
ಪರಶುರಾಂಪುರ-ಡಾ.ಬಿ.ಆರ್ ಅಂಬೇಡ್ಕರ್ ಪಕ್ಷ ಹಾಗೂ ಜನಾಂಗಕ್ಕೆ ಸೀಮಿತರಾಗದೇ,ಸಂವಿಧಾನ ರಚನೆ ಮೂಲಕ ವಿಶ್ವಕ್ಕೆ ಮಾದರಿಯಾದ ಭಾರತರತ್ನ ಎಂದು ಶಾಸಕ ಟಿ.ರಘುಮೂತಿ೯ ತಿಳಿಸಿದರು.



ಗ್ರಾಮದ ಕೆಪಿಎಸ್ ಶಾಲಾ ಆವರಣದಲ್ಲಿ ಸೋಮವಾರ ಹೋಬಳಿ ಮಟ್ಟದ ಎಲ್ಲಾ ದಲಿತ ಸಂಘಟನೆಗಳು,ಮಾದಿಗ ನೌಕರ ವಗ೯ ಹಾಗೂ ದಲಿತ ಭೀಮಾ ಯುವಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಡಾ.ಭೀಮಾರಾವ್ ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಜಯಂತೋತ್ಸವ ಕಾಯ೯ಕ್ರಮದಲ್ಲಿ ಮಾತನಾಡಿದರು.
ಹಲವಾರು ದಾಶ೯ನಿಕರು ಸಾಂಸ್ಕೃತಿಕವಾಗಿ ಅಪಾರ ಕೊಡುಗೆ ನೀಡಿದ್ದಾರೆ.ಅಂತವರ ಜಯಂತಿಗಳನ್ನ ಎಲ್ಲರೂ ಸೇರಿ ಪಕ್ಷಾತೀತವಾಗಿ ಆಯೋಜನೆಯಾಗುವುದರ ನಡುವೆ
ಅಂಬೇಡ್ಕರ್ ಹೆಸರನ್ನು ಕೇಳದವರಿಲ್ಲ ಆಗಾಗಿ ಎಲ್ಲರಿಗೂ ದಾರಿದೀಪವಾಗುತ್ತಾ,ಕೊಡುಗೆಯಾಗಿ ಸಂವಿಧಾನ ನೀಡಿದ್ದಾರೆ ಎಂದರು.
ಕವಿ,ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ,ನಾಡಿಗೆ ಅಪಾರ ಕೊಡುಗೆ ನೀಡಿದ ಮಹಾತ್ಮರ ಜಯಂತಿ ಆಚರಣೆ ಎಂದರೇ ಅದೋಂದು ಜಾಗೃತಿ ಕಾರ್ಯಕ್ರಮ ಎಂದರು.
ಗ್ರಾಪಂ ಸದಸ್ಯ ಪಿ.ಓ ಪ್ರಕಾಶ್ ಮಾತನಾಡಿ, ಸಂವಿಧಾನ ನಮ್ಮಗಳ ಜೀವಾಳ ಅದರ ಆಶಯಗಳನ್ನ ತಿಳಿಯುತ್ತಾ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಮೂಲಕ ಸಮಾಜಮುಖಿ ಬನ್ನಿ ಎಂದರು.
ಈ ವೇಳೆಯಲ್ಲಿ ಅತಿಥಿಗಳನ್ನ ಕುಂಭಮೇಳ ಹಾಗೂ ಜನಪದ ವಾದ್ಯಗಳೊಂದಿಗೆ ವೇದಿಕೆಗೆ ಕರೆತರಲಾಯಿತು.ಬಳಿಕ ಗಣ್ಯರು ಬುದ್ಧ,ಬಸವ, ಅಂಬೇಡ್ಕರ್, ಜಗಜೀವನರಾಂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ವೇದಿಕೆಯಲ್ಲಿ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳ ಜೊತೆ ಇನ್ನಿತರನ್ನ ಗೌರವಿಸಲಾಯಿತು.
ಗ್ರಾಪಂ ಅಧ್ಯಕ್ಷ ರುದ್ರೇಶ್, ಉಪಾಧ್ಯಕ್ಷೆ ಸರೋಜಮ್ಮ, ಸದಸ್ಯರಾದ ಜಗಲೂರುಸ್ವಾಮಿ, ನಾಗಭೂಷಣ್,ಪಿ.ಓ ಪ್ರಕಾಶ್, ಓಬಳೇಶ್, ಕೃಷ್ಣಪ್ಪ,ಅನಿತಾ,ಜಿಲ್ಲಾ ಗ್ಯಾರಂಟಿ ಸದಸ್ಯರಾದ ಚೆನ್ನಕೇಶವ,ಪ್ರಕಾಶ್,ಕೆಡಿಪಿ ಸದಸ್ಯ ಬಸವರಾಜು, ಜಯಕುಮಾರ್,ಜಿಪಂ ಮಾಜಿ ಅಧ್ಯಕ್ಷ ರಂಗಸ್ವಾಮಿ,ಕೆ.ಬಾಬು,ಆಂಜನೇಯ, ಧನಂಜಯ,ನಗರಸಭಾ ಸದಸ್ಯ ರಮೇಶ ಗೌಡ ಹಾಗೂ ಗ್ರಾಮ ಸೇರಿದಂತೆ ಹೋಬಳಿ ವ್ಯಾಪ್ತಿಯ ದಲಿತ ಸಂಘಟನೆಗಳ ಪದಾಧಿಕಾರಿಗಳು,ಕಾಯ೯ಕ್ರತ೯ರು, ಹಿರಿಯರು,ಮುಖಂಡರು,ಗ್ರಾಮಸ್ಥರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.