ಗ್ರಾಮಪಂಚಾಯಿತಿಗಳಲ್ಲಿ ಆಡಳಿತ ಅಧಿಕಾರಿಗಳ ನೇಮಕ – 15ನೇ ಹಣಕಾಸು, ನರೇಗಾ ಅನುದಾನ ಬಿಡುಗಡೆ ವಿಳಂಬದ ಕುರಿತು ಅಸಮಾಧಾನ
ತಾಲ್ಲೂಕಿನ ಹಲವು ಗ್ರಾಮಪಂಚಾಯಿತಿಗಳ ಸದಸ್ಯರ ಅವಧಿ ಮುಕ್ತಾಯದ ಕೊನೆಯ ಹಂತದಲ್ಲಿ 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆ ಆಗದೆ ಇರುವುದರಿಂದ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲಿ ಸಾಮಗ್ರಿ ಬಿಲ್‌ಗಳ ಹಣ ಬಿಡುಗಡೆಯಾಗದೆ ಇರುವುದರಿಂದ ಗ್ರಾಮಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಅವಧಿ ಮುಗಿಯುತ್ತಿರುವ ಗ್ರಾಮ
ಪಂಚಾಯಿತಿಗಳಿಗೆ ಈಗಿರುವ ಆಡಳಿತ ಸಮಿತಿಯನ್ನೇ
ಮುಂದಿನ ಆರು ತಿಂಗಳು ಮುಂದುವರಿಸಬೇಕು ಎಂದು
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ
ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದರೂ, ಯಾವುದೇ ಪ್ರಯೋಜನವಾಗದೆ
ಅಧಿಕಾರ ಅವಧಿ ಮುಕ್ತಾಯವಾದ ಬೆನ್ನಲ್ಲೇ ಇದೀಗ ತಲಾ ಎರಡು ಗ್ರಾಮಪಂಚಾಯಿತಿಗಳಿಗೆ ಒಬ್ಬರಂತೆ ಆಡಳಿತ ಅಧಿಕಾರಿಗಳನ್ನು ಜಿಲ್ಲಾಾಧಿಕಾರಿಗಳು ನೇಮಕ ಮಾಡಿದ್ದಾರೆ. ಮುಂದಿನ ಚುನಾವಣೆ ನಡೆಯುವವರೆಗೆ ಹಾಗೂ ಹೊಸ ಅಧ್ಯಕ್ಷರ ಆಯ್ಕೆ ಆಗುವ ತನಕ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಆಡಳಿತಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ನೇಮಕಗೊಂಡ ಅಧಿಕಾರಿಗಳು ಸಂಬಂಧಿತ ಗ್ರಾಮಪಂಚಾಯಿತಿ ಕಚೇರಿಗಳಲ್ಲಿ ಅಧಿಕಾರ ಸ್ವೀಕರಿಸಿರುವುದು ತಿಳಿದುಬಂದಿದೆ.
ಇದೇ ವೇಳೆ 15ನೇ ಹಣಕಾಸು ಯೋಜನೆ ಹಾಗೂ ನರೇಗಾ ಯೋಜನೆಯ ಸಾಮಗ್ರಿ ಬಿಲ್‌ಗಳ ಅನುದಾನ ಬಿಡುಗಡೆ ವಿಳಂಬವಾಗಿರುವುದು ಅಧ್ಯಕ್ಷರಿಗೆ ಕಮಿಷನ್ ಕೈತಪ್ಪಿತಲ್ಲ ಎಂಬ ಅಸಮದಾನ ಉಂಟಾಗುದೆ.
About The Author
Discover more from JANADHWANI NEWS
Subscribe to get the latest posts sent to your email.