಂಬುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕೂಡ್ಲಹಳ್ಳಿ ಪಾಥಲಿಂಗೇಶ್ವರ ದೇವರ ಪೂಜಾರಿ ಪೋತರಾಜ್ ಚಿಕ್ಕಣ್ಣ, ಬುಕ್ಕಾಪಟ್ಟಣ ಕ್ಯಾತೆದೇವರ ಪೂಜಾರಿ ದೊಡ್ಡಯ್ಯ, ಮಾಯಸಂದ್ರ ಚಿತ್ರಲಿಂಗೇಶ್ವರ ಪೂಜಾರಿ ಪೂಜಪ್ಪ, ಮ್ಯಾಕ್ಲೂರಹಳ್ಳಿ ಬಾಲಕೃಷ್ಣ ದೇವರ ಪೂಜಾರಿ ರಂಗಪ್ಪ, ಹೊಸಟ್ಟಿ ರಂಗನಾಥಸ್ವಾಮಿ ಪೂಜಾರಿ ರಂಗಪ್ಪ, ಬ್ಯಾಡರಹಳ್ಳಿ ಪೂಜಾರಿ ಗೋಪಾಲಕೃಷ್ಣ, ಓಣಿಹಟ್ಟಿ ಪೂಜಾರಿ ಯಳಿಯಪ್ಪ, ರಂಗನಾಥನ ಪೂಜಾರಿ ಲಕ್ಮಣ್ಣಪ್ಪ, ಮಸ್ಕಲ್ ಚಿತ್ರದೇವರ ಪೂಜಾರಿ ನಿಜಲಿಂಗಪ್ಪ, ಜೋಗಯ್ಯಪಾಳ್ಯ ಶನಿದೇವರ ಪೂಜಾರಿ ಮಹಾಲಿಂಗಯ್ಯ, ದೇವರಕೊಟ್ಟ ದತ್ತ ಪೀಠದ ಮುದ್ದುರಂಗಪ್ಪಸ್ವಾಮಿ, ಮಸ್ಕಲ್ ವೀರೇಗೌಡ್ರು, ಧನಂಜಯ, ಮಲ್ಲಣ್ಣ, ಪೂಜಾರಿ ನರಸಿಂಹಣ್ಣ, ವೆಂಕಟೇಶ್, ಶಿರಾದ ತಾವರಕೆರೆ ಗೊಲ್ಲರಹಟ್ಟಿಯಅಣ್ಣತಮ್ಮಂದಿರು, ಮಸ್ಕಲ್, ಚಿತ್ರದೇವರಹಟ್ಟಿ ಹಾಗೂ ಟಿ.ಬಿ.ಗೊಲ್ಲರಹಟ್ಟಿ ಗ್ರಾಮಸ್ಥರು, ಕಾಡುಗೊಲ್ಲರ ಕಟ್ಟಿಮನೆಗಳಅಣ್ಣ-ತಮ್ಮಂದಿರು ಹಾಗೂ ನೆಂಟರು ಸೇರಿದಂತೆ ಸುತ್ತಮುತ್ತಲಿನ ಭಕ್ತರು ಪೂಜೆಯಲ್ಲಿ ಭಾಗಿಯಾಗಿದ್ದರು.
About The Author
Discover more from JANADHWANI NEWS
Subscribe to get the latest posts sent to your email.