
ಚಳ್ಳಕೆರೆ ನ.12. ನೀರು ಕುಡಿಯಲು ಹೋದ ಬಾಲಕ ವಿದ್ಯುತ್ ಅವಘಟಕ್ಕೆ ಮೃತಪಟ್ಟ ಘಟನೆ ಪಿಡಿಒ ಹಾಗೂ ಕರವಸೂಲಿಗಾರನ ಮೇಲೆ ತಳಕು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಮನ್ನೆಕೋಟೆ ಗ್ರಾಪಂ ವ್ಯಾಪಿಯ ಕೋಡಿಹಳ್ಳಿ ಗ್ರಾಮದ 9 ನೇ ತರಗತಿ ಲೋಕೇಶ್ ತಂದೆಗೆ ಊಟಕೊಡಲು ಹೋಗುವ ದಾರಿ ಮಧ್ಯೆ ಗ್ರಾಪಂ ಕುಡಿಯುವ ನೀರು ಸರಬರಾಜು ಬೋವೆರ್ ಬಳಿ ನೀರು ಕುಡಿಯಲು ಹೋಗಿ ವಿದ್ಯುತ್ ಅವಘಡಕ್ಕೆ ತುತ್ತಾಗಿ ಮೃತಪಟ್ಟಿದ್ದನು.
ಗ್ರಾಮಪಂಚಾಯಿತಿ ಅಧಿಕಾರಿಗಳ ನಿರಗಲಕ್ಷದಿಂದ ನನ್ನ ಮಗ ಮೃತಪಟ್ಟಿದ್ದಾನೆ ಎಂದು ತಳಕು ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪಿಡಿಒ ಗಿರೀಶ್ ಹಾಗೂ ಕರವಸೂಲಿಗಾರ ಮಲ್ಲಿಕಾರ್ಜುನ ಇಬ್ಬರ ಮೇಲೆ ತಳಕು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
About The Author
Discover more from JANADHWANI NEWS
Subscribe to get the latest posts sent to your email.