January 30, 2026
d-sudhakar-minister.png

ಚಿತ್ರದುರ್ಗ ಜ.12

: ವಾಣಿ ವಿಲಾಸ ಸಾಗರ ಜಲಾಶಯ ಭರ್ತಿಯಾಗಿ ಕೋಡಿ ಹಿನ್ನೆಲೆಯಲ್ಲಿ ಸಿಎಂ, ಡಿಸಿಎಂ ರಿಂದ ವಿ.ವಿ. ಸಾಗರಕ್ಕೆ ಬಾಗಿನ ಅರ್ಪಣೆಗೆ ಪ್ರತಿಕ್ರಿಯಿಸಿ ಇದೇ ತಿಂಗಳು 18 ರಂದು ಸಿಎಂ, ಡಿಸಿಎಂ ರಿಂದ ಬಾಗಿನ ಅರ್ಪಣೆ ಮಾಡಲಿದ್ದಾರೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.ನಗರದ ಡಿಸಿಸಿ ಬ್ಯಾಂಕ್ ಹತ್ತಿರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮಧ್ಯಾಹ್ನ 3ಗಂಟೆಗೆ ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದಾರೆ ಇವರ ಜೊತೆಗೆ ಸಚಿವ ಸಂಪುಟದ ಸಚಿವರುಗಳು ಭಾಗವಹಿಸಲಿದ್ದಾರೆ ಎಂದರು.

ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಭೀನ್ನಾಭೀಪ್ರಾಯ ಇಲ್ಲ ನಮ್ಮ ಶಾಸಕರು ಮಂತ್ರಿಗಳು ಅವರ ವೈಯುತ್ತಿಕ ಭೀನ್ನಾಭಿಪ್ರಾಯಗಳನ್ನು ತಿಳಿಸಿದ್ದಾರೆ ಇದರ ಬಗ್ಗೆ ನಮ್ಮ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ಗಮನ ನೀಡುತ್ತಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕ ಎಲ್ಲರು ಬದ್ದರಾಗಿರುತ್ತಾರೆ ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ತಿಳಿಸಿದರು.

ಶಿವಕುಮಾರ್ ಪಕ್ಷದ ಶಿಸ್ತಿನ ಸಿಪಾಯಿ 2023ರ ಚುನಾವಣೆಯಲ್ಲಿ ನಮ್ಮ ಪಕ್ಷ 136 ಸೀಟುಗಳನ್ನು ಗೆಲುತ್ತದೆ ಎಂದು ಹೇಳಿದ್ದರು ಅದರಂತೆ ಚುನಾವಣೆಯಲ್ಲಿ 136 ಸೀಟುಗಳನ್ನು ಗೆದ್ದಿದೆ ಇದೆ ರೀತಿ ಉಪ ಚುನಾವಣೆಯಲ್ಲಿ ಸಮೀಕ್ಷೆಗಳು ಮಾಧ್ಯಮದವರು ಎಲ್ಲಾ ಪಕ್ಷಗಳು ಒಂದೂಂದು ಸೀಟು ಗೆಲ್ಲುತ್ತವೆ ಎಂದಿದ್ದರು ಆದರೆ ಶಿವಕುಮಾರ್ ಮಾತ್ರ ನಮ್ಮ ಪಕ್ಷ ಮೂರು ಗೆಲ್ಲುತ್ತದೆ ಎಂದು ಹೇಳಿದ್ದರು ಅದರಂತೆ ಉಪ ಚುನಾವಣೆಯಲ್ಲಿ ಮೂರು ಸ್ಥಾನವನ್ನು ಕಾಂಗ್ರೆಸ್ ಗೆದ್ದಿದೆ ಎಂದರು.

ರೈತ ಬೆಳೆ ವಿಮೆ ಕೇಂದ್ರ ಸರ್ಕಾರ ಯೋಜನೆಯಾಗಿದೆ ನಮ್ಮ ಕೃಷಿ ಇಲಾಖೆಯ ಅಧಿಕಾರಿಗಳು ಸದಾ ವಿಮಾ ಕಂಪನಿಗಳ ಸಂಪರ್ಕದಲ್ಲಿದ್ದಾರೆ. ಈಗಾಗಲೇ ಹಲವಾರು ಕಡೆಯಲ್ಲಿ ವಿಮೆಯನ್ನು ನೀಡಲಾಗಿದೆ ಇದರ ನಡುವೆಯೂ ಎಲ್ಲಿ ವಿಮೆ ಬಂದಿಲ್ಲ ಅಂತಹ ಕಡೆಗಳಲ್ಲಿ ವಿಮೆಯನ್ನು ಕೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ.

ಸಿಎಂ ಕುರ್ಚಿ ಕಿತ್ತಾಟದಲ್ಲಿ ಕಾಂಗ್ರೆಸ್ ಪತನ ಆಗಲಿದೆ ಎಂಬ ಶೆಟ್ಟರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಶೆಟ್ಟರ್ ಅವರಿಗೆ ಅನುಭವ ಹಾಗಾಗಿ ಅವರು ಹೇಳಿಕೊಳ್ಳುತ್ತಾರೆ. ಸಿಎಂ, ಡಿಸಿಎಂ ಹಾಗೂ ನಮ್ಮ ಪಕ್ಷದಲ್ಲಿ ಯಾವುದೇ ಸಮಸ್ಯೆಯಿಲ್ಲ.ಎಲ್ಲರೂ ಅವರ ವೈಯಕ್ತಿಕ ಹೇಳಿಕೆ ಹೇಳ್ಕೊಂಡಿದಾರೆ ಅಷ್ಟೆ.ಎಲ್ಲರೂ ಹೈಕಮಾಂಡ್ ನಿರ್ಧಾರಕ್ಕೂ ಬದ್ದರಾಗಿ ಇರುತ್ತೇವೆ.ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಏನೆಲ್ಲಾ ಆಯ್ತು ಅಂತ ನಿಮಗೂ ಗೊತ್ತಿದೆ.ಅದಕ್ಕೆ ಹೋಲಿಕೆ ಮಾಡಿದರೆ ನಮ್ಮ ಸರ್ಕಾರದಲ್ಲಿ 5% ಕೂಡ ಇಲ್ಲ. ಅಧಿಕಾರ ಇದ್ದಾಗ ಪಕ್ಷದಲ್ಲಿ ಒಳ ಜಗಳ ಸರ್ವೇ ಸಾಮಾನ್ಯ. ನನಗೆ ಯಾವ ಶಾಸಕರ ಬೆಂಬಲವೂ ಬೇಡ ಎಂದ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಶಿವಕುಮಾರ್ ಪಕ್ಷದ ಶಿಸ್ತಿನ ಸಿಪಾಯಿ ಇದ್ದಂತೆ.2023 ರಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಡಿಕೆಶಿ ಯವರ ಕೊಡುಗೆ ಅವಿಸ್ಮರಣೀಯ ಎಂದರು.

ಎಲ್ಲಾ ಶಾಸಕರಿಗೂ ಈ ವಿಷಯ ತಲೆಯಲ್ಲಿ ಇದೆ.ಸಿಎಂ, ಹೈಕಮಾಂಡ್ಗೂ ಇದು ಗೊತ್ತಿರುವ ವಿಚಾರ.ಅದು ಅವರ ಮಟ್ಟದಲ್ಲಿ ಚರ್ಚೆ ಆಗುವ ವಿಚಾರವಾಗಿದೆ.ಡಿಸಿಎಂ ಬಲಿಷ್ಠವಾಗಿದ್ದಾರೆ, ಸಿಎಂ ಸೇರಿದಂತೆ ಎಲ್ಲರೂ ಅವರ ಜೊತೆಗಿದೀವಿ.ಸುಭದ್ರವಾಗಿ 5 ವರ್ಷ ನಾವು ಅಧಿಕಾರ ಕೊಡುತ್ತೇವೆ. ಡಿಸಿಎಂ ಹೇಳಿದ್ದಾರೆ 2028 ಕ್ಕೂ ನಮ್ಮದೇ ಪಕ್ಷ ಅಧಿಕಾರಕ್ಕೆ ಬರಲಿದೆ… ಡಿಸಿಎಂ 2023, ಉಪ ಚುನಾವಣೆ ಎರಡಲ್ಲೂ ಪಕ್ಕಾ ಪ್ರೆಡಿಕ್ಟ್ ಮಾಡಿದ್ದರು.ಸರ್ಕಾರ ಸುಭದ್ರವಾಗಿದೆ ಯಾವುದೇ ಒಳ ಜಗಳ ಇಲ್ಲ ಎಂದು ಡಿಸಿಎಂ ಹೇಳಿದ್ದಾರೆ… ಹಾಗಾಗಿ ಯಾರೂ ಅತಂಕಪಡುವ ಅವಶ್ಯಕತೆ ಇಲ್ಲ ಎಂದರು.

ನಕ್ಸಲರ ಬಳಿಯೇ ಸರ್ಕಾರ ಸರೆಂಡರ್ ಆಗಿದೆ ಎಂಬ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಸಿಎಂ,ಡಿಸಿಎಂ ಬಳಿ ನಕ್ಸಲರು ಹೋಗಿದ್ರೋ, ಅವರೇ ಇವರ ಬಳಿ ಬಂದಿದ್ರೋ…? ಛಲವಾದಿ ನಾರಾಯಣಸ್ವಾಮಿ ಮೂಲತಃ ಕಾಂಗ್ರೆಸ್ ಪಕ್ಷದವರು. ಕೆಲ ಬೇಸರದಿಂದ ಬಿಜೆಪಿಗೆ ಹೋಗಿ ವಿಪಕ್ಷ ನಾಯಕರು ಆಗಿದ್ದಾರೆ.ಯಾರು ಶಾಂತಿ ಬಯಸುತ್ತಾರೆ ಅವರನ್ನು ಸರ್ಕಾರ ಸ್ವಾಗತ ಮಾಡುತ್ತದೆ.. ರಾಜ್ಯದಲ್ಲಿ ಅಹಿಂಸಾತ್ಮಕ ಆಡಳಿತ ಇರಬೇಕು ಎಂಬುದೇ ನಮ್ಮ ಉದ್ದೇಶ.ಮುಖ್ಯವಾಹಿನಿಗೆ ಅವರು ಬರುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ ಅದು ಆಗಿದೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸವೇ ವಿರೋದ ಪಕ್ಷದವರದ್ದು.ರಾಜ್ಯದ ಬಡ ಜನರಿಗೆ ಅವರಿಂದ ಒಂದೂ ಉತ್ತಮ ಕಾರ್ಯಕ್ರಮ ಕೊಟ್ಟಿಲ್ಲ. ಅದಕ್ಕೆ ಜನರು ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಸಚಿವರು ತಿಳಿಸಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading