ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ಶಾಸಕ ಬಿ ಜಿ ಗೋವಿಂದಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬಿ.ಜಿ ಅಭಿಮಾನಿಗಳ ಬಳಗ ಮತ್ತು ತಾಲ್ಲೂಕು ಕುರುಬರ ಸಂಘದ ವತಿಯಿಂದ ರಾಜ್ಯದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಹಿರಿಮೆಗೆ ಸಿದ್ಧರಾಮಯ್ಯ ಅವರು ಭಾಜನರಾದ ಹಿನ್ನೆಲೆಯಲ್ಲಿ ಭಾನುವಾರ ಪಟ್ಟಣದ ಟಿ.ಬಿ. ವೃತ್ತದಲ್ಲಿ ನಾಟಿಕೋಳಿ ಸಾಂಬಾರು ಹಾಗೂ ರಾಗಿಮುದ್ದೆ ಊಟ ವಿತರಿಸಿ ಸಂಭ್ರಮಿಸಿದರು.

‘ ಶಾಸಕ ಬಿ ಜಿ ಗೋವಿಂದಪ್ಪ ಮಾತನಾಡಿ, ಎಲ್ಲಾ ಮುಖಂಡರುಗಳು ಸೇರಿ ಸಂಭ್ರಮಾಚರಣೆಯಲ್ಲಿ ತೊಡಗಿರುವುದು ಸಂತಸ ತಂದಿದೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿ, ಲಕ್ಷಾಂತರ ಜನರಿಗೆ ನೆಮ್ಮದಿ ಬದುಕು ಕೊಡುವ ಮೂಲಕ ಉತ್ತಮ ಆಡಳಿತ ಹಾಗೂ ದೀರ್ಘಕಾಲ ಮುಖ್ಯಮಂತ್ರಿ ಆಗಿದ್ದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಆಗಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ದೀರ್ಘಕಾಲ ಮುಖ್ಯಮಂತ್ರಿ ಎಂಬ ಗರಿಮೆ ಪಡೆದಿದ್ದಾರೆ. ಹಲವಾರು ಭಾಗ್ಯಗಳು, ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ. ಅವರ ಈ ಸಾಧನೆಯನ್ನು ರಾಜ್ಯಾದ್ಯಂತ ಸಂಭ್ರಮಿಸಲಾಗುತ್ತಿದೆ. ಸದ್ಯ ಸಿದ್ಧರಾಮಯ್ಯ ಅವರು 17 ಬಾರಿ ಬಜೆಟ್ ಮಂಡಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಅತೀ ಹೆಚ್ಚು ಬಜೆಟ್ ಮಂಡಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಕಾಂಗ್ರೆಸ್ ಪಕ್ಷದ ನೆರಳಿನಲ್ಲಿ ಅವರು ಹಲವಾರು ಸ್ಥಾನಗಳನ್ನು ಅಲಂಕರಿಸಿ, ಜನಸೇವೆ ಮಾಡಿದ್ದಾರೆ. ಅವರ ಕಾರ್ಯ ಹೀಗೆಯೇ ಮುಂದುವರಿಯಲಿ ಎಂದು ಆಶಿಸಿದರು.’
ಈ ವೇಳೆ ಕೆಪಿಸಿಸಿ ಸದಸ್ಯರುಗಳಾದ ಎಂ.ಪಿ. ಶಂಕರ್, ಅಲ್ತಾಫ್ ಪಾಷಾ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ, ತಾಲ್ಲೂಕು ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್, ಕಾಂಗ್ರೆಸ್ ಮುಖಂಡರುಗಳಾದ ದಿಪೀಕಾ ಸತೀಶ್, ಬಿ.ಜಿ ಅರುಣ್, ಗೋ.ತಿಪ್ಪೇಶ್, ಕಾರೇಹಳ್ಳಿ ಬಸವರಾಜ್, ರಾಜಣ್ಣ, ಪದ್ಮನಾಭ್, ಆಗ್ರೋ ಶಿವಣ್ಣ, ಗೇರ್ ಬಾಬು, ಲಕ್ಕಿಹಳ್ಳಿ ಮುದ್ದಪ್ಪ, ಕೆಂಚಪ್ಪ, ಹನುಮನಾಯ್ಕ, ಸುರೇಶ್, ಚಹಾಬಾಬು , ರೆಹಮಾನ್ ಖಾನ್, ಕೃಷ್ಣನಾಯ್ಕ, ಸಾಧಿಕ್, ಮಧುರೆ ನಟರಾಜ್ ಸೇರಿದಂತೆ ಕಾಂಗ್ರೆಸ್ ಮುಖಂಡರುಗಳು ಹಾಗೂ ಬಿ.ಜಿ. ಅಭಿಮಾನಿಗಳ ಬಳಗದವರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.