ಚಳ್ಳಕೆರೆ:
ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮಗಳಲ್ಲಿ ಸಮರ್ಪಕವಾದ ವಿದ್ಯುತ್ ನೀಡದ ಹಿನ್ನೆಲೆ ಬೆಳೆಗಳು ಒಣಗುತ್ತಿದ್ದು, ಇದರಿಂದ ಕಂಗೆಟ್ಟ ನೂರಾರು ರೈತರು ದೊಡ್ಡ ಉಳ್ಳಾರ್ತಿ ಉಪ ವಿಭಾಗಾಧಿಕಾರಿ ಬೆಸ್ಕಾಂ ಕಛೇರಿ ಗೆ ಇಂದು ಮುತ್ತಿಗೆ ಹಾಕಿದರು.


ರೈತ ಮುಖಂಡ ತಿಪ್ಪೇಸ್ವಾಮಿ ಈಗಾಗಲೇ ದೊಡ್ಡ ಉಳ್ಳಾರ್ತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸಮರ್ಪಕವಾದ ವಿದ್ಯುತ್ ನೀಡದ ಕಾರಣ ನೀರಾವರಿ ಜಮೀನುಗಳಲ್ಲಿ ಬೆಳೆಗಳು ಒಣಗುತ್ತಿದ್ದು. ಜಾನುವಾರಗಳಿಗೆ ಕುಡಿಯುವ ನೀರಿಗೆ ಸಹ ತೊಂದರೆಯಾಗಿದೆ. ಅದರಿಂದ ನೊಂದ ರೈತರು ಇಂದು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ್ದೇವೆ. ಅಧಿಕಾರಿಗಳು ರೈತರ ಕೊಳವೆ ಬಾವಿಗಳಿಗೆ ಸಮರ್ಪಕ ವಿದ್ಯುತ್ ನೀಡುವವರೆಗೂ ನಾವು ರೈತರು ಎಲ್ಲೂ ಹೋಗುವುದಿಲ್ಲ. ನೀವು ಅಧಿಕಾರಿಗಳು ಸಹ ಹೊರ ಹೋಗದಂತೆ ನಮಗೆ ನ್ಯಾಯ ಕೊಡಬೇಕು ಹಾಗೂ ಹಲವಾರು ಪಂಪ್ಸೆಟ್ಟುಗಳು ಶಾಕ್ ಸರ್ಕ್ಯೂಟ್ ನಿಂದ ನಿಂತು ಹೋದರು ಕೂಡ ರಿಪೇರಿ ಗೆ ಬಾರದ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದು ಎಚ್ಚರಿಕೆ ನೀಡಿದರು..



ಇನ್ನು ಈ ವೇಳೆ ರೈತ ಸಂಘ ಮುಖಂಡರುಗಳು ಜಮೀನಿನ ಮಾಲೀಕರು ಪಾಲ್ಗೊಂಡಿದ್ದರು
About The Author
Discover more from JANADHWANI NEWS
Subscribe to get the latest posts sent to your email.