September 15, 2025
FB_IMG_1731416245768.jpg


ಹಿರಿಯೂರು:
ನಮ್ಮ ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿಯ ಪ್ರತೀಕವಾದ ಜಾನಪದ ಕಲೆಯನ್ನು ಮತ್ತು ಸಂಘಟಿತ ಮತ್ತು ಅಸಂಘಟಿತ ಜಾನಪದ ಕಲಾವಿದರನ್ನು ಗುರುತಿಸಿ, ಉಳಿಸಿ ಬೆಳೆಸಬೇಕಲ್ಲದೆ ಕಲಾವಿದರಿಗೆ ಸರ್ಕಾರದಿಂದ ಪ್ರೋತ್ಸಾಹವನ್ನು ನೀಡಬೇಕು ಎಂಬುದಾಗಿ ಮಲ್ಲೇಣು ಶ್ರೀ ಶಿವಲಿಂಗಪ್ಪ ಸ್ವಾಮೀಜಿಯವರು ಹೇಳಿದರು.
ತಾಲ್ಲೂಕಿನ ಮಲ್ಲೇಣು ಗ್ರಾಮದ ಬಯಲು ರಂಗಮಂದಿರದಲ್ಲಿ ಹಗಲು ವೇಷಗಾರರ ಸಾಂಸ್ಕೃತಿಕ ಕಲಾಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 69ನೇ ಕನ್ನಡರಾಜ್ಯೋತ್ಸವ ಕಾರ್ಯಕ್ರಮವನ್ನು ಕರಡಿ ಮಜಲು ನುಡಿಸುವುದರ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಹಗಲು ವೇಷ ಕಲಾ ಪ್ರದರ್ಶನಚಿಕ್ಕುಂತಿ, ಶ್ರೀನಿವಾಸ್, ಮೊಳಕಾಲ್ಮೂರು ತಾಲ್ಲೂಕು, ಕಹಳೆ ಸಾಂಸ್ಕೃತಿಕ ಕಲಾ ಸಂಘ ಎಂ.ಡಿ.ಕೋಟೆ ಅಜಯ್ ಕುಮಾರ್, ಮಸ್ಕಲ್ ಭಜನಾ ಮಂಡಳಿ ಕಲಾವಿದರಿಂದ ಭಜನೆ, ಕೊರವ ಕುಣಿತ ಮಲ್ಲಿಕಾರ್ಜುನ, ಮದಕರಿನಾಯಕನ ಕೋಟೆ ಕರಡಿ ಮಂಜುಳಾ ಸಾಂಸ್ಕೃತಿಕ ಕಲಾಸಂಘ ಮಹೇಶ್ ಎಂ.ಡಿ. ಕೋಟೆ, ಹಿರಿಯೂರು ತಾಲ್ಲೂಕು ಜಾನಪದ ಗೀತೆಗಳು, ಬಿಕ್ಷಾಪತಿ, ರಾಯಪುರ, ಮೊಳಕಾಲ್ಮೂರು ತಾಲ್ಲೂಕು, ಚಿತ್ರಗೀತೆಗಳು, ಕೃಷ್ಣಪ್ಪ ಮತ್ತು ರಂಗಸ್ವಾಮಿ, ಕೆ.ಎಂ.ಕೊಟ್ಟಿಗೆ ಇವರುಗಳು ಕರಡಿಮಜಲು ನುಡಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಕೆ.ಮಲ್ಲಪ್ಪ ಮತ್ತು ರಂಗನಾಥ, ಮಲ್ಲಣ್ಣ ಹಾಗೂ ತುಮಕೂರು ಜಿಲ್ಲಾ ಅಲೆಮಾರಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ರವಿಕುಮಾರ್ ಮತ್ತು ಹಗಲು ವೇಷದ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷರಾದ ಗುರುಮೂರ್ತಿ ಮತ್ತು ಕಣಿವೆಮಾರಿಕಾಂಬ ಅನಾಥ ವೃದ್ಧಾಶ್ರಮದ ಕೃಷ್ಣಪ್ಪ ಕಲಾವಿದರು ಭಾಗವಹಿಸಿದ್ದರು.
ಈ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷರಾದ ಗುರುಮೂರ್ತಿ ಮತ್ತು ಕೃಷ್ಣಪ್ಪನವರು ಅಚ್ಚುಕಟ್ಟಾಗಿ ನಡೆಸಿದರು. ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading