December 15, 2025
IMG-20250212-WA0163.jpg

ಚಳ್ಳಕೆರೆ ಫೆ.12 ಗ್ರಾಮ ಪಂಚಾಯಿತಿ ಕಚೇರಿಗೆ ಮೂರು ವರ್ಷಗಳಿಂದ ಕಟ್ಟದ ತೆರಿಗೆ ಹಾಗೂ ವಿದ್ಯು ಕಳವು ಮಾಡಿ ಸಿಕ್ಕಿ ಬಿದ್ದ ರಾಸಾಯನಿಕ  ಸ್ಪೋಟಕ ವಸ್ತುಗಳ ಶೇಖರಣ ಕೇಂದ್ರ.
ಹೌದು ಇದು ಚಳ್ಳಕೆರೆ ತಾಲೂಕಿ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಜಾರಹಟ್ಟಿ ಸಮೀಪ ಇರುವ ಶ್ರೀರಾಮ್ ಇನ್ ಫ್ರಾಸ್ಟ್ರಕ್ಟರ್ಸ ಮತ್ತು ಕಿಶನ್ ಲಾಲ್ ಸುಕುದ್ದೇವ್ ಗುರ್ಜರ್ ಎನ್ನುವ ಕಂಪನಿ ಸಿಡಿಮದ್ದು ವಸ್ತುಗಳನ್ನು ಸಂಗ್ರಹ ಮಾಡಿರು ಕಟ್ಟಕ್ಕೆ ಸಿ.ಸಿ ಕ್ಯಾಮರ ಅಳವಡಿಸದೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಕಾಂಪೌಂಡ್ ಸುತ್ತ ನಾಮಫಲಕಗಳಿಲ್ಲ. ದೀಪಗಳಿಲ್ಲ,   ಗ್ರಾಮ ಪಂಚಾಯಿತಿಗೆ  ಮೂರು ವರ್ಷದ ಸುಮಾರು 6 ಲಕ್ಷ ರೂಪಾಯಿ ತೆರಿಗೆ ಕಟ್ಟಿಲ್ಲ.  ಗ್ರಾಮ ಪಂಚಾಯತಿ ಕಚೇರಿಯಿಂದ ತೆರಿಗೆ ಬಾಕಿ ಕಟ್ಟುವಂತೆ ನೋಟಿಸ್ ನೀಡಿದರೂ ಗ್ರಾಮಪಂಚಾಯಿತಿ ನೋಟಿಸಿಗೂ ಕವಡೆ ಕಾಸು ಕಿಮ್ಮತ್ತು ಕೊಡೆ ತೆರಿಗೆ ಬಾಕಿಯೂ ಕಟ್ಟದ ಮೌನವಹಿಸಿದರು ಗ್ರಾಪಂ ಆಡಳಿತ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈಗಾಗಲೇ ಗ್ರಾಮ ಪಂಚಾಯತಿಯಿಂದ ಹಲವಾರು ಬಾರಿ ನೋಟಿಸ್ ನೀಡಲಾಗಿದ್ದು. ಗ್ರಾಮಸ್ಥರು ಸಹ ಈ ವಿಚಾರ ಕುರಿತಂತೆ ಗ್ರಾಮ ಪಂಚಾಯಿತಿಗೆ ಸ್ಪೋಟಕ ತುಂಬಿರುವ ಬಂಕರ್ ಬಗ್ಗೆ ಆತಂಕ ವ್ಯಕ್ತಪಡಿಸಿ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ.

ಸ್ಪೋಟಕ ವಸ್ತುಗಳ ಸಂಗ್ರಹಣೆ ಮಾಡಿ ಬೇರೆ ಕಡೆ ವಿತರಣೆ ಮಾಡುವ ಬಂಕರ್ ಅಧಿಕೃತವಾಗಿ ವಿದ್ಯುತ್ ಪಡೆಯದೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ಬೆಸ್ಕಾಂ ಇಲಾಖೆಗೆ ದಂಡಕಟ್ಟಿರುವ ನಿದರ್ಶನವೂ ಸಹ ಇದೆ.

ಸ್ಪೋಟಕ ವಸ್ತುಗಳ ಶೇಖರಣ ಘಟಕ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ಟಿ.ಬಿ.ರಾಜಣ್ಣ,ಠಾಣಾಧಿಕಾರಿ ಆರ್ ಎಫ್ ದೇಸಾಯಿ ಗ್ರಾಮ ಪಂಚಾಯತಿ ಸದಸ್ಯ ದೊರೆ ಬೈಯಣ್ಣ ಹಾಗೂ ಪಿ ಡಿ ಓ ಇನಾಯಿತ್ ಪಾಷ, ಮುಖಂಡ ರಾಜಣ್ಣ ಭೇಟಿ ನೀಡಿ ಸುರಕ್ಷತಾ ಬಗ್ಗೆ ಪರಿಶೀಲ ನಡೆಸಿದರು.
ನನ್ನವಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ  ಇನಾತ್ ಪಾಷ ಮಾತನಾಡಿ ಪಂಚಾತಿ ವ್ಯಾಪ್ತಿಯ ವಿವಿಧ ಗ್ರಾಮಸ್ಥರು ಹಾಗೂ ಕುರಿಗಾಹಿಗಳು ಸ್ಪೋಟಕ ವಸ್ತುಗಳ ಶೇಖರಣ ಕೇಂದ್ರ ವಿಚಾರವಾಗಿ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ. ಈ ಕಂಪನಿಯವರಿಗೆ ಗ್ರಾಮ ಪಂಚಾಯತಿಯಿಂದ ನೋಟಿಸ್ ಜಾರಿ ಮಾಡಿದ್ದರೂ ಉತ್ತರ ನೀಡುತ್ತಿಲ್ಲ  ಮೂರು ವರ್ಷದ 6 ಲಕ್ಷ ಹಣವನ್ನು ತೆರೆಗೆ ರೂಪದಲ್ಲಿ ಗ್ರಾಮ ಪಂಚಾಯತಿಗೆ ಕಟ್ಟಬೇಕು ಆದರೆ ಕಂಪನಿ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಕಂಪನಿ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದರು..

ರಾಸಾನಿಕ ಸ್ಪೋಟಕ ವಸ್ತು ಸಂಗ್ರಹಣಾ ಕೇಂದ್ರಕ್ಕೆ ಯಾವುದೇ ಸಿ ಸಿ ಕ್ಯಾಮರ ರಕ್ಷಣಾಗೋಡೆ. ಒಬ್ಬನೇ ಕಾವಲು ಸೇರಿದಂತೆ ಸರಿಯಾದ ಭದ್ರತೆ ಇಲ್ಲದೆ ಇರುವುದು ಸುತ್ತಮುತ್ತಲ ಜನರು ಪ್ರಾಣ ಭೀತಿಯಲ್ಲಿ ಜೀವನ ನಡೆಸುವಂತಾಗಿದೆ.

ದೀಪಾವಳಿ ಹಬ್ಬದಂದು ಹಚ್ಚುವ ಟುಸ್ ಪಟಾಕಿಗಳ ಸಂಗ್ರಹಣಾ ಗೋದಾಮಿಗೆ ಎಲ್ಲಾ ಅಗತ್ಯ ಕ್ರಮಗಳನ್ನು ಅಳವಡಿಸಲಾಗುವುದು ಆದರೆ ಸ್ಪೋಟಕ ಸಿಡಿಮದ್ದುಗಳ ಸಂಗ್ರಹಣ ಬಂಕರ್ ಕೇಂದ್ರಕ್ಕೇ ರಕ್ಷಣೆ ಇಲ್ಲದೆ ಇರುವುದು ಸಂಬಂಧ ಪಟ್ಟ ಅಧಿಕಾರಿಗಳು ಈಗಲಾದರೂ ಸ್ಪೋಟಕ ವಸ್ತುಗಳು ಸಂಗ್ರಹಣ ಕೇಂದ್ರಕ್ಕೆ ಸೂಕ್ತ ಭದ್ರತೆ ಕಲ್ಪಿಸುವರೇ ಕಾದು ನೋಡ ಬೇಕಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading