ಚಿತ್ರದುರ್ಗ, ಫೆ.12:
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ “ವಿದ್ಯುತ್ ಸುಧಾರಣಾ ಕಾಯ್ದೆ 2026” ವಿರೋಧಿಸಿ ಅಖಿಲ ಭಾರತ ಇಂಜಿನಿಯರ್ ಮತ್ತು ನೌಕರರ ಒಕ್ಕೂಟ ಹಾಗೂ ವಿವಿಧ ಕೈಗಾರಿಕೆಗಳ ಒಕ್ಕೂಟಗಳ ಕರೆ ಮೇರೆಗೆ ರಾಜ್ಯದ್ಯಂತ ಒಂದು ದಿನದ ಸಾಂಕೇತಿಕ ಮುಷ್ಕರ ಹಮ್ಮಿಕೊಳ್ಳಲಾಯಿತು.


ಈ ಕಾಯ್ದೆ ಮೂಲಕ ವಿದ್ಯುತ್ ಇಲಾಖೆಗಳ ಖಾಸಗೀಕರಣಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಆರೋಪಿಸಿರುವ ಸಂಘಟನೆಗಳು, ಇದು ಜನ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಯಾಗಿದ್ದು, ಜಾರಿಯಾದಲ್ಲಿ ಬಿ.ಎಸ್.ಎನ್.ಎಲ್. ಇಲಾಖೆಯಂತೆಯೇ ನೌಕರರು ಹಾಗೂ ಗ್ರಾಹಕರು ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿವೆ.
ಇದಕ್ಕೆ ಅನುಸಾರವಾಗಿ ಚಿತ್ರದುರ್ಗ ಬೆಸ್ಕಾಂ ವಿಭಾಗೀಯ ಕಚೇರಿ ಮುಂಭಾಗದಲ್ಲಿ ಚಿತ್ರದುರ್ಗ ನಗರ ವ್ಯಾಪ್ತಿಯ ಎಲ್ಲಾ ಅಧಿಕಾರಿಗಳು ಹಾಗೂ ನೌಕರರು ಸಾಂಕೇತಿಕ ಮುಷ್ಕರ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಮುಷ್ಕರದಲ್ಲಿ ಶ್ರೀ ಲಿಂಗರಾಜ್ ಎಂ.ಹೆಚ್ (ಕಾರ್ಯನಿರ್ವಾಹಕ ಇಂಜಿನಿಯರ್-ವಿ), ಶ್ರೀ ಕೆ.ಪಿ. ಬಸವರಾಜ್ (ರಾಜ್ಯ ಉಪಾಧ್ಯಕ್ಷರು, ಕ.ವಿ.ಪ್ರ.ನಿ.ನಿ ಮತ್ತು ಬೆಸ್ಕಾಂ ನೌಕರರ ಸಂಘ 659), ಶ್ರೀ ಎಲ್. ರವಿಕೇಂದ್ರ (ಕಾರ್ಯ ಸಮಿತಿ ಸದಸ್ಯರು, ಕ.ವಿ.ಪ್ರ.ನಿ.ನಿ ಮತ್ತು ಬೆಸ್ಕಾಂ ನೌಕರರ ಸಂಘ 659), ಹೆಚ್. ತಿಮ್ಮಣ್ಣ (AEE, ಬೆಸ್ಕಾಂ ನಗರ, ಚಿತ್ರದುರ್ಗ), ಶ್ರೀ ನಾಗರಾಜ್ (AEE, ಬೆಸ್ಕಾಂ ಗ್ರಾಮೀಣ, ಚಿತ್ರದುರ್ಗ) ಸೇರಿದಂತೆ ಹಲವರು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.