
ನಾಯಕನಹಟ್ಟಿ ಪಟ್ಟಣದ ಪುರಾತನ ವಿಜಯ ವೀರಭದ್ರ ಸ್ವಾಮಿ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ಶನಿವಾರ ಶಾಸ್ತ್ರ ಸಂಪ್ರದಾಯದಂತೆ ಅದ್ದೂರಿಯಾಗಿ ನೆರವೇರಿತು.




ಶನಿವಾರ ಸಕಲ ಪೂಜಾ ವಿಧಿ ವಿಧಾನಗಳ ಮೂಲಕ ವಿಜಯವೀರಭದ್ರಸ್ವಾಮಿ ದೇವರ ಜಾತ್ರೆಗೆ ಸಿದ್ಧತೆ ಕೈಗೊಳ್ಳಲಾಗಿತ್ತು ಸಂಜೆ 4:00ಗೆ ಜಾತ್ರೆಗಾಗಿ ರಥವನ್ನು ಸಿಂಗರಿಸಿ ಶಾಸ್ತ್ರೋಕ್ತವಾಗಿ ದೇವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಇನ್ನೂ ಗ್ರಾಮದ ಕಲ್ಲಪರ ತಿಪ್ಪೇಸ್ವಾಮಿ ವಂಶಸ್ಥರಿಂದ ರಥಕ್ಕೆ ಬಲಿಯನ್ನ ತರಲಾಯಿತು ಶ್ರೀ ವಿಜಯ ವೀರಭದ್ರ ಸ್ವಾಮಿ ದೇವರ ರಥದ ಗಾಲಿಗಳಿಗೆ ಎಡೆ ಹಾಕಲಾಯಿತು
ನಂತರ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆಯಲ್ಲಿ ನಾಯಕನಹಟ್ಟಿ ಗ್ರಾಮದ ಆನಂದರ್ ಸ್ವಾಮಿ
₹ 20,000.ರೂ. ಮುಕ್ತಿ ಬಾವುಟವನ್ನು ತಮ್ಮದಾಗಿಸಿಕೊಂಡರು.
ನಂತರ ಮಹಾಮಂಗಳಾರತಿ ಕಾರ್ಯ ನೆರವೇರಿಸಿ ರಥವನ್ನು ಎಳೆಯಲಾಯಿತು.
ರಥೋತ್ಸವದಲ್ಲಿ ಸಾಂಪ್ರದಾಯಿಕ ವಾದ್ಯಗಳು ಡೊಳ್ಳು ಕುಣಿತ ವೀರಗಾಸೆ ನೋಡುಗರ ಕಣ್ಮನ ಸೆಳೆಯಿತು ಸಂಜೆ 7ಕ್ಕೆ ರಥವನ್ನು ದೇವಾಲಯದ ಬಳ್ಳಿ ತಂದು ನಂತರ ದೇವರನ್ನು ಗುಡಿದುಂಬಿಸಲಾಯಿತು.
ಇದೇ ಸಂದರ್ಭದಲ್ಲಿ ಡಾ. ಎಸ್. ಹೆಚ್. ವಿಜಯಕುಮಾರ್,
ಎಂ. ವೈ. ಟಿ. ಸ್ವಾಮಿ, ವಕೀಲ ನಾಗರಾಜ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಂ. ಶಿವಸ್ವಾಮಿ, ಶಿವಕುಮಾರ್ ಭಂಡಾರಿ, ಪೋಸ್ಟ್ ಸಿದ್ದೇಶ್ವರ ಸ್ವಾಮಿ, ದಳವಾಯಿ ರುದ್ರಮುನಿ,
ಓಂ ಪ್ರಕಾಶ್, ತಳವಾರು ತಿಪ್ಪಣ್ಣ, ಮಡಿವಾಳರ ತಿಪ್ಪೇಸ್ವಾಮಿ, ಈಶಣ್ಣ,
ಆನಂದರ್ ನಾಗರಾಜ್, ಅರ್ಚಕರಾದ ಬಸವರಾಜ್ ಸ್ವಾಮಿ, ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸಿಬ್ಬಂದಿ ಎಸ್. ಸತೀಶ್, ಸೇರಿದಂತೆ ಶ್ರೀವಿಜಯ ವೀರಭದ್ರಸ್ವಾಮಿ ಸಮಿತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಗ್ರಾಮದ ದೈವಸ್ಥರು ಗ್ರಾಮಸ್ಥರು, ಪೊಲೀಸ್ ಇಲಾಖೆ, ಬೆಸ್ಕಾಂ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.