
ಹಿರಿಯೂರು:
ತಾಲ್ಲೂಕಿನ ಜವನಗೊಂಡನಹಳ್ಳಿ ಗ್ರಾಮದಲ್ಲಿ ಪ್ರಕೃತಿ ವಿಕೋಪದಿಂದಾಗಿ ಆಕಸ್ಮಿಕ ಮಳೆ, ಗಾಳಿ ಬಂದು ಕರಿಯಾಲ ಗ್ರಾಮಪಂಚಾಯಿತಿ ಮೂಡ್ಲಹಟ್ಟಿ ರೈತರಾದ ಮಾರಪ್ಪನವರಿಗೆ ಸೇರಿದ ಅಡಿಕೆ ತೋಟ ಮತ್ತು ಗ್ರಾಮದಲ್ಲಿ ಓದೋ ಮಾರಪ್ಪ, ದೇವರಾಜ, ಪಾಂಡುರಂಗಪ್ಪ ಮತ್ತು ಕಮಲಮ್ಮ, ನಾಗರಾಜ್ ಇವರಿಗೆ ಸೇರಿದ ಮನೆಗಳು ಕುಸಿದು ಬಿದ್ದಿವೆ ಮತ್ತು ಬಿ.ಕೆ. ಹಟ್ಟಿ ಗ್ರಾಮದ ಸುರೇಶ್ ರವರಿಗೆ ಸೇರಿದ ಹಸು ಸಾವನ್ನಪ್ಪಿದೆ ಎಂಬುದಾಗಿ ತಿಳಿದುಬಂದಿದೆ.
ನಂತರ ಮರಡಿಹಟ್ಟಿ ಗ್ರಾಮದಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ಮತ್ತು ಈ ಮೂರು ಗ್ರಾಮಗಳಿಗೆ ಸೇರಿದ ಸುಮಾರು ಐವತ್ತಕ್ಕೂ ಹೆಚ್ಚು ರೈತರ ಅಡಿಕೆ ಮತ್ತು ತೆಂಗಿನ ತೋಟಗಳು ಮುರಿದು ಬಿದ್ದಿವೆ.
ಸದರಿ ಗ್ರಾಮಗಳಿಗೆ ತಹಶೀಲ್ದಾರ್ ರಾದ ರಾಜೇಶ್ ಕುಮಾರ್ ,ಗ್ರಾಮ ಸಹಾಯಕರಾದ ಹನುಮಂತಪ್ಪ, ಮತ್ತು ಪಶುಇಲಾಖೆ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ಈ ರೈತರಿಗೆ ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಲಕ್ಷ್ಮೀದೇವಿ ವೀರೇಶ್, ಸದಸ್ಯರಾದ ಬಸವರಾಜು, ರಾಮಣ್ಣ, ಮಾರಪ್ಪ, ನಿರಂಜನ್, ಸುರೇಂದ್ರ ಮೋಹನ, ಮಹಾಲಿಂಗಪ್ಪ ಮತ್ತು ಚಿತ್ರಪ್ಪ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.




About The Author
Discover more from JANADHWANI NEWS
Subscribe to get the latest posts sent to your email.