March 17, 2026
1741790590548.jpg


ಹಿರಿಯೂರು :
ನಗರದ ಆರ್ಯವೈಶ್ಯ ಸಮಾಜದ ಆರ್ಯವೈಶ್ಯ ಮಂಡಳಿ ಅಂಗಸಂಸ್ಥೆಯಾದ ವಾಸವಿ ಅದೃಷ್ಠ ನಿಧಿ ಬಳಗ ಈಗಾಗಲೇ ಜನಪರ ಕಾಳಜಿಯಲ್ಲಿ ಸೇವಾಕಾರ್ಯಗಳನ್ನು ಮಾಡುತ್ತಾ ಆರ್ಯವೈಶ್ಯ ಸಮಾಜ ಮತ್ತು ನಗರದ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂಬುದಾಗಿ ವಾಸವಿ ಅದೃಷ್ಠ ನಿಧಿ ಬಳಗದ ಅಧ್ಯಕ್ಷರಾದ ಡಿ.ಎನ್.ವಿ ಬಾಬು ಹೇಳಿದರು.
ನಗರದ ವಾಸವಿ ಅದೃಷ್ಠ ನಿಧಿ ಬಳಗದ ವತಿಯಿಂದ ನಗರದ ದೇವಸ್ಥಾನಗಳ ಸ್ವಚ್ಛತೆಯನ್ನು ಕಾಪಾಡುವ ದೃಷ್ಟಿಯಿಂದ ನಗರದ ಎಲ್ಲಾ ದೇವಸ್ಥಾನಗಳಿಗೆ ಕಸದ ಪ್ಲಾಸ್ಟಿಕ್ ಕಂಟೇನರ್ ವಿತರಿಸಿ, ನಂತರ ಅವರು ಮಾತನಾಡಿದರು.
ನಗರದ ಪ್ರಮುಖ ಎಲ್ಲಾ ದೇವಸ್ಥಾನಗಳಿಗೆ ಕಸವನ್ನು ಹಾಕಲು ಪ್ಲಾಸ್ಟಿಕ್ ಕಂಟೇನರ್ ಗಳನ್ನು ನೀಡಲು ಹಣದ ನೆರವನ್ನು ನೀಡಿರುವ ಸದಸ್ಯರಾದ ಹೆಚ್.ಬಿ.ನಾಗೇಶ್ ರವರಿಗೆ ಆರ್ಯವೈಶ್ಯ ಮಂಡಳಿಯ ಮಾಜಿ ಅಧ್ಯಕ್ಷರು ಆರ್.ಪ್ರಕಾಶ್ ಕುಮಾರ್ ಕಾರ್ಯದರ್ಶಿ ಪಿ.ವಿ.ನಾಗರಾಜ್ ರವರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಎಲ್.ನಾರಾಯಣಾಚಾರ್, ತೇರುಮಲ್ಲೇಶ್ವರ ದೇವಸ್ಥಾನದ ಅರ್ಚಕರಾದ ವಿಶ್ವನಾಥಚಾರ್, ಆರ್.ಪ್ರಕಾಶ್ ಕುಮಾರ್, ಪಿ.ವಿ.ನಾಗರಾಜ್, ಪಿ.ಎಲ್.ಪುರುಷೋತ್ತಮ್, ಪ್ರಭಾಕರ್, ಹೆಚ್.ಬಿ.ನಾಗೇಶ್, ಬಾಲಾಜಿ, ರಘುನಂದನ್, ಸುರೇಶ್, ರಂಗನಾಥ್, ಎಂ.ವಿ.ಶ್ರೀನಿವಾಸ್, ರಾಧಾಕೃಷ್ಣ, ರಾಜೇಶ್, ಅನಿಲ್, ವಿಶ್ವನಾಥ್, ವರುಣ್, ನಾಗೇಶ್ ಕುಮಾರ್, ರುಕ್ಮಿಣಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading