
ಹಿರಿಯೂರು :
ಧರ್ಮಪುರ ಹೋಬಳಿಯ ಮದ್ದಿಹಳ್ಳಿ ಗ್ರಾಮದಲ್ಲಿ ಹನುಮಕ್ಕಹಳ್ಳಪ್ಪನವರ ಜಮೀನಿನಲ್ಲಿ ತಡರಾತ್ರಿ ಬಂದು ಅಡಿಕೆ ಮರಗಳನ್ನು ಕಡಿದು ಹಾಕಿರುವುದು ಖಂಡನೆ ವಿಚಾರ ಈ ಕೂಡಲೇ ಪೊಲೀಸರು ಆ ದುಷ್ಕರ್ಮಿಗಳನ್ನು ಹಿಡಿದು ಸೂಕ್ತಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಧರ್ಮಪುರ ಕಾಂಗ್ರೆಸ್ ಮುಖಂಡರಾದ ಬಂಡಿವೀರಣ್ಣಗೌಡರವರು ಪೋಲೀಸ್ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಒಬ್ಬ ರೈತ ಒಂದು ಗಿಡ ಬೆಳೆಸುವುದು ಎಷ್ಟು ಕಷ್ಟ ಎಂಬುದು ಒಬ್ಬ ರೈತನಿಗೆ ಮಾತ್ರ ಗೊತ್ತು. ಇಂತಹ ಹೇಡಿತನದ ಕೆಲಸ ಮಾಡುವನು ಈ ಸಮಾಜಕ್ಕೆ ಅವಶ್ಯಕತೆ ಇಲ್ಲ. ಏನೇ ವೈಯಕ್ತಿಕ ದ್ವೇಷಗಳಿದ್ದರೆ ಅವುಗಳನ್ನು ಕುಳಿತು ಮಾತನಾಡಿ, ಬಗೆಹರಿಸಿಕೊಳ್ಳಬೇಕೇ ಹೊರತು ಹೀಗೆ ಬೆಳೆಸಿದ ಮರಗಳನ್ನು ಕಡಿದು ರೈತರ ಹೊಟ್ಟೆಮೇಲೆ ಹೊಡೆಯಬಾರದು, ಈ ಕೂಡಲೇ ಇಂತಹ ದುಷ್ಕರ್ಮಿಗಳನ್ನು ಜೈಲಿಗಟ್ಟಬೇಕು ಎಂಬುದಾಗಿ ಅವರು ಪೋಲೀಸರಿಗೆ ಒತ್ತಾಯಿಸಿದ್ದಾರೆ.



About The Author
Discover more from JANADHWANI NEWS
Subscribe to get the latest posts sent to your email.