January 29, 2026
IMG-20250312-WA0179.jpg

ಚಳ್ಳಕೆರೆ :ತಾಲೂಕಿನ ಗೌರಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಪಾರದರ್ಶಕವಾಗಿ ಕಾಮಗಾರಿಗಳು ನಡೆಸಿರುವ ದಾಖಲೆಗಳಿವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಓಬಣ್ಣ, ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ದಾಖಲೆ ಬಿಡುಗಡೆ ಮಾಡಿ ಮಾತನಾಡಿದರು.
ಸ್ಥಳೀಯ ರಾಜಕೀಯ ವಿರೋಧಿಗಳು ಅಭಿವೃದ್ದಿ ಕಾರ್ಯಗಳನ್ನು ಸಹಿಸಲಾಗದೆ ಪಂಚಾಯಿತಿ ಇಲಾಖೆ ಆಯುಕ್ತರಿಗೆ ಆಧಾರರಹಿತ ದೂರು ನೀಡಲಾಗಿದೆ. ಇದಕ್ಕೆ ದಾಖಲೆ ಸಹಿತ ಉತ್ತರ ನೀಡುತ್ತೇವೆ ಎಂದ ಅವರು, ಸುಮಾರು ೪೦ ವರ್ಷಗಳಿಂದ ಮೂಲ ಸೌಕರ್ಯಗಳಿಗೂ ಪರದಾಡುವ ಪರಿಸ್ಥಿತಿ ಇದ್ದ ಪಂಚಾಯಿತಿ ಹಳ್ಳಿಗಳಲ್ಲಿ ಖಾತ್ರಿ ಯೋಜನೆ ಬಳಸಿಕೊಂಡು ಅಭಿವೃದ್ದಿ ಮಾಡಲಾಗಿದೆ. ಗ್ರಾಮದ ಬಹುದೊಡ್ಡ ಕೆರೆ ನೂರಾರು ಕಾರ್ಮಿಕರ ಬಳಕೆಯಲ್ಲಿ ಹೂಳು ತೆಗೆಸಲಾಗಿದೆ. ಐತಿಹಾಸಿಕ ಗೌರಸಮುದ್ರ ಜಾತ್ರೆ ನಡೆಯುವ ಸ್ಥಳದಲ್ಲಿ ನೀರು ಮತ್ತು ಶೌಚಗೃಹ ವ್ಯವಸ್ಥೆ ಕಲ್ಪಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಪಾರ್ಕ್ ಮತ್ತು ಕಟ್ಟಡಗಳ ಅಭಿವೃದ್ದಿ ಮಾಡಲಾಗಿದೆ. ಕೌಶಲಾಭಿವೃದ್ದಿ ಕಟ್ಟಡ ಸೇರಿದಂತೆ ಗ್ರಾಮದ ರಸ್ತೆ ಬದಿಯಲ್ಲಿ ಅನುಪಯುಕ್ತವಾಗಿದ್ದ ಬಾವಿ ಮುಚ್ಚಲಾಗಿದೆ. ಗ್ರಾಮದಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ಬಾರ್ ಅಂಗಡಿಗಳನ್ನು ಗ್ರಾಮದಿಂದ ಹೊರ ಹಾಕಲಾಗಿದೆ. ಇದನ್ನು ಸಹಿಸಿಕೊಳ್ಳಲಾಗದೆ ಪಟ್ಟಭದ್ರ ಶಕ್ತಿಗಳು ರಾಜಕೀಯ ಪಿತೂರಿ ನಡೆಸಲಾಗುತ್ತಿದೆ. ಖಾತ್ರಿ ಯೋಜನೆ ಕಾಮಗಾರಿಗಳು ಸೇರಿದಂತೆ ೧೫ನೇ ಹಣಕಾಸಿನ ಅನುದಾನ ಬಳಕೆಗೆ ಪ್ರತಿಯೊಂದು ದಾಖಲೆ ಇದೆ. ಭೌತಿಕ ಅಭಿವೃದ್ದಿ ಕಾರ್ಯಗಳು ಮತ್ತು ದಾಖಲೆ ಸಹಿತ ಸಮಯ ಬಂದಾಗ ಉತ್ತರ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಗ್ರಾಪಂ ಸದಸ್ಯರಾದ ಜಿ.ಎಂ. ವೀರಣ್ಣ, ಮಲ್ಲೇಶಪ್ಪ, ಶಶಿಕುಮಾರ್, ಮಲ್ಲಯ್ಯ, ಮುಖಂಡರಾದ ಎಂ. ಬೊಮ್ಮಯ್ಯ, ತಿಪ್ಪೇಸ್ವಾಮಿ ಮತ್ತಿತರರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading