ಚಳ್ಳಕೆರೆ: ಸಾರ್ವಜನಿಕ ಜೀವನದಲ್ಲಿ ದಕ್ಷ ಆಡಳಿತ ನಡೆಸಿ, ದೀನ ದಲಿತರಿಗೆ ನ್ಯಾಯಸಮ್ಮತ ಸೇವೆ ನೀಡುವುದೇ ನಿಜವಾದ ಅಧಿಕಾರಿಯ ಕರ್ತವ್ಯ ಎಂದು ದುರ್ಗಾವಾರ ಎಲ್‌ಐಸಿ ಏಜೆಂಟ್ ರಂಗಸ್ವಾಮಿ ಹೇಳಿದರು.
ಅವರು ತಾಲ್ಲೂಕಿನ ದುರ್ಗವಾರ ಗ್ರಾಮದ ಸ್ವಗೃಹಕ್ಕೆ ಆಗಮಿಸಿದ ಮೈಸೂರು ಅರಸು ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಎಸ್. ನಾಗರಾಜ್ ಅವರನ್ನು ದುರ್ಗಾವರ ಎಲ್‌ಐಸಿ ರಂಗಸ್ವಾಮಿ ಸ್ನೇಹ ಬಳಗದ ವತಿಯಿಂದ ಸನ್ಮಾನಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಯಮ್ಮ, ಗೌಡಯ್ಯ, ಹೊನ್ನೂರು ಗೋವಿಂದಪ್ಪ, ದಿಶಾ ಸಮಿತಿ ಚಿತ್ರದುರ್ಗ ಜಿಲ್ಲೆ ಸದಸ್ಯ ಟಿ. ರಂಗಸ್ವಾಮಿ (ಎಲ್‌ಐಸಿ, ದುರ್ಗಾವರ), ಬೇಕರಿ ವಿಜಯ್, ಕೆ. ತಮ್ಮಣ್ಣ, ಸಿ.ಎನ್. ಹಳ್ಳಿ ಕೃಷ್ಣಮೂರ್ತಿ, ವಾಣಿಜ್ಯ ಉದ್ಯಮಿಗಳು ಕಲ್ಯಾಣದುರ್ಗ, ಟಿ. ವೆಂಕಟೇಶ್ (ಎಲ್‌ಐಸಿ), ಟಿ. ನಾಗರಾಜ್ (ಕಾಂಟ್ರಾಕ್ಟರ್), ಟಿ. ಸಣ್ಣತಿಮ್ಮಣ್ಣ, ವೆಲ್ಡಿಂಗ್ ಶಾಪ್ ತಮ್ಮಣ್ಣ (ಕಲ್ಯಾಣದುರ್ಗ) ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.