ಚಳ್ಳಕೆರೆ:ತಾಲೂಕಿನ ಸಾಣೀಕೆರೆ ವೇದಾ ಪದವಿ ಪೂರ್ವ ಕಾಲೇಜಿನ ಚಳ್ಳಕೆರೆ ತಾಲೂಕಿನ ಚೌಳಕೆರೆ ಗ್ರಾಮದ ವಿದ್ಯಾರ್ಥಿನಿ ದಿವ್ಯ ಚೌಳಕೆರೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 511ಅಂಕಗಳನ್ನು (85.16%)ಪಡೆಯುವ ಮೂಲಕ ಇಡೀ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಮತ್ತು
ವಿದ್ಯಾರ್ಥಿನಿಯ ಈ ಅದ್ಭುತ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಉಪನ್ಯಾಸಕ ವೃಂದದವರು ಹರ್ಷ ವ್ಯಕ್ತಪಡಿಸಿ, ಸಿಹಿ ಹಂಚಿ ಅಭಿನಂದಿಸಿದ್ದಾರೆ.
ಕಠಿಣ ಪರಿಶ್ರಮ ಮತ್ತು ನಿರಂತರ ಅಧ್ಯಯನದಿಂದ
ಈ ಸಾಧನೆ ಸಾಧ್ಯವಾಗಿದೆ ಎಂದು ದಿವ್ಯ ತಮ್ಮ ಯಶಸ್ಸಿನ ಗುಟ್ಟನ್ನು ಹಂಚಿಕೊಂಡಿದ್ದಾರೆ.

ಅವರ ಈ ಸಾಧನೆಗೆ ಪೋಷಕರು ಮತ್ತು ಗುಂತಕೋಲಮ್ಮನಹಳ್ಳಿ ಗ್ರಾಮದ ಪಿಡಿಒ ರಮೇಶ್. ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
About The Author
Discover more from JANADHWANI NEWS
Subscribe to get the latest posts sent to your email.