ಚಿತ್ರದುರ್ಗ:
ರಾಷ್ಟ್ರೀಯ ನೀರಾವರಿ ಯೋಜನೆಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಲಾಗಿದ್ದು, ಜಿಲ್ಲೆಯ ಜನತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೋಸ ಮಾಡುತ್ತಿವೆ ಎಂದು ಶಾಸಕ ಟಿ. ರಘುಮೂರ್ತಿ ತೀವ್ರ ಆರೋಪ ಮಾಡಿದರು.

ಸೋಮವಾರ ಮಧ್ಯಾಹ್ನ 12.30ಕ್ಕೆ ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆಗೆ ರಾಷ್ಟ್ರೀಯ ನೀರಾವರಿ ಯೋಜನೆಯನ್ನು ಸಂಪೂರ್ಣವಾಗಿ ಮುಗಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದರೂ, ಇದುವರೆಗೂ ಒಂದು ಹನಿ ನೀರೂ ಜಿಲ್ಲೆಗೆ ಹರಿಯದಿರುವುದು ಸರ್ಕಾರದ ವೈಫಲ್ಯಕ್ಕೆ ನಿದರ್ಶನ ಎಂದರು.
ಯೋಜನೆಗೆ 60 ಶೇಕಡಾ ಕೇಂದ್ರ ಹಾಗೂ 40 ಶೇಕಡಾ ರಾಜ್ಯ ಸರ್ಕಾರದ ಅನುದಾನ ನಿಗದಿಯಾಗಿದ್ದು, ಒಟ್ಟು ವೆಚ್ಚ 5300 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿತ್ತು. 2022–23ರ ಕೇಂದ್ರ ಬಜೆಟ್‌ನಲ್ಲಿ ಯೋಜನೆ ಘೋಷಣೆಗೊಂಡಾಗ ಜಿಲ್ಲೆಯ ರೈತರಿಗೆ ಭರವಸೆ ಮೂಡಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಯೋಜನೆಯನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿ, ಸ್ಥಗಿತಗೊಳಿಸಿರುವಂತಾಗಿದೆ ಎಂದು ಗಂಭೀರ ಆರೋಪಿಸಿದರು.
ಚಿತ್ರದುರ್ಗದ ರೈತರು ವರ್ಷಗಳಿಂದ ನೀರಿಗಾಗಿ ಕಾಯುತ್ತಿದ್ದರೂ ಸರ್ಕಾರಗಳು ರಾಜಕೀಯ ಲಾಭಕ್ಕಾಗಿ ಯೋಜನೆಗಳನ್ನು ಬಲಿ ಕೊಡುತ್ತಿವೆ. ಇದು ಜಿಲ್ಲೆಯ ಜನರ ಮೇಲಿನ ಘೋರ ದ್ರೋಹ. ತಕ್ಷಣವೇ ಯೋಜನೆಯನ್ನು ಪುನರಾರಂಭಿಸಿ ಅನುದಾನ ಬಿಡುಗಡೆ ಮಾಡದಿದ್ದರೆ ಜಿಲ್ಲೆಯ ಜನರೊಂದಿಗೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಶಾಸಕ ಟಿ. ರಘುಮೂರ್ತಿ ಎಚ್ಚರಿಕೆ ನೀಡಿದರು.

About The Author
Discover more from JANADHWANI NEWS
Subscribe to get the latest posts sent to your email.