ಚಳ್ಳಕೆರೆ ತಾಲೂಕು ಸಾಣಿಕೆರೆಯ ವೇದ ಪಿಯು ಕಾಲೇಜು 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಗಮನ ಸೆಳೆದಿದೆ.

ಕಾಲೇಜಿನ ವಿಜ್ಞಾನ ವಿಭಾಗದ ಪಿಸಿಎಂಸಿ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ.100% ಫಲಿತಾಂಶ ದಾಖಲಾಗಿದ್ದು, ಪಿಸಿಎಂಬಿ ವಿಭಾಗದಲ್ಲಿ ಶೇ.99% ಫಲಿತಾಂಶ ದೊರೆತಿದೆ. ವಿದ್ಯಾರ್ಥಿಗಳ ಈ ಸಾಧನೆ ಶಿಕ್ಷಣ ಕ್ಷೇತ್ರದಲ್ಲಿ ಕಾಲೇಜಿನ ಹೆಸರು ಮತ್ತಷ್ಟು ಎತ್ತಿದೆ.
ಗಣಿತ ವಿಷಯದಲ್ಲಿ 5 ವಿದ್ಯಾರ್ಥಿಗಳು, ಕನ್ನಡದಲ್ಲಿ 1 ವಿದ್ಯಾರ್ಥಿ ಹಾಗೂ ಅಕೌಂಟ್ಸ್‌ನಲ್ಲಿ 1 ವಿದ್ಯಾರ್ಥಿ ನೂರಕ್ಕೆ ನೂರು ಅಂಕಗಳನ್ನು ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.
ಪಿಸಿಎಂಬಿ ವಿಭಾಗದ ವಿನೋದ್ ಕುಮಾರ್ ಎಸ್.ಆರ್ ಅವರು 584 ಅಂಕಗಳೊಂದಿಗೆ 97.33% ಗಳಿಸಿ ಕಾಲೇಜಿನಲ್ಲಿ ಶ್ರೇಷ್ಠ ಸ್ಥಾನ ಪಡೆದಿದ್ದು, ವಾಣಿಜ್ಯ ವಿಭಾಗದಲ್ಲಿ ರಂಗಸ್ವಾಮಿ ಆರ್ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಒಟ್ಟು 53 ವಿದ್ಯಾರ್ಥಿಗಳು distinction ಹಾಗೂ 69 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುವುದು ವಿಶೇಷವಾಗಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶ್ರಮಿಸಿದ ಉಪನ್ಯಾಸಕರು, ಪ್ರಾಂಶುಪಾಲರು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಡಿ.ಟಿ. ರವೀಂದ್ರ ಅವರನ್ನು ಸಾರ್ವಜನಿಕರು ಅಭಿನಂದಿಸಿದ್ದಾರೆ.
ಉತ್ತಮ ಶಿಕ್ಷಣ ಮತ್ತು ಉತ್ತಮ ಫಲಿತಾಂಶಗಳ ಮೂಲಕ ವಿದ್ಯಾರ್ಥಿಗಳ ಉಜ್ಜ್ವಲ ಭವಿಷ್ಯ ನಿರ್ಮಾಣದಲ್ಲಿ ವೇದ ಪಿಯು ಕಾಲೇಜು ಮಹತ್ವದ ಪಾತ್ರವಹಿಸುತ್ತಿದೆ.
ದಾಖಲಾತಿಗಾಗಿ ಸಂಪರ್ಕ ಸಂಖ್ಯೆ:
8884587456, 9663090845, 7899703515, 6361719488, 6362132893
About The Author
Discover more from JANADHWANI NEWS
Subscribe to get the latest posts sent to your email.