(ವರದಿ:ನಾಗತಿಹಳ್ಳಿಮಂಜುನಾಥ್)
ಹೊಸದುರ್ಗ: ತಾಲೂಕಿನ ಗೋರವಿನಕಲ್ಲು ಗ್ರಾಮದಲ್ಲಿ ಗ್ರಾಮದ ಗ್ರಾಮಸ್ಧರಿಂದ ಶ್ರೀ ವೀರ ಮಡಿವಾಳ ಮಾಚಿದೇವ ಜಯಂತಿ ಮಹೋತ್ಸವವನ್ನ ಅದ್ದೂರಿ ಹಾಗೂ ಅತ್ಯಂತ ವೈಭವಯುತವಾಗಿ ಆಚರಿಸಲಾಯಿತು.
ಮಡಿವಾಳ ಸಮುದಾಯದ ಕುಲ ದೈವ ೧೨ನೇ ಶತ ಮಾನದ ಶಿವಶರಣ, ಕಾಯಕ ಯೋಗಿ, ವಚನ ಸಂರಕ್ಷಕ, ಶ್ರೀ ವೀರ ಮಡಿವಾಳ ಮಾಚಿದೇವ ಸ್ವಾಮಿಯವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಟ್ಯಾಕ್ಟರ್ ಮೇಲೆ ಮಾಚಿದೇವರ ಬೃಹತ್ ಭಾವಚಿತ್ರವಕ್ಕೆ ಪೂಜೆ ಸಲ್ಲಿಸಿ ವಿವಿಧ ಅಲಂಕೃತ ಹೂವುಗಳಿಂದ ಶೃಂಗರಿಸಿ ಮಾಚಿದೇವರ ಭಾವಚಿತ್ರವನ್ನ ಗ್ರಾಮದ ಪ್ರತಿಯೊಂದು ಕೇರಿಯಲ್ಲೂ ಸಹಾ ಮೆರವಣಿಗೆ ಮಾಡಲಾಯಿತು.
ವೀರಗಾಸೆ: ಜಯಂತೋತ್ಸವದಲ್ಲಿ ಕಡೂರು ತಾಲೂಕು ಬಿಸಿಲೇರಿ ಗ್ರಾಮದ ಮಹಿಳಾ ವೀರಗಾಸೆ ತಂಡದವರು ಆಗಮಿಸಿ ಅತ್ಯಾಕರ್ಷಕವಾದ ವೀರ ಗಾಸೆಯನ್ನ ಪ್ರದರ್ಶನ ನೀಡಿದರು. ಶ್ರೀ ಮಡಿವಾಳ ಮಾಚಿದೇವರ ಮಹಿಮೆಯನ್ನ ಒಡಪುಗಳ ಮೂಲಕ ಹೇಳುತ್ತಾ ಮೆರಣಿಗೆಯಲ್ಲಿ ಸಾಗಿದರು. ಮಹಿಳಾ ವೀರಗಾಸೆ ಅತ್ಯಂತ ಆಕರ್ಷಣಿಯವಾದ ಕಾರ್ಯಕ್ರಮವಾಗಿತ್ತು ಮೆರವಣಿಗೆ ಮುಗಿದ ನಂತರ ವೀರಗಾಸೆ ತಂಡದವರು ಮಂಡಲ ಬರೆದು ಬಣ್ಣ ಬಣ್ಣದ ರಂಗೋಲೆ ಹಾಕಿ ಅದರೋಳಗೆ ವೀರಗಾಸೆಯ ಮೂಲಕ ಪವಾಡ ಮಾಡಿದ ದೃಶ್ಯ ಎಲ್ಲರ ಕಣ್ ಮನ ಸೆಳೆಯಿತು.
ಈ ಸಂಧರ್ಬದಲ್ಲಿ ಯುವಉದ್ಯಮಿ ಸದ್ಗುರುಪ್ರದೀಪ್, ಸಮಾಜ ಸೇವಕರಾದ ಶಿವುಮಠ, ಅರುಣ್ ಬಿ.ಜಿ. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೋವಿಂದ್ (ಕನಕ) ರಾಷ್ಟçಮಟ್ಟದ ಕ್ರೀಡಾಪಟು ಕುಮಾರಿ ಅರ್ಚನಾ ಅರ್, ರಂಗನಾಥ್, ಸುಮಾಮಂಜುನಾಥ್ ಆನಂದ್, ಅಜ್ಜಯ್ಯ, ಪರಮೇಶ್‌ತಳವಾರ್, ಶಿಕ್ಷಕ ಶ್ರೀನಿವಾಸ್, ಮಡಿವಾಳ ಸಮಾಜದ ಮುಖಂಡರುಗಳಾದ ರಾಜಪ್ಪ, ಚಂದ್ರಪ್ಪ, ಸಿದ್ದಪ್ಪ, ಚಿದಾನಂದ್ ಸೇರಿದಂತೆ ಗ್ರಾಮದ ಮುಖಂಡರುಗಳು ಗ್ರಾಮಸ್ಧರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಅನ್ನ ಸಂತರ್ಪಣೆಯನ್ನ ಆಯೋಜಿಸ

About The Author
Discover more from JANADHWANI NEWS
Subscribe to get the latest posts sent to your email.