ಚಳ್ಳಕೆರೆ ನ.12
ತಾಲೂಕಿನ 20, ಪರೀಕ್ಷಾ ಕೇಂದ್ರದಲ್ಲಿ ನ.15 ರಂದು ಅನಕ್ಷರ ಗ್ರಾಪಂ ಸದಸ್ಯರಿಗೆ ಸಾಕ್ಷರ ಸನ್ಮಾನ ಕಲಿಕಾ ಪ್ರಗತಿಯ ಆಂತರಿಕ ಮೌಲ್ಯಮಾಪನ ಪರಿಕ್ಷೆ ನಡೆಯಲಿದೆ.
ತಾಲೂಕಿನ20 ಗ್ರಾಮಪಂಚಾತಿಗಳಲ್ಲಿ ಓದಲು .ಸಹಿಮಾಡಲು ಬಾರದ ಗ್ರಾಮ ಪಂಚಾಯಿತಿಯ
ಅನಕ್ಷರಸ್ಯ ಚುನಾಯಿತ ಪ್ರತಿನಿಧಿಗಳಿಗೆ ಅಬ್ದುಲ್ ನಜೀರ್ ಸಾಬ್, ಗ್ರಾಮೀಣಾಭಿವೃದ್ಧಿ ಮತ್ತು
ಪಂಚಾಯತ್ ರಾಜ್ ಸಂಸ್ಥೆ ವತಿಯಿಂದ ದಿನಾಂಕ: 1-9-2024 ರಿಂದ 20-10-2024 ರವರೆಗೆ ‘ಸಾಕ್ಷರ
ಸನ್ಮಾನ’ ಕ್ರಿಯಾತ್ಮಕ ಸಾಕ್ಷರತಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಸ್ವಯಂ ಸೇವಕರ ಮೂಲಕ ಅಕ್ಷರ ಕಲಿಕ
ತರಬೇತಿ ಕಾರ್ಯಕ್ರಮ ಮಾಡಲಾಗಿತ್ತು.
ಸಾಕ್ಷರರಾದವರ ಕಲಿಕಾ ಪ್ರಗತಿಯನ್ನು ನ.15 ರಂದು 46 ಜನ ಗ್ರಾಪಂ ಸದಸ್ಯರಿಗೆ ಗ್ರಾಮಪಂಚಾಯಿತಿಗಳ ಅರಿವು ಕೇಂದ್ರಗಳಲ್ಲಿ ಮೌಲ್ಯಮಾಪನ ಪರಿಕ್ಷೆ ನಡೆಯಲಿದೆ.
ಯಾವ ಕೇಂದ್ರದಲ್ಲಿ ನಡೆಯಲಿದೆ….
ತಾಲುಯಕಿನ ದೇವರೆಡ್ಡಿಹಳ್ಳಿ 1.ಬೆಳಗೆರೆ,1.ಅಬ್ಬೇನಹಳ್ಳಿ2.ಹಿರೆಹಳ್ಳಿ1. ಎನ್.ಮಹೇವಪುರ1. ಎನ್.ದೇವರಹಳ್ಳಿ,5.ಓಬಳಾಪುರ2.ತಿಮ್ಮೊ್ಪಯ್ಯನಹಳ್ಳಿ1. ಸಿದ್ದೇಶ್ವರನದುರ್ಗ1. ಮಿರಸಾಬಿಹಳ್ಳಿ3. ಕಾಲುವೆಹಳ್ಳಿ3. ಘಟಪರ್ತಿ2.ದೇವರೆಡ್ಡಿಹಳ್ಳಿ3.ಗೌರಸಮುದ್ರ1.ಬುಡ್ನಹಟ್ಟಿ3.ಗೌಡಗೆರೆ1.ಜಾಜೂರು5.ಪಗಡಲಬಂಡೆ1.ದೊಡ್ಡೇರಿ5.ಮಲ್ಲೂರಹಳ್ಳಿ2 ಒಟ್ಟು ಇಪ್ಪತ್ತು ಗ್ರಾಮಪಂಚಾಯಿತಿ ಗಳಲ್ಲಿ ಒಟ್ಟು 46 ಅನಕ್ಷರಸ್ಥ ಸದಸ್ಯರಿಗೆ
ಓದು–ಬರಹ ಕಲಿಸಿ, ಲೆಕ್ಕಾಚಾರದಲ್ಲಿ ಸ್ವಾವಲಂಬಿಗಳಾಗಿ ಮಾಡುವುದು, ಸಭಾ ನೋಟಿಸ್, ನಡಾವಳಿ ಮತ್ತು ಮಾರ್ಗಸೂಚಿಗಳನ್ನು ಸ್ವತಃ ಓದಿ ಆರ್ಥಮಾಡಿಕೊಳ್ಳುವಂತೆ ಸಜ್ಜುಗೊಳಿಸುವುದು ಮತ್ತು ಸ್ಥಳೀಯ ಆಡಳಿತದ ನೀತಿ ನಿರೂಪಣೆಯಲ್ಲಿ ಸಕ್ರಿಯವಾಗಿ ಭಾಗಿಯಾಗುವಂತೆ ಮಾಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶ’ ದಿಂದ ಚುನಾಯಿತ ಅನಕ್ಷರಸ್ಥ ಸದಸ್ಯರಿಗೆ ಸಾಕ್ಷರ ಸನ್ಮಾನ’ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗುವವರಿಗೆ ತರಬೇತಿ ಕಿಟ್ ಮತ್ತು ಗೌರವಧನ ಬೋಧಕರಿಗೆ ಗೌರವಧನ ನೀಡಲಾಗುತ್ತು ನ.15 ರಂದು ಕಲಿಕೆಯ ಬಗ್ಗೆ ಪರೀಕ್ಷೆ ನಡಯಲಿದೆ .
About The Author
Discover more from JANADHWANI NEWS
Subscribe to get the latest posts sent to your email.