September 15, 2025
IMG-20250412-WA0124.jpg

ನಾಯಕನಹಟ್ಟಿ:: ಪ್ರತಿಯೊಬ್ಬ ಆಟಗಾರರು ಕ್ರೀಡಾ ಮನೋಭಾವವನ್ನು ಇಟ್ಟು ಕ್ರಿಕೆಟ್ ಕ್ರೀಡಾಕೂಟದಲ್ಲಿ ಯಶಸ್ವಿಯಾಗಬೇಕು. ಎಂದು ಗೌಡಗೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಟಿ. ರಂಗಪ್ಪ ಹೇಳಿದರು.

ಶನಿವಾರ ಸಮೀಪದ ಭೀಮಗೊಂಡನಹಳ್ಳಿ ಗ್ರಾಮದಲ್ಲಿ ಐದನೇ ಬಾರಿಗೆ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಕ್ರಿಕೆಟ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಉದ್ಘಾಟಿಸಿ ಮಾತನಾಡಿದ ಅವರು ಕ್ರಿಕೆಟ್ ಕ್ರೀಡಾಕೂಟದಲ್ಲಿ ದ್ವೇಷ ಭಾವನೆ ಇರಬಾರದು ಪ್ರತಿಯೊಬ್ಬ ಕ್ರೀಡಾಪಟು ಉತ್ತಮ ಆಟವನ್ನು ಆಡಿ ಗ್ರಾಮಕ್ಕೆ ಕೀರ್ತಿ ತರವಲ್ಲಿ ಮುಂಚೂಣಿಯಲ್ಲಿರಬೇಕು ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಈ ಕ್ರೀಡಾಕೂಟದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಉತ್ತಮವಾಗಿ ಆಟವಾಡಿ ಯಶಸ್ವಿಯಾಗಬೇಕು ಎಂದು ತಿಳಿಸಿದರು.

ಇನ್ನೂ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಗೌಡಗೆರೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಜಿ.ಒ ಓಬಳೇಶ್ ಮಾತನಾಡಿದರು ಗ್ರಾಮೀಣ ಪ್ರದೇಶದಲ್ಲಿ ಕಬ್ಬಡಿ .ಖೋ.ಖೋ. ಕ್ರಿಕೆಟ್ ಆಟಗಳನ್ನು ಸ್ನೇಹಿತರಂತೆ ಆಟವಾಡಬೇಕು ಕ್ರಿಕೆಟ್ ಕ್ರೀಡಾಕೂಟದಲ್ಲಿ ಅಣ್ಣತಮ್ಮಂದಿರಂತೆ ಆಟವಾಡಿ ಭೀಮಗೊಂಡನಹಳ್ಳಿ ಗ್ರಾಮದ ಕ್ರೀಡಾಪಟುಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಯಶಸ್ವಿಯಾಗಿ ಹೊರಹೊಮ್ಮಬೇಕು ಎಂದರು.

ಇದೇ ಸಂದರ್ಭದಲ್ಲಿ ಜಿಡಿಆರ್ ತಿಪ್ಪೇಸ್ವಾಮಿ ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌಡಗೆರೆ ಜಿ.ಟಿ .ತಿಪ್ಪೇಸ್ವಾಮಿ, ಗೌಡಗೆರೆ ಗ್ರಾಮ ಪಂಚಾಯತಿ ಸದಸ್ಯನಿ ಪತಿ ಜಿ.ಹೆಚ್. ರಂಗಸ್ವಾಮಿ ಭೀಮಗೊಂಡನಹಳ್ಳಿ. ಮುಖ್ಯ ಅತಿಥಿಗಳಾದ ಜಿ ಹನುಮಂತಪ್ಪ ಗೌಡ್ರು, ಚಂದ್ರಪ್ಪ, ಎಸ್. ತಿಪ್ಪೇಸ್ವಾಮಿ, ಬಸವರಾಜ್ ಪೂಜಾರಿ, ಕೆ ಓ ನಾಗರಾಜ್, ಸಣ್ಣ ರಂಗಪ್ಪ, ಗೌತಮ್, ಸಮವಸ್ತ್ರ ದಾನಿಗಳಾದ ಅಜಯ್ ಭೀಮಗೊಂಡನಹಳ್ಳಿ. ಸೇರಿದಂತೆ ಭೀಮಗೊಂಡನಹಳ್ಳಿ ಕ್ರೀಡಾಪಟುಗಳು ಹಾಗೂ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading