ಚಳ್ಳಕೆರೆ ಮಾ.12
ಶ್ರೀಗೌರಸಮುದ್ರಮಾರಮ್ಮ ದೇವಿಯ ಸನ್ನಿಧಿಯಲ್ಲಿ ಗ್ರಾಮಸ್ಥರ ಹಾಗೂ ಭಕ್ತರ ಸಮ್ಮಖದಲ್ಲಿ ಮಂಗಳವಾರ ರಾತ್ರಿ ಶ್ರದ್ದೆ ಭಕ್ತಿಯಿಂದ ಗುಗ್ಗರಿಹಬ್ಬ ಆಚರಣೆ ಮಾಡಿದರು.
ರೈತರು ಬೆಳೆದ ಸಿರಿಧಾನ್ಯ ಗುಗ್ಗರಿಗೆ ಬಳಸಬಹುದಾದ ದ್ವಿದಳ ಧಾನ್ಯಗಳನ್ನು ತಮ್ಮ ದೇವರಿಗೆ ಎಡೆ ಮಾಡಿ ಅರ್ಪಿಸಲಾಯಿತು. ತೊಗರಿ ಎಲ್ಲಾ ಕಾಳುಗಳನ್ನು ಒಟ ಪ್ರಸಾದವಾಗ ಶ್ರೀ ಶ್ರೀ ಗೌರಸಮುದ್ರ ಮಾರಮ್ಮ ದೇವಿಯ ಗುಗ್ಗರಿ ಹಬ್ಬಕ್ಕೆ ಸುತ್ತಮುತ್ತ ಗ್ರಾಮಸ್ಥರು ಮತ್ತು ಭಕ್ತಾದಿಗಳು ರೈತರು ತಮ್ಮ ಹೊಲಗಳಲ್ಲಿ ಬೆಳೆದಂತಹ ಬೆಳೆಗಳಲ್ಲಿ ತರಕಾರಿ. ಅಕ್ಕಿ. ಉರುಳಿ. ಎಣ್ಣೆ. ಬೆಲ್ಲ. ಸಾಂಬಾರ್ ಪದಾರ್ಥಗಳು. ಇನ್ನಿತರೆ ತರಕಾರಿಗಳು ಮತ್ತು ಸಿರಿಧಾನ್ಯಗಳನ್ನು ದೇವಿಗೆ ಅರ್ಪಿಸಿದ್ದರು. ಭಕ್ತಾದಿಗಳು ಕೊಟ್ಟಂತಹ ತರಕಾರಿ ಮತ್ತು ಅಕ್ಕಿ ದೇವಸ್ಥಾನದಲ್ಲಿ ರಾತ್ರಿ ಗ್ರಾಮಸ್ಥರು ಹಾಗೂ ಭಕ್ತರು ಸೇರಿ ಅಡಿಗೆ ಮಾಡಿ ಶ್ರೀ ಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಬುಧವಾರ ಮುಂಜಾನೆ ಪ್ರಸಾದ ವಿತರಣೆ ಮಾಡಲಾಗಿಯಿತು.
ಗುಗ್ಗರಿ ಹಬ್ಬದ ಕಾರ್ಯಕ್ರಮದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರು ಸದಸ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು.
























About The Author
Discover more from JANADHWANI NEWS
Subscribe to get the latest posts sent to your email.