ಚಳ್ಳಕೆರೆ:
ಇಂದು ಮಧ್ಯಾಹ್ನ 1:35ರ ಸುಮಾರಿಗೆ ಅಬಕಾರಿ ನಿರೀಕ್ಷಕರು ಸಿಬ್ಬಂದಿ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಯೊಂದಿಗೆ ಚಳ್ಳಕೆರೆ ನಗರ ಮತ್ತು ಹೊರ ವಲಯದಲ್ಲಿ ಗಸ್ತು ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಅಕ್ರಮ ಸೇಂದಿ ಸಾಗಾಟ ಪತ್ತೆಯಾಗಿದೆ.
ಚಳ್ಳಕೆರೆ ನಗರದಿಂದ ವೀರದಿಮ್ಮನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ಮಧ್ಯಭಾಗದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಬೂದು ಬಣ್ಣದ ಟೊಯೋಟಾ ಇಟಿಯೋಸ್ ಕಾರು (ನೊಂದಣಿ ಸಂಖ್ಯೆ ಕೆ.ಎ. 51 ಸಿ 9190) ಅನ್ನು ತಡೆದು ಶೋಧನೆ ನಡೆಸಲಾಯಿತು. ಈ ವೇಳೆ ವಾಹನದಲ್ಲಿ ಒಟ್ಟು 8 ಲೀಟರ್ ಅಕ್ರಮ ಸೇಂದಿ ಪತ್ತೆಯಾಗಿದೆ.
ಸದರ ವಾಹನ ಹಾಗೂ ಮುದ್ದೆಮಾಲನ್ನು ಸ್ಥಳ ಪಂಚನಾಮೆ ಮೂಲಕ ವಶಕ್ಕೆ ಪಡೆದುಕೊಳ್ಳಲಾಗಿದ್ದು, ವಾಹನ ಚಾಲಕನಾದ ಕಾಟೇಶ ಕೆ (ಕಾಟಯ್ಯ ಪುತ್ರ), ಜೆ.ಸಿ. ಹಳ್ಳಿ ಗೊಲ್ಲರಟ್ಟಿ ಗ್ರಾಮ, ಚಿತ್ರದುರ್ಗ ತಾಲೂಕು ನಿವಾಸಿ ಅವರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯ ಕಲಂ 32, 38ಎ, 43ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮುಂದಿನ ಕ್ರಮವನ್ನು ಅಬಕಾರಿ ಇಲಾಖೆ ಕೈಗೊಂಡಿದೆ.
About The Author
Discover more from JANADHWANI NEWS
Subscribe to get the latest posts sent to your email.