ಬೆಂಗಳೂರು: ಇಂದು ಬೆಂಗಳೂರಿನ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿ ಸಭಾಂಗಣದಲ್ಲಿ ನಡೆದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ, ನಿಗಮದ ವಿವಿಧ ಯೋಜನೆಗಳು ಹಾಗೂ ಪ್ರಗತಿಯ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಾಮಗಾರಿಗಳ ಸ್ಥಿತಿ, ಕೈಗಾರಿಕಾ ವಸತಿ ಪ್ರದೇಶಗಳ ಅಭಿವೃದ್ಧಿ,



ಮೂಲಸೌಕರ್ಯಗಳ ಬಲಪಡಿಕೆ ಹಾಗೂ ಉದ್ಯಮಿಗಳಿಗೆ ಸೌಲಭ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಿಸುವ ಕುರಿತು ಚರ್ಚಿಸಲಾಯಿತು. ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರು, ಎಂ.ಡಿ. ಕ್ಯಾಪ್ಟನ್ ರಾಜೇಂದ್ರ, ಜಿ.ಎಂ. ಫಾತಿಮಾ, ಹಿರಿಯ ಅಧಿಕಾರಿಗಳಾದ ನಾಗರಾಜ ರೆಡ್ಡಿ, ಸಿ.ಇ. ಅಧಿಕಾರಿಗಳಾದ ಸತೀಶ್ ಬಾಬು, ಆಪ್ತ ಸಹಾಯಕರಾದ ಸೈಯದ್ ಇಸಾಕ್ ಹಾಗೂ ನಿಗಮದ ಕೆ.ಎ.ಎಸ್. ಮತ್ತು ಐ.ಎ.ಎಸ್. ಅಧಿಕಾರಿಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.