January 29, 2026
IMG-20250312-WA0034.jpg

.

ನಾಯಕನಹಟ್ಟಿ:: ಚಿತ್ರದುರ್ಗ ಜಿಲ್ಲೆಯಲ್ಲಿ ಯಕ್ಷಗಾನ ನಾಟಕವನ್ನು ದೆಹಲಿಯಲ್ಲಿ ಪ್ರದರ್ಶನ ಮಾಡಿದ ಕೀರ್ತಿ ನಲಗೇತನಹಟ್ಟಿ ಗ್ರಾಮಕ್ಕೆ ಸಲ್ಲುತ್ತದೆ ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ.ಎನ್, ಮುತ್ತಯ್ಯ ಹೇಳಿದರು.

ಮಂಗಳವಾರ ರಾತ್ರಿ ಹೋಬಳಿಯ ನಲಗೇತನಹಟ್ಟಿ ಗ್ರಾಮದಲ್ಲಿ
ಮಡ್ರಹಳ್ಳಿ ಚೌಡೇಶ್ವರಿ ಜಾತ್ರೆ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀ ಕಂಪಳರಂಗ ಸ್ವಾಮಿ ನಾಟ್ಯ ಕಲಾ ಸಂಘ ಇವರಿಂದ ರಕ್ತ ರಾತ್ತಿ ಅರ್ಥಾತ್‌ ಅಶ್ವತ್ಥಾಮನ ಸೇಡಿನ ಕಾರಸ್ಥಾನ . ಎಂಬ ಪೌರಾಣಿಕ ನಾಟಕವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಲಗೇತನಹಟ್ಟಿ ಎಂಬುದು ಕಲೆಯ ತವರೂರು ಪೂರ್ವಜರ ಕಾಲದಿಂದಲೂ ಗ್ರಾಮದಲ್ಲಿ ಯಕ್ಷಗಾನ ಕೋಲಾಟ ಭಜನೆ ಸಾಮಾಜಿಕ ನಾಟಕಗಳು ಸೇರಿದಂತೆ ಕಲೆಯನ್ನ ಉಳಿಸಿ ಬೆಳೆಸಿದ್ದಾರೆ. ಹಿಂದಿನ ಯುವ ಪೀಳಿಗೆ ಇಂತಹ ನಾಟಕಗಳಿಗೆ ಪ್ರೋತ್ಸಾಹ ನೀಡುವಲ್ಲಿ ಮುಂದಾಗಬೇಕು ನಾಟಕದಲ್ಲಿ ಬರುವ ಉತ್ತಮ ಸಂದೇಶವನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪಟೀಲ್ ಜಿ.ಎಂ. ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಮಾತನಾಡಿದರು. ಗ್ರಾಮದ ಆರಾಧ್ಯ ದೈವ ಶ್ರೀ ಚನ್ನಕೇಶವ ಸ್ವಾಮಿ ಆಶೀರ್ವಾದದಿಂದ ಗ್ರಾಮದಲ್ಲಿ ಸಾಮರಸ್ಯದ ಜೀವನವನ್ನು ನಡೆಸಲು ಪ್ರತಿಯೊಬ್ಬರು ಒಂದಾಗಬೇಕು ಕಲೆ ಎಂಬುದು ಯಾರಪ್ಪನ ಸ್ವತ್ತಲ್ಲ ಕಲಾವಿದನ ಸ್ವತ್ತು ಅದನ್ನು ಪ್ರೋತ್ಸಾಹಿಸಲು ಮುಂದಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ನಲಗೇತನಹಟ್ಟಿ ಗ್ರಾ.ಪಂ. ಅಧ್ಯಕ್ಷೆ ಪಾಲಮ್ಮ ಪೂರ್ಣ ಓಬಯ್ಯ, ಹಾಗೂ ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಿ. ತಿಪ್ಪೇಸ್ವಾಮಿ ಚಳ್ಳಕೆರೆ, ಸಹಾಯಕ ನಿರ್ದೇಶಕ ಡಾ,ಪಿ.ಎನ್. ರಘುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿತ್ರದುರ್ಗ, ನಿವೃತ್ತ ಶಿಕ್ಷಕ ಸಿ.ಬಿ. ಉಮೇಶ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಈಗಲ ಬೋರಯ್ಯ, ಸದಸ್ಯರಾದ ಗೌಡ್ರು ಬೋರಯ್ಯ, ಜೆ. ಮಲ್ಲಿಕಾರ್ಜುನ್, ಸಂಗೀತ ನಿರ್ದೇಶಕರಾದ ಪಿ. ಬಿ. ಬೋರಮುತ್ತೆ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಲ್ಲನ ದೊಡ್ಡ ಬೋರಯ್ಯ, ಎಸ್‌ಜಿ ಸಣ್ಣ ಬೋರಯ್ಯ, ನಿಂಗರಾಜ್, ಸಹಕಾರ ಹೂವಿನ ಅಂಗಡಿ ಮಾಲೀಕರಾದ ರಘು, ಪಾಲಯ್ಯ, ಈಶಣ್ಣ, ಪೇಲೂರಹಟ್ಟಿ , ಗ್ರಾಮ ಪಂಚಾಯತಿ ಸದಸ್ಯ ದೊಡ್ಡ ಬೋರಯ್ಯ, ನಿವೃತ್ತ ಶಿಕ್ಷಕ ಸಿ.ಬಿ. ಉಮೇಶ್, ಸೇರಿದಂತೆ ಸಮಸ್ತ ನಲಗೇತನಹಟ್ಟಿ ಗ್ರಾಮಸ್ಥರು ಕಲಾವಿದರು ಇದ್ದರು
ನಿರೂಪಣೆ – ಬೋರಯ್ಯ ಪಿ ಕೆ, ಸಂಶೋಧಕರು
ಸ್ವಾಗತ : ಡಾ. ಎಂ. ಪಿ.ಮಂಜುನಾಥ
ವಂದನಾರ್ಪಣೆ : ಡಾ. ಬೊಮ್ಮಯ್ಯ ಕೆ. ಸಂಶೋಧಕರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading